ಅನಾಥ ಮಕ್ಕಳಿಗೆ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳೂ ರೂ.4000/- ಸರಕಾರದ ಸೌಲಭ್ಯ ನಿಜಾನಾ?
ಹೌದಾ? ನಿಜಾನಾ? ನಂಬಬೇಕಾ?
ಉಡುಪಿ ಜಿಲ್ಲೆ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಶೇಷ ವಿನೂತನವಾದ ಮಾಹಿತಿಯನ್ನು ವಾಟ್ಸಪ್ನನಲ್ಲಿ ಶೇರ ಮಾಡಿಕೊಂಡಿದ್ದಾರೆ.
ಸರಕಾರ ಅದು ಕೇಂದ್ರ ಸರಕಾರನೊ? ರಾಜ್ಯಾ ಸರಕಾರನೋ? ಗೊತ್ತಿಲ್ಲ. ವಿಷಯ ಮಾತ್ರ ತುಂಬಾ ಮನಮಿಡಿಯುವಂತಿದೆ ವಿಷಯವೆನೆಂದರೇ ಅನಾಥ ಮಕ್ಕಳಿಗೆ ಪ್ರತೀ ತಿಂಗಳು ರೂ. 4000/- ಕೊಡುತ್ತದೆ. ತಂದೆ ಇಲ್ಲದ ತಾಯಿಯಿಲ್ಲದ ಅಥವಾ ತಂದೆ – ತಾಯಿ ಇಲ್ಲದ ಅಥವಾ ರೋಗಗ್ರಸ್ಥ ತಂದೆ-ತಾಯಿ. ತಂದೆ-ತಾಯಿಯಿಂದ ಬೇರ್ಪಟ್ಟ ಒಟ್ಟಿನಲ್ಲಿ ಅನಾಥ ಚಿಕ್ಕ ಮಕ್ಕಳಿಗೆ ಅವರ ಜೀವನೋಪಾಯುಕ್ಕೆ ಸರಕಾರ ಪ್ರತಿ ತಿಂಗಳೂ ರೂ.4000/- ಕೊಡುತ್ತದೆ.
ಮಗು 1.ನೇ ವರ್ಷದಿಂದ 18 ವರ್ಷಗಳವರೆಗೆ ಸರಕಾರ ಸಹಾಯ ಧನ ಕೊಡುತ್ತದೆ.ಈ ವಿಷಯವು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಲ್ಲಿ ಪ್ರಜ್ಞಾವಂತ ನಾಗರೀಕರು ಎಲ್ಲಾ ಕಡೆ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯ,, ಕೇಂದ್ರ ಸರಕಾರದ ಯೋಜನೆಗಳನ್ನು ಕೆದಕಿ ತೆಗೆದು ಪ್ರಚಾರ ಮಾಡುವುದು. ಅವುಗಳ ಸೌಲಭ್ಯಗಳನ್ನು ಪಡೆಯುವದರಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ಮತ್ತು ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆ ಎಂದರೇ ಅದು ಉಡುಪಿ ಜಿಲ್ಲೆಯಾಗಿದೆ.
ಅನಾಥ ಮಕ್ಕಳಿಗೆ ಮಾಸಿಕ ನಾಲ್ಕು ಸಾವಿರ ಭತ್ತ್ಯೆ ಕೊಡುವ ವಿಷಯ ಕರ್ನಾಟ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗ ಸಂಬಂಧಿಸಿದೆ. ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರೂ ಈ ವಿಷಯ ಧೃಢೀಕರಿಸಿಕೊಂಡು ತಮ್ಮ ಅಕ್ಕ-ಪಕ್ಕದಲ್ಲಿರುವ ಫಲಾನುಭವಿಗಳಿಗೆ ತಿಳಿಸಿರಿ ಸೌಲಭ್ಯ ಪಡೆದುಕೊಳ್ಳಲು ಸಹಾಯವಾಗಲಿ..
ಮೊದಲು ವಿಷಯ ಮನದಟ್ಟು ಮಾಡಿಕೊಳ್ಳಲು ಮನವಿ ಮಾಡಿಕೊಳ್ಳುತ್ತೆನೆ



