ಕನ್ನಡ ಭಾಷೆಯಲ್ಲಿ ಪೂಜೆ ಅರಾಧನೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದಿಂದ ಪ್ರತಿಭಟನಾ ಸತ್ಯಾಗ್ರಹ.

ಗುರುಮಠ ಸ್ಥಾಪನೆ, ಕನ್ನಡದಲ್ಲಿ ಪ್ರಾರ್ಥನೆ, ಕನ್ನಡಿಗ ಧರ್ಮಗುರು, ಕನ್ನಡ ಭಾಷೆಯಲ್ಲಿ ಪೂಜೆ ಅರಾಧನೆಗೆ ಒತ್ತಾಯಿಸಿ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದಿಂದ ಪ್ರತಿಭಟನಾ ಸತ್ಯಾಗ್ರಹ
ಬೆಂಗಳೂರು: ಫೀಡಂ ಪಾರ್ಕ್ಅವರಣದಲ್ಲಿ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ವತಿಯಿಂದ ಮೂರು ಬೇಡಿಕೆಗಳ ಈಡೇರಿಕೆಗಳಾದ ಪ್ರಾದೇಶಿಕ ಗುರುಮಠ ಸ್ಥಾಪನೆ, ಸಂತ ಪೇತ್ರರ ಗುರುಮಂದಿರದ ಸಂಪೂರ್ಣ ಆಡಳಿತ ಕರ್ನಾಟಕ ಧರ್ಮಾಧ್ಯಕ್ಷರುಗಳಿಗೆ ಮೀಸಲು.
ಈ ಕ್ಷಣದಿಂದ ಕರ್ನಾಟಕ ಧರ್ಮಸಭೆಗೆ ಕನ್ನಡ ಗುರುಗಳನ್ನೇ ಧರ್ಮಾಧ್ಯಕ್ಷರನ್ನಾಗಿ ನೇಮಿಸಲು ಒತ್ತಾಯಿಸಿ., ವ್ಯಾಟಿಕನ್ II ಆದೇಶದಂತೆ ಕರ್ನಾಟಕದಾದ್ಯಂತ ಕಥೋಲಿಕ ಚರ್ಚುಗಳಲ್ಲಿ ಕನ್ನಡ ಭಾಷೆಯಲ್ಲಿ ಪೂಜೆ, ಆರಾಧನಾ ವಿಧಿಗಳನ್ನು ಕಡ್ಡಾಯವಾಗಿ ಪಾಲಿಸಲು ಮುಖ್ಯಮಂತ್ರಿಗಳಿಗೆ ಮತ್ತು ಆರ್ಚ್ ಬಿಷಪ್ ರವರಿಗೆ ಒತ್ತಾಯಿಸಿ ಪ್ರತಿಭಟನಾ ಧರಣಿ ಸತ್ಯಾಗ್ರಹ.
ರಾಜ್ಯಸಭಾ ಮಾಜಿ ಸದಸ್ಯರು, ಚಿಂತಕರಾದ ಡಾ||ಎಲ್.ಹನುಮಂತಯ್ಯರವರು, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಡಾ||ಮನುಬಳಿಗಾರ್, ಡಾ||ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಸಾ.ರಾ.ಗೋವಿಂದು, ಕನ್ನಡ ಪರ ಹೋರಾಟಗಾರರುಗಳಾದ ರಾ.ನಂ.ಚಂದ್ರಶೇಖರ್, ವ.ಚ.ಚನ್ನೇಗೌಡರು, ಸಾಹಿತಿ ಪದ್ಮನಿ ನಾಗರಾಜು,ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷರಾದ ಡಾ.ಆರ್.ಎ.ಪ್ರಸಾದ್, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ಗುರುದೇವ್ ನಾರಾಯಣ್ ಕುಮಾರ್ ರವರು, ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘದ ಅಧ್ಯಕ್ಷರಾದ ಎ.ಐಸಾಕ್ ರವರು ಪ್ರತಿಭಟನಾ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಎಲ್.ಹನುಮಂತಯ್ಯ ರವರು ಮಾತನಾಡಿ ಕನ್ನಡ ಪರ ಹೋರಾಟಗಾರರು ಸಜ್ಜನರು. ಕನ್ನಡ ಭಾಷಿಕ ಕ್ರೈಸ್ತರು ನ್ಯಾಯಯುತ ಬೇಡಿಕೆ ಇಟ್ಟಿದ್ದಾರೆ. ಭಕ್ತನ ಭಾಷೆ , ತಿಳಿದಿರುವ ಭಾಷೆ ದೇವರ ಭಾಷೆಯಾಗಬೇಕು. ಭಕ್ತ ಮತ್ತು ದೇವರ ನಡುವಿನ ಸಂಭಂದ ಭಾಷೆಯಾಗಬೇಕು.
ಕರ್ನಾಟಕದಲ್ಲಿ ಕನ್ನಡ ಧರ್ಮಾಕ್ಷರನ್ನ ನೇಮಕ ಮಾಡಬೇಕು. ಸ್ಥಳೀಯ ಭಾಷೆಯಲ್ಲಿ ತಿಳಿಸಬೇಕಾಗಿರುವುದು ಅವಶ್ಯಕತೆ, ಕರ್ತವ್ಯವಾಗಿದೆ. ಅರ್ಥವಾಗದ ಸಂಸ್ಕೃತದಲ್ಲಿ ಹೇಳಿದರೆ ಕನ್ನಡಿಗರಿಗೆ ಅರ್ಥವಾಗುವುದಿಲ್ಲ.
ಕ್ರೈಸ್ತ ಹೋರಾಟಗಾರರು ನಮ್ಮ ಚರ್ಚ್ ನಲ್ಲಿ ಕನ್ನಡದಲ್ಲಿ ಪೂಜಾ ವಿಧಾನಗಳು ನೇರವೆರಬೇಕು ಎಂಬುದು ಆಶಯವಾಗಿದೆ. ರೆವಡೆಂಡ್ ಕಿಟಲ್ ಮೊದಲ ಕನ್ನಡ ನಿಘಂಟು ಕೊಟ್ಟ ಕ್ರೈಸ್ತ ಸಮುದಾಯದವರು.
ಧರ್ಮಾಧ್ಯಕ್ಷರು ಇದರ ಸತ್ಯ ಅರಿತು ಕನ್ನಡ ಭಾಷೆ ಕಲಿಯಬೇಕು ಮತ್ತು ಕನ್ನಡದಲ್ಲಿ ಭೋದನೆ ಮಾಡುವವರನ್ನ ನೇಮಕ ಮಾಡಬೇಕು. ಹೊರ ರಾಜ್ಯದಿಂದ ಸಾವಿರಾರು ಕಿಲೋ ಮೀಟರ್ ಕೆಲಸ ಅರಿಸಿ ಬರುತ್ತಾರೆ ರಾಜ್ಯಕ್ಕೆ ಬರುತ್ತಾರೆ ಅವರು ಕನ್ನಡ ಕಲಿಯಬೇಕು. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿದ್ದಾರೆ, ಎಲ್ಲ ಭಾಷೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರ ಹಿಂದಿ ಕಲಿಯವುದು ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸಿದ್ದಾರೆ.
ಎಸ್.ಎಸ್.ಎಲ್.ಸಿ ಪರೀಕ್ಷೆ ಹಿಂದಿ ಭಾಷೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಇಷ್ಟ ಇದ್ದವರು ಹಿಂದಿ ಕಲಿಯಿರಿ.
ಪ್ರಾದೇಶಿಕ ಗುರುಮಠ ಸ್ಥಾಪನೆ, ಕನ್ನಡದಲ್ಲಿ ಭೋದನೆ ಮತ್ತು ರಾಜ್ಯದ ಧರ್ಮಾಧ್ಯಕ್ಷರು ಸ್ಥಳೀಯ ಮಟ್ಟದಲ್ಲಿ ಆಡಳಿತ ನಡೆಸಬೇಕು, ಕನ್ನಡ ಭಾಷೆಯಲ್ಲಿ ಪೂಜಾ ವಿಧಾನ ಇವುಗಳು ನ್ಯಾಯಯುತ ಬೇಡಿಕೆಯಾಗಿದೆ.
ಸಾ.ರಾ.ಗೋವಿಂದು ರವರು ಮಾತನಾಡಿ 1983ರಿಂದ ಕ್ರೈಸ್ತರ ಬೇಡಿಕೆಗಳ ಕುರಿತು ಹೋರಾಟ ಮಾಡುತ್ತಿದ್ದೇವೆ. 1991ಕಾವೇರಿ ಗಲಾಟೆಯಲ್ಲಿ ಕನ್ನಡಿಗರ ತಾಕತ್ತು ಏನು ಎಂಬುದು ದೇಶಕ್ಕೆ ಗೊತ್ತಾಯಿತು. ಅಂದು ಕನ್ನಡಿಗರ ಮಾಡಿದ್ದು ಸರಿ, ತಮಿಳರ ದಬ್ಬಾಳಿಕೆ ನಿಂತಿತು.
ಕ್ರೈಸ್ತ ದೇವಾಲಯದಲ್ಲಿ ಕನ್ನಡ ಭಾಷೆಯಲ್ಲಿ ಭೋದನೆ ಪ್ರಾರ್ಥನೆ, ಸ್ಥಳೀಯ ಕನ್ನಡಿಗರನ್ನ ಧರ್ಮಗುರುಗಳನ್ನು ನೇಮಕ ಮಾಡಬೇಕು. ಉತ್ತರ ಭಾರತದವರ ದಬ್ಬಾಳಿಕೆ ಇತ್ತಿಚೇಗೆ ಹೆಚ್ಚಾಗಿದೆ.
ಧರ್ಮಗುರುಗಳಲ್ಲಿ 9 ಕೊಂಕಣಿ, 3 ಮಲಯಾಳಿ 1ಒಬ್ಬ ಕನ್ನಡಿಗ ಧರ್ಮಗುರು ಇದ್ದಾರೆ ಎಂಬುದು ಶೋಚನೀಯ ಸಂಗತಿ ಎಂದು ಹೇಳಿದರು. ಪ್ರಧಾನಿ, ಗೃಹ ಸಚಿವರು ಹಿಂದೆ ಹೇರಿಕೆ ಕಡ್ಡಾಯ ಮಾಡಬೇಡಿ ಎಂದು ಹೇಳಿದರು
ಡಾ.ಮನು ಬಳಿಗಾರ್ ರವರು ಮಾತನಾಡಿ ಕನ್ನಡಿಗ ಕ್ರೈಸ್ತರ ಹೋರಾಟಕ್ಕೆ ಜಯಸಿಗಲಿದೆ. ಕನ್ನಡಿಗ ಕ್ರೈಸ್ತರು ಕೇಳುತ್ತಿರುವುದು ಚರ್ಚ್ ನಲ್ಲಿ ಕನ್ನಡ ಭಾಷೆಯಲ್ಲಿ ಪ್ರಾರ್ಥನೆ ಮಾಡಬೇಕು, ಕನ್ನಡದಲ್ಲಿ ಆಡಳಿತವಿರಬೇಕು.
ವ್ಯಾಟಿಕನ್ ಇದರ ಕುರಿತು ತಿರ್ಮಾನವಾಗಿದೆ ಸ್ಥಳೀಯ ಭಾಷೆಯಲ್ಲಿ ನಡೆಯಬೇಕು, ಅನ್ಯ ಭಾಷಿಕ ಧರ್ಮಗುರುಗಳು ದಬ್ಬಾಳಿಕೆ ಮಾಡಬಾರದು ಎಂದು ಹೇಳಿದರು.
ವ.ಚ.ಚನ್ನೇಗೌಡರವರು ಮಾತನಾಡಿ ವಾಟಿಕನ್ ಆದೇಶದಂತೆ ಕನ್ನಡಿಗರನ್ನ ನೇಮಕ ಮಾಡಬೇಕು. ಮಂಗಳೂರು, ಉಡುಪಿಯಲ್ಲಿ 11ಚರ್ಚ್ ಗಳಲ್ಲಿ ಕನ್ನಡದಲ್ಲಿ ಪ್ರಾರ್ಥನೆಯಾಗುತ್ತಿಲ್ಲ.
ಮೈಸೂರು ಮಹಾರಾಜರು ಕ್ರೈಸ್ತರಿಗೆ 28ಎಕರೆ ದಾನವಾಗಿ ಕೊಟ್ಟಿದ್ದಾರೆ ಅದನ್ನ ಮಾರಾಟ ಮಾಡುತ್ತಿಲ್ಲ.
ವಾಟಿಕನ್ ಕಳುಹಿಸುವ ಮೂವರು ಶಿಫಾರಸ್ಸು ಮಾಡುವ ಹೆಸರಿನಲ್ಲಿ ಕನ್ನಡಿಗರ ಹೆಸರು ಇರುವುದಿಲ್ಲ.
ಆರ್ಚ್ ಬಿಷಪ್ ಕನ್ನಡ ವಿರೋಧಿ ಧೋರಣೆ ಬಿಡಬೇಕು.
ಕ್ರೈಸ್ತರ ನ್ಯಾಯಯುತ ಬೇಡಿಕೆ ಈಡೇರಿಸಬೇಕು ಇಲ್ಲದೇ ಹೋದರೆ ಉಗ್ರ ಹೋರಾಟ ಖಚಿತ ಎಂದು ಹೇಳಿದರು.
ಕ್ರೈಸ್ತರ ಸಮುದಾಯದ ಚಿಂತಕರುಗಳಾದ ಡಾ.ಡೊಮನಿಕ್, ಪಿ.ಸಿ.ಅಂತೋಣಿಸ್ವಾಮಿ, ಡಾ.ರೀಟಾ ರೀನಿ, ವಂದನೀಯ ಮನೋಹರ್ ಪ್ರಸಾದ್, ಪ್ರಶಾಂತ್ ಇಗ್ನೇಷಿಯಸ್, ಸಂಘದ ಉಪಾಧ್ಯಕ್ಷರುಗಳಾದ ಅಂತೋಣಿರಾಜ್, ಜಾನ್ ಬಿಟ್ಟೋ ,ದೇವ್ ಕುಮಾರ್, ಬರ್ತಲೋಮಿಯೋ, ಜಾರ್ಜ್ ಕುಮಾರ್ ರವರು ಪಾಲ್ಗೊಂಡಿದ್ದರು.




