ಆಧುನಿಕ ಯುಗದ ದಾನಶೂರ, ಸಾಮಾಜಿಕ ಕಳಕಳಿಯ ಶ್ರೀ ತಿಮ್ಮಪ್ಪ ವಕೀಲರು ಬೆಂಗಳೂರು.
ಆಧುನಿಕ ಯುಗದ ದಾನಶೂರ, ಸಾಮಾಜಿಕ ಕಳಕಳಿಯ ಶ್ರೀ ತಿಮ್ಮಪ್ಪ ವಕೀಲರು ಬೆಂಗಳೂರು.
ಕೆರೆಯ ನೀರನೂ ಕೆರೆಗೆ ಚೆಲ್ಲಿ ವರವ ಪಡೆಯೋ ಮನುಜ ಎನ್ನುವ ದಾಸರ ವಾಣಿಯನ್ನು ಅಕ್ಷರಶಃ ತಮ್ಮ ಜೀನದಲ್ಲಿ ಅಳವಡಿಸಿಕೊಂಡು ಅದನ್ನು ನಿತ್ಯ ಜೀವನದಲ್ಲಿ ಪಾಲಿಸುತ್ತಾ ಸಾಗುತ್ತಿರುವ ಶ್ರೀ ತಿಮ್ಮಪ್ಪ ವಕೀಲರು ಎಲೆ ಮರೆಯ ಕಾಯಿಯಂತೆ ಎಡಬಿಡದೇ, ಅನುಚಾನವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಎನಗಿಂತ ಕಿರಿಯರಿಲ್ಲ ಶಿವಭಕ್ತನಿಗಿಂತ ಹಿರಿಯರಿಲ್ಲ ಎಂಬ ಮಾತು ಶ್ರೀ ತಿಮ್ಮಪ್ಪಾಜೀ ಬೆಂಗಳೂರು ಇವರಿಗೆ ಸಲ್ಲುತ್ತದೆ. ಬೆಂಗಳೂರು ಮಹಾನಗರದಲ್ಲಿ ದೀನ, ದಲಿತರ, ಅಸಹಾಯಕರ, ದಿಕ್ಕಿಲ್ಲದವರಿಗೆ ಅನಾಥಾಶ್ರಮ ಸ್ಥಾಪಿಸಿದ್ದಾರೆ. ಹಲವಾರು ಆಶ್ರಮಗಳಿಗೆ ಕೊಡುಗೈ ದಾನಿಯಾಗಿದ್ದಾರೆ. ಬಡವರಿಗಾಗಿ ಹಗಲಿರುಳು ದುಡಿಯುತ್ತಿರುವ ಅದರಲ್ಲೂ ವಕೀಲ ವೃತ್ತಿಯೊಂದಿಗೆ ಸಾಮಾಜಿಕ ಕೆಲಸಗಳು ಮಾಡುವುದೆಂದರೇ ಈ ವೇಗದ ಆಧುನಿಕ ಯುಗದಲ್ಲಿ ಅಸಾಧ್ಯವಾದ ಕೆಲಸವೇ ಸರಿ. ಆದರೇ ಶ್ರೀ ತಿಮ್ಮಪ್ಪನವರು ವಕೀಲ ವೃತ್ತಿ ಮತ್ತು ಸಾಮಾಜಿಕ ಕೆಲಸ ಮಾಡುತ್ತಾ ಎರಡು ದೋಣಿಗಳಲ್ಲಿ ಪಯಣಿಸುತ್ತಿರುವುದು ಸೂಜಿಗದ ಮಾತೇ ಆಗಿದೆ.
ಬೆಂಗಳೂರು ಮಹಾನಗರದ ವೇಗದ ಜೀವನದಲ್ಲಿ ಅದ್ಯಾಗೆ ವೃತ್ತಿಯೊಂದಿಗೆ ಪ್ರವೃತ್ತಿಯನ್ನೂ ಅಳವಡಿಸಿಕೊಂಡು ನಿತ್ಯೆ ಕಾಯಕ ಮಾಡುತ್ತಿರಾ? ಟೆನ್ಶನ್ ಆಗುವುದಿಲ್ಲವೇ? ಎಂದು ಪ್ರಶ್ನಿಸಿದರೇ.
ಅಯ್ಯೋ, ಖಾಲಿ ಕುಳಿತರೇನೆ ನನಗೆ ಟೆನ್ಶನ್ ಆಗುತ್ತದೆ. ಕ್ಷಣವೂ ಬಿಡದೇ ಅನುದಿನವೂ ದುಡಿಯುತ್ತಿದ್ದರೇ ನೆಮ್ಮದಿ ಸಿಕ್ಕುತ್ತದೆ ” ಖಾಲಿ ಕುಳಿತುಕೊಳ್ಳುವುದು ಸೋಮಾರಿಯ ಲಕ್ಷಣ A lazy people’s mind is a factory of a thousand devils. ಎಂದು ಹಿರಿಯರು ಅನ್ನುತ್ತಾರೆ . ಅಲ್ಲದೇ ” ಕಾಯಕವೇ ಕೈಲಾಸ ” ಎಂದು ೧೩ ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣ ಹೇಳಿದ್ದಾರೆ. ದೇಹದಲ್ಲಿ ಉಸಿರು ಇರುವವರೆಗೂ ಏನಾದರೂ ಮಾಡುತ್ತಲೇ ಇರಬೇಕು ಎಂದು ನಗುತ್ತಾರೆ
ವಕೀಲರು ಶ್ರೀ ತಿಮ್ಮಪ್ಪನವರು
ಶ್ರೀ ತಿಮ್ಮಪ್ಪನವರ ಬದುಕು ಬರಹದಂತಿದೆ ಮುಂದಿನ ದಿನಗಳಲ್ಲಿ ಇವರ ಕಾಯಕ, ಸಾಧನೆ, ಸಾಮಾಜಿಕ ಕಾರ್ಯಗಳ ಹಲವಾರು ಮಜಲುಗಳನ್ನು ಓದುಗರ ಮುಂದಿಡುತ್ತೆವೆ.



