ಸುವರ್ಣ ಸಂಭ್ರಮ 2026 ರ ಪ್ರಯುಕ್ತ ವಿಶ್ವಕರ್ಮ ಸಮುದಾಯ ಭವನ ಲೋಕಾರ್ಪಣೆ

ಸುವರ್ಣ ಸಂಭ್ರಮ 2026 ರ ಪ್ರಯುಕ್ತ ವಿಶ್ವಕರ್ಮ ಸಮುದಾಯ ಭವನ ಲೋಕಾರ್ಪಣೆ
ಬೆಂಗಳೂರು. ಸುವರ್ಣ ಸಂಭ್ರಮ 2026 ರ ಪ್ರಯುಕ್ತ ವಿಶ್ವಕರ್ಮ ಸಮುದಾಯ ಭವನ ಲೋಕಾರ್ಪಣೆ ಮಾಡಲಿದ್ದಾರೆಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು. ದಕ್ಷಿಣ ಕನ್ನಡ ವಿಶ್ವಬ್ರಾಹ್ಮಣ ಸಂಘ (ನೋಂ) ಬೆಂಗಳೂರು ವತಿಯಿಂದ ಅಧ್ಯಕ್ಷರಾದ ತುಕಾರಾಮ್ ಆಚಾರ್ಯ, ಜಯಲಕ್ಷ್ಮಿ ಎಸ್ ಆಚಾರ್ಯ, ಶಶಿಕಾಂತ್ ಎಂ, ಮೋಹನ್ ಮಲ್ಲಮ್ಮಾರ್, ಮಂಜುನಾಥ್ ಆಚಾರ್ಯ ಮುಂತಾದವರು ಪತ್ರಿಕಾ ಗೋಷ್ಠಿ ನಡೆಸಿರುತ್ತಾರೆ.
ದಿನಾಂಕ 29ರಂದು ಬೆಳಿಗ್ಗೆ 7:30 ರಿಂದ ರಾತ್ರಿ 8 ಗಂಟೆಯ ವರೆಗು ಬೆಂಗಳೂರಿನ ಯಲಹಂಕ ಉಪನಗರದಲ್ಲಿರುವ ವಿಶ್ವಕರ್ಮೇಣ ಧಾಮ್ನೆ, ಸಿ ಎ 21 ಸೆಕ್ಟರ್ ಎ ರಲ್ಲಿ ಸುವರ್ಣ ಸಂಭ್ರಮ 2026 ರ ಪ್ರಯುಕ್ತ ವಿಶ್ವಕರ್ಮ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು, ಶ್ರೀ ವಿಶ್ವಕರ್ಮ ಜಗದ್ಗುರು ಪೀಠದ ಶಿವ ಸುಜ್ಞಾನ ತೀರ್ಥ ಮಹಾಸ್ವಾಮಿಗಳು, ಶಾಸಕರಾದ ಶ್ರೀ ಎಸ್ ಆರ್ ವಿಶ್ವನಾಥ್, ಮಾಜಿ ಕೇಂದ್ರ ಸಚಿವರಾದ ಶ್ರೀ ಎಮ್ ವೀರಪ್ಪ ಮೊಯ್ಲಿ ಮುಂತಾದ ಗಣ್ಯರು, ಸಮುದಾಯದವರು, ಸಂಘದ ಪದಾಧಿಕಾರಿಗಳು ಸೇರಿದಂತೆ ಸುಮಾರು 1200 ರಿಂದ 1500 ಜನ ಸೇರುವ ಬಗ್ಗೆ ಮಾಹಿತಿ ತಿಳಿಸಿರುತ್ತಾರೆ. ವರದಿ. ಮಂಜುಳಾ ರೆಡ್ಡಿ.



