ರಾಜಕೀಯ

ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಖರ್ಗೆಯವರ ಸ್ಥಾನವನ್ನು ತುಂಬುವ ಅಭ್ಯರ್ಥಿ ಇಲ್ಲ.

ಸನ್ಮನ್ಯಶ್ರೀ ಡಾಕ್ಟರ್ ಮಲ್ಲಿಕಾರ್ಜುನ್ ಖರ್ಗೆ ಅವರು ಕಲ್ಬುರ್ಗಿ ಲೋಕಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಸೋತು ರಾಜ್ಯಸಭಾ ಸದಸ್ಯರಾಗಿ ಈಗ ದೆಹಲಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಮೇಲೆ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಪರಿಸ್ಥಿತಿ ಚಿಂತಾ ಜನಕವಾಗಿದೆ ಇಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಇನ್ನೊಬ್ಬ ನೇತಾರರು ಖರ್ಗೆ ಅವರಿಗೆ ಸರಿಸಮಾನರಾಗಿ ದೊರೆಯಲಾರರು ಎಂಬುದು ನನ್ನ ಭಾವನೆಯಾಗಿದೆ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಸ್ಥಾನಗಳನ್ನು ಗೆಲ್ಲಿಸಿ ಕೊಡುವುದು ಖರ್ಗೆ ಅವರಿಗೆ ಒಂದು ಸವಾಲಾಗಿದೆ ಮನೆಗೆಲ್ಲಲಾರದವರು ಮಾರು ಗೆಲ್ಲುವರೇ ಎಂಬ ಗಾದೆ ಮಾತಿನಂತೆ ಪರಿಸ್ಥಿತ ನಿರ್ಮಾಣವಾಗಿದೆ

ತಮ್ಮ ಸ್ವಕ್ಷೇತ್ರದಲ್ಲಿ ತಾವೇ ಸೋಲು ಅನುಭವಿಸಿರುವುದರಿಂದ
ಮತ್ತು ಮುಂದಿನ ದಿನಗಳಲ್ಲಿ ನಗಳಲ್ಲಿ ಕಲಬುರ್ಗಿಯೊಳಗೊಂಡಂತೆ ಈ ಭಾಗದ ಎಲ್ಲ ಲೋಕಸಭಾ ಸದಸ್ಯ ಸ್ಥಾನಗಳನ್ನು ಗೆಲ್ಲಿಸುವ ಹೊಣೆ ಅವರ ಮೇಲಿರುವದರಿಂದ ಅವರು ಈಗ ಅಖಿಲ ಭಾರತ ಮಟ್ಟದ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ ಇಲ್ಲಿಯ ಜವಾಬ್ದಾರಿಯನ್ನು ನಿರ್ವಹಿಸುವ ಅವರ ಸ್ಥಾನವನ್ನು ತುಂಬುವ ದಕ್ಷ ಹಾಗೂ ಸಮರ್ಥ ವ್ಯಕ್ತಿಯನ್ನು ನಮಗೆ ಕಾಣಲು ಸಿಗುತ್ತಿಲ್ಲ ಹೀಗಾಗಿ ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಸೇನಾಪತಿಯ ಅವಶ್ಯಕತೆ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ ಅಷ್ಟೇ ಅಲ್ಲ ಇನ್ನೂ ದುರಂತದ ಸಂಗತಿ ವಿಷಾದದಿಂದ ಹೇಳಬೇಕೆಂದರೆ ಖರ್ಗೆಯವರ ಸ್ಥಾನವನ್ನು ತುಂಬುವ ಅವರ ವ್ಯಕ್ತಿತ್ವಕ್ಕೆ ಸರಿದೂಗಿಸುವ ಇನ್ನೊಬ್ಬ ಕಾಂಗ್ರೆಸ್ ಅಭ್ಯರ್ಥಿ ಈ ಭಾಗದಲ್ಲಿ ಇಲ್ಲ ಈಗ ಕಲ್ಬುರ್ಗಿ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಸವಾಲಾಗಿದೆ ಹಾಲಿ ಲೋಕಸಭಾ ಸದಸ್ಯರಾಗಿರುವ ಡಾಕ್ಟರ್ ಉಮೇಶ್ ಜಾದವ್ ಅವರನ್ನು ಸೋಲಿಸುವುದು ಕಾಂಗ್ರೆಸ್ಸಿಗೆ ಕಷ್ಟ ಸಾಧ್ಯವಾಗುತ್ತಿದೆ ಅವರ ಎದುರಿಗೆ ಬಲಿಷ್ಠ ಮತ್ತು ಅವರನ್ನು ಸೋಲಿಸುವ ವ್ಯಕ್ತಿ ಜಾದು ಮಾಡಿದಂತೆ ನಾವು ಮಾಡಲಿಕ್ಕೆ ಸಾಧ್ಯವಿಲ್ಲ ಈಗಾಗಲೇ ಅಂತಹ ವ್ಯಕ್ತಿಯನ್ನು ಕಣದಲ್ಲಿ ನಾವು ಹುಡುಕಬೇಕಾಗಿತ್ತು. ಆದರೆ ಕಾಂಗ್ರೆಸ್ ತೆಪ್ಪಗೆ ಕುಳಿತಿದೆ ಇದು ಕಾಂಗ್ರೆಸ್ಸಿನ ಬೇಜವಾಬ್ದಾರಿತನದ ನಡೆಯಾಗಿದೆ ಎಂಬುದು ನಮ್ಮ ಕಣ್ಣಿಗೆ ಗೋಚರವಾಗುತ್ತಿದೆ ಕಲ್ಬುರ್ಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಈಗ ಬಿಜೆಪಿ ಅದನ್ನು ಛಿದ್ರ ಮಾಡಿದೆ ಇಂತಹ ಪರಿಸ್ಥಿತಿಯಲ್ಲಿ ಖರ್ಗೆ ಅವರು ಸ್ವತಃ ಇಲ್ಲಿ ಸ್ಪರ್ಧಿಸಬೇಕು ಅಂದಾಗ ಚುನಾವಣೆಗೆ ಕಾವೇರುತ್ತದೆ ಆದರೆ ಅವರು ಈಗ ರಾಷ್ಟ್ರಮಟ್ಟದಲ್ಲಿ ಅಭ್ಯರ್ಥಿಗಳನ್ನು ಗುರುತಿಸುವದು ಮತ್ತು ಅವರಿಗೆ ಸ್ಪರ್ಧಾ ಕಣಕ್ಕೆ ಇಳಿಸುವ ಜವಾಬ್ದಾರಿ ಹೊತ್ತಿರುವುದರಿಂದ ಮಹಾಭಾರತದ ಯುದ್ಧದ ಜವಾಬ್ದಾರಿ ಹೊತ್ತ ಅನುಭವವಾಗುತ್ತಿದೆ ಕಾಂಗ್ರೆಸ್ ಪಕ್ಷ ಮುನ್ನಡೆಸುವದು ರಾಷ್ಟ್ರಮಟ್ಟದಲ್ಲಿ ಸಂಘಟಿಸುವುದು ಅವರಿಗೆ ಒಂದು ಗುರುತರ ಹೊಣೆ ಇರುವುದರಿಂದ ಕಲ್ಬುರ್ಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಕಷ್ಟವಾಗಬಹುದು ಅವರ ಸ್ಥಾನದಲ್ಲಿ ಈಗ ಕೇಳಿ ಬರುವ ಹೆಸರುಗಳೆಂದರೆ ರಾಧಾಕೃಷ್ಣ ದೊಡ್ಡಮನಿ ಮತ್ತು ಪ್ರಿಯಾಂಕ ಖರ್ಗೆ ಅವರದು ಹಾಗೂ ಇನ್ನೂ ಅನೇಕ ವ್ಯಕ್ತಿಗಳ ಹೆಸರು ಕೇಳಿ ಬರುತ್ತಿದೆ ಆದರೆ ಖರ್ಗೆಯವರಂತೆ ದಕ್ಷ ಹಾಗೂ ಸಮರ್ಥ ಸ್ಪರ್ಧಾಳು ಆಗಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಿಗೆ ಕಾಡುತ್ತಿದೆ ಪ್ರಿಯಾಂಕ ಖರ್ಗೆ ಅವರು ಈಗಾಗಲೇ ಶಾಸಕ ಸಚಿವ ಸ್ಥಾನದಲ್ಲಿರುವುದರಿಂದ ರಾಜ್ಯ ಮಟ್ಟದಲ್ಲಿ ಅವರು ಬೆಳೆದು ಮುಂದೆ ಭವಿಷ್ಯದ ನಾಯಕರಾಗುವ ಲಕ್ಷಣಗಳಿರುವುದರಿಂದ ಅವರ ತಂದೆಯವರು ಮುಖ್ಯಮಂತ್ರಿಯಾಗಲಿಲ್ಲ ಆ ಕೊರತೆಯನ್ನು ಪ್ರಿಯಾಂಕ ಖರ್ಗೆಯವರು ತುಂಬುತ್ತಾರೆಂಬ ಆಶಾಭಾವನೆ ಈ ಭಾಗದ ಜನತೆಗಿದೆ ಇಂಥ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಮುನ್ನಡೆಸುವ ಕಾಂಗ್ರೆಸ್ ಪಕ್ಷದ ಸಮರ್ಥ ಸೇನಾಪತಿ ಯಾರು ಮತ್ತು ಕಲ್ಬುರ್ಗಿಲೋಕಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿ ಯಾರು ಎಂಬುದು ಇನ್ನು ನಿಗೂಢವಾಗಿದೆ ಸಾಕಷ್ಟು ಮುಂಚೆ ಕಾಂಗ್ರೆಸ್ ಕರ್ನಾಟಕದ 28 ಸ್ಥಾನಗಳಿಗೆ ಅದರಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರೆ ಕಾಂಗ್ರೆಸ್ಸಿನ ಘನತೆ ಗೌರವ ಗಾಂಭೀರ್ಯತೆ ಉಳಿಯಬಹುದು ಒಂದು ವೇಳೆ ಅಲಕ್ಷ್ಯ ಮಾಡಿದರೆ ಮೋದಿಯ ಅಲೆಯಲ್ಲಿ ಕಾಂಗ್ರೆಸ ಪಕ್ಷ ಕಲ್ಯಾಣ ಕರ್ನಾಟಕದಲ್ಲಿ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ ಎಂಬುದನ್ನು ನಾವು ಅಲ್ಲ ಗಳಯಲು ಆಗುವುದಿಲ್ಲ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

Related Articles

Leave a Reply

Your email address will not be published. Required fields are marked *

Back to top button