ಕನಿಷ್ಠ 25 ಮಂದಿ ಸಚಿವರ ಸ್ಥಾನ ನೀಡಬೇಕು – ರಾಷ್ಟ್ರೀಯ ಅಹಿಂದ ಸಂಘಟನೆ ಒತ್ತಾಯ.

ಕನಿಷ್ಠ 25 ಮಂದಿ ಸಚಿವರ ಸ್ಥಾನ ನೀಡಬೇಕು – ರಾಷ್ಟ್ರೀಯ ಅಹಿಂದ ಸಂಘಟನೆ ಒತ್ತಾಯ.
ಬೆಂಗಳೂರು ಫೆಬ್ರವರಿ 26; ರಾಜ್ಯದಲ್ಲಿ ಅಹಿಂದ ಸಮುದಾಯಗಳಿಗೆ ಮಂತ್ರಿಮಂಡಲದಲ್ಲಿ ನ್ಯಾಯಸಮ್ಮತ ಪ್ರತಿನಿಧಿತ್ವ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತುರ್ತಾಗಿ ಗಮನ ಹರಿಸಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ ಸರ್ಕಾರ ವನ್ನು ಒತ್ತಾಯಿಸಿದರು.
ರಾಷ್ಟ್ರೀಯ ಅಹಿಂದ ಓಬಿಸಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಮುತ್ತಣ್ಣ ಶಿವಳ್ಳಿ , ರಾಷ್ಟ್ರೀಯ ಅಹಿಂದ ಓ ಬಿ ಸಿ ಸಂಘಟನೆ ರಾಜ್ಯ ಓ ಬಿ ಸಿ ಅಧ್ಯಕ್ಷರು ಮೋಹನ್ ಕುಮಾರ್ ಮಾತನಾಡಿ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 75% ರಷ್ಟು ಅಹಿಂದ ಸಮುದಾಯಗಳು ವಿಶೇಷವಾಗಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಪ್ರಮುಖ ಭಾಗವನ್ನು ಹೊಂದಿದ್ದರೂ, ಪ್ರಸ್ತುತ ರಾಜ್ಯ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರತಿನಿಧಿತ್ವ ದೊರಕಿಲ್ಲ ಎಂದು ದೂರಿದರು . ಈಗ ಸಚಿವ ಸಂಪುಟ ಪುನರ್ರಚನೆ ನಡೆಯುತ್ತಿರುವ ಹಂತದಲ್ಲಿ, ಕಾಂಗ್ರೆಸ್ ಹೈಕಮಾಂಡ್ ಕನಿಷ್ಠ 25 ಮಂದಿ ಸಚಿವರನ್ನು ಅಹಿಂದ ಸಮುದಾಯಗಳಿಂದ ಅವಕಾಶ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದರು.
ವಿವಿಧ ಮಂಡಳಿ ಹಾಗೂ ನಿಗಮಗಳ ನೇಮಕಾತಿಗಳಲ್ಲಿ ಅಹಿಂದ ಸಮುದಾಯಗಳ ಪಾಲು ಜನಸಂಖ್ಯೆ ಅನುಪಾತಕ್ಕೆ ತಕ್ಕಂತೆ ಇರಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖ ಬೆಂಬಲ ನೀಡಿರುವ ಅಹಿಂದ ಸಮುದಾಯಗಳು ಅಧಿಕಾರ ಹಂಚಿಕೆಯಲ್ಲಿ ಹಿಂಬದಿಗೆ ತಳ್ಳಲ್ಪಡುವುದು ನ್ಯಾಯಸಮ್ಮತವಲ್ಲ ಎಂದು ಅನುದಾನಗಳ ಹಂಚಿಕೆ ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿಯೂ ಅಹಿಂದ ಸಮುದಾಯಗಳಿಗೆ ಸಮರ್ಪಕ ಪಾಲು ದೊರಕಬೇಕು ಎಂದು ಸಾಮಾಜಿಕ ನ್ಯಾಯದ ತತ್ವಗಳು ಕೇವಲ ಘೋಷಣೆಗಳಲ್ಲಿ ಸೀಮಿತವಾಗದೇ ಎಂದರು. ಆಡಳಿತದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಬೇಕು ಎಂದು ಉದಾಹರಣೆಗೆ
ಕಾಂಷಿರಾಮ್ ಅವರು ಹೇಳಿದಂತೆ
ಆದರೆ ಇದೇ ಪರಿಸ್ಥಿತಿ ಇಂದು ಕರ್ನಾಟಕದಲ್ಲಿ ಕಂಡು ಬರುತ್ತಿದೆ ಎಂಬುದು ನೋವುಂಟು ಮಾಡುತ್ತದೆ ಎಂದರು .ಕಾಂಗ್ರೆಸ್ ಪಕ್ಷದ ವಿವಿಧ ಮುಂಚೂಣಿ ಘಟಕಗಳಲ್ಲಿಯೂ ಎಲ್ಲಾ ಅಧ್ಯಕ್ಷ ಸ್ಥಾನಗಳಲ್ಲಿ ಅಹಿಂದ ವರ್ಗದವರಿಗೆ ಸಮರ್ಪಕ ಅವಕಾಶ ದೊರೆತಿಲ್ಲ. ಇದು ಸಂಘಟನಾ ಮಟ್ಟದಲ್ಲಿಯೂ ಸಮಾನತೆಯ ಕೊರತೆಯನ್ನು ತೋರಿಸುತ್ತದೆ.ಈ ಸಂದೇಶವು ಕೇವಲ ಘೋಷಣೆ ಅಲ್ಲ; ಇದು ಸಮಾನಾಧಿಕಾರದ ಹಕ್ಕಿನ ಘೋಷಣೆ. ಅಹಿಂದ ಸಮುದಾಯಗಳ ಮತದಾರ ಶಕ್ತಿಗೆ ತಕ್ಕ ಪ್ರತಿನಿಧಿತ್ವ ನೀಡದೇ ಇರುವ ರಾಜಕೀಯ ವ್ಯವಸ್ಥೆ ದೀರ್ಘಕಾಲ ಉಳಿಯುವುದಿಲ್ಲ ಎಂದರು.
ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ತಕ್ಷಣವೇ ಜನಸಂಖ್ಯೆ ಅನುಪಾತದ ಆಧಾರದ ಮೇಲೆ ಸಚಿವ ಸ್ಥಾನಗಳು, ಮಂಡಳಿ-ನಿಗಮಗಳ ನೇಮಕಾತಿಗಳು ಹಾಗೂ ಅನುದಾನ ಹಂಚಿಕೆಯಲ್ಲಿ ನ್ಯಾಯ ಒದಗಿಸಬೇಕು ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಮತ್ತೊಮ್ಮೆ ಆಗ್ರಹಿಸುತ್ತದೆ ಎಂದರು.
ಹಿಂದುಳಿದ ಸಮುದಾಯಕ್ಕೆ ಸೇರಿದ ಸಮರ್ಥ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.
ರಾಷ್ಟ್ರೀಯ ಅಹಿಂದ ಸಂಘಟನೆ ರೈತಮೋರ್ಚಾ ಕಾರ್ಯಾಧ್ಯಕ್ಷ ಜಯರಾಮ್ ಶೆಟ್ಟಿ,ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಬಿ.ಶಿವಣ್ಣ,ಪ್ರಜಾ ಸಮಿತಿ ಅಧ್ಯಕ್ಷ ಮಹೇಶ್ ರಾವ್ ಚವ್ಹಾಣ್,ಬೆಂಗಳೂರು ನಗರ ಅಧ್ಯಕ್ಷ ಬಸವಯ್ಯ ನವರು ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.



