ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ನನ್ನ ಕ್ರಮ ಸಂಖ್ಯೆ 10 ಇದೆ ತಾವು ನನಗೆ ಪ್ರಥಮ ಪ್ರಶಸ್ತಿ ಮತವನ್ನು ನೀಡಿ.

ಮಾನ್ಯ ಹಿರಿಯ ವಕೀಲರೇ ಮತ್ತು ಯುವ ವಕೀಲ ಮಿತ್ರರೇ ನಾನು ಬಗಲಿ ಸಂತೋಷ್ ಕುಮಾರ್ ಬಸಪ್ಪ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ದಿನಾಂಕ 11 ಮಾರ್ಚ್ 2026ರಂದು ಭಾನುವಾರ ನಡೆಯಲಿರುವ ರಾಜ್ಯ ವಕೀಲರ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ನನ್ನ ಕ್ರಮ ಸಂಖ್ಯೆ 10 ಇದೆ ತಾವು ನನಗೆ ಪ್ರಥಮ ಪ್ರಶಸ್ತಿ ಮತವನ್ನು ನೀಡಿ ಅತಿ ಹೆಚ್ಚಿನ ಮತಗಳಿಂದ ಆರಿಸಿ ತರಲು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ನನ್ನ ಸಂಕಲ್ಪ( ಪ್ರಣಾಳಿಕೆ )
1) ಕರ್ನಾಟಕದ ವಕೀಲರ ಮತ್ತು ವಕೀಲರ ಕುಟುಂಬ ಸದಸ್ಯರ ಸಂಪೂರ್ಣ ಆರೋಗ್ಯ ವಿಮೆ ಯೋಜನೆ ಜಾರಿಗೆ ತರಲು ಸಂಕಲ್ಪ ಮಾಡುತ್ತೇನೆ.
2) ಉತ್ತರ ಕರ್ನಾಟಕ ವಕೀಲರ ಆಡಳಿತ ತೊಂದರೆ ನಿವಾರಿಸಲು ಧಾರವಾಡ ಮತ್ತು ಕಲಬುರ್ಗಿಯಲ್ಲಿ ರಾಜ್ಯ ವಕೀಲರ ಪರಿಷತ್ ಕಚೇರಿಯ ಶಾಖೆ ಪ್ರಾರಂಭಿಸಲು ಸಂಕಲ್ಪ.
3) ಪೊಲೀಸ್ ಇಲಾಖೆಯಲ್ಲಿ ನಡೆಯುವ ನೇಮಕಾತಿ ಪ್ರಕ್ರಿಯೆಯಲ್ಲಿ ಕಾನೂನು ಪದವಿದರರಿಗೆ ಶೇಕಡ 30 ಪ್ರತಿಶತ ಮೀಸಲಾತಿ ನೀಡಲು ಸರಕಾರದ ಮೇಲೆ ಕ್ರಮ ಜರುಗಿಸಲು ಸಂಕಲ್ಪ.
4) ಯುವ ವಕೀಲರು ಪದವಿ ಪಡೆದ ನಂತರ ನ್ಯಾಯಾಂಗ ಇಲಾಖೆಯಲ್ಲಿ ನಡೆಸುವ ತರಬೇತಿಯ ಮಾದರಿಯಲ್ಲಿ ನವ ವಕೀಲರಿಗೂ ಎರಡು ತಿಂಗಳವರೆಗೆ ಉಚಿತ ತರಬೇತಿ ನೀಡಲು ವಿಭಾಗದವರು ತರಬೇತಿ ಸಂಸ್ಥೆ ಸ್ಥಾಪಿಸಲು ಸಂಕಲ್ಪ.
5) ಉತ್ತರ ಕರ್ನಾಟಕ ವಕೀಲರಿಗೆ ಬೆಂಗಳೂರು ನಗರದಲ್ಲಿ ಇರುವ ಐಟಿಬಿಟಿ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರ ಹುದ್ದೆಯ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಆಗ್ರಹಿಸುವ ಸಂಕಲ್ಪ.
6) ಬೆಂಗಳೂರಿನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದ ವಕೀಲರ ಸಲುವಾಗಿ ವಸತಿ ಗ್ರಹಗಳನ್ನು ಸ್ಥಾಪಿಸಿ ಕಡಿಮೆ ಬಾಡಿಗೆ ದರದಲ್ಲಿ ನೀಡುವಂತೆ ವ್ಯವಸ್ಥೆ ರೂಪಿಸುವ ಸಂಕಲ್ಪ.
7) ನವ ವಕೀಲರು ಸನದ್ದು ಪಡೆಯಲು ಬೆಂಗಳೂರಿಗೆ ಹೋಗಲು ಆಗುವ ಖರ್ಚು ಮತ್ತು ಸಮಯ ವ್ಯಾಯ ತಪ್ಪಿಸುವ ಉದ್ದೇಶದಿಂದ ಧಾರವಾಡ ಮತ್ತು ಕಲಬುರ್ಗಿಯಲ್ಲಿ ಸನದ್ದು ನೀಡುವ ವ್ಯವಸ್ಥೆ ರೂಪಿಸಲು ಸಂಕಲ್ಪ.
8) ಪ್ರತಿ ತಿಂಗಳು 50 ಸಾವಿರ ರೂಪಾಯಿಗಳಂತೆ ಪ್ರತಿ ವಕೀಲರ ಸಂಘಗಳಿಗೆ ಮೂಲಭೂತ ಸೌಕರ್ಯ ಮತ್ತು ನಿರ್ವಹಣೆಗಾಗಿ ಅನುದಾನ ನೀಡುವಂತೆ ಕ್ರಮವಹಿಸುವಂತೆ ಸರಕಾರಕ್ಕೆ ಆಗ್ರಹಿಸುವ ಸಂಕಲ್ಪ.
9) ಮಹಿಳಾ ನ್ಯಾಯವಾದಿಗಳಿಗೆ ವಕೀಲರ ಸಂಘದಲ್ಲಿ ಪ್ರತ್ಯೇಕ ಕೊಠಡಿ ಮತ್ತು ಗ್ರಂಥಾಲಯ ಸ್ಥಾಪಿಸುವ ಸಂಕಲ್ಪ ಹೀಗೆ ಹಲವಾರು ಸಂಕಲ್ಪಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಆದ್ದರಿಂದ ತಾವು ನನಗೆ ಪ್ರಥಮ ಆದ್ಯತೆಯ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಧನ್ಯವಾದಗಳು




