ಸಂಪಾದಕೀಯ

ಜಿಲ್ಲೆಯಲ್ಲಿ ಮೀತಿಮಿರಿ ಬೆಳೆಯುತ್ತಿರುವ ಮಾದಕ ವೆಸನಿಗಳು, ಜೂಜು ಅಡ್ಡೆಗಳ ಕಡಿವಾಣಕ್ಕೆ ರಕ್ಷಾಧಿಕಾರಿಗಳಿಗೆ ಅಹಿಂದ ಆಗ್ರಹ- ಶಿವಮೊಗ್ಗ.

ಜಿಲ್ಲೆಯಲ್ಲಿ ಮೀತಿಮಿರಿ ಬೆಳೆಯುತ್ತಿರುವ ಮಾದಕ ವೆಸನಿಗಳು, ಜೂಜು ಅಡ್ಡೆಗಳ ಕಡಿವಾಣಕ್ಕೆ ರಕ್ಷಾಧಿಕಾರಿಗಳಿಗೆ ಅಹಿಂದ ಆಗ್ರಹ

ಶಿವಮೊಗ್ಗ ಜಿಲ್ಲೆಯ ನೂತನ ರಕ್ಷಣಾಧಿಕಾರಿ ನಿಖಿಲ್ ಬಿ‌. ಐಪಿಎಸ್ ರವರಿಗೆ, ರಾಜ್ಯ ಅಹಿಂದ ಚಳವಳಿ ಶಿವಮೊಗ್ಗ ಘಟಕದ ಪ್ರಮುಖರು ರಕ್ಷಣಾಧಿಕಾರಿ ಕಛೇರಿಯಲ್ಲಿ 17/2/2026ರ ಮಂಗಳವಾರ ಬೆಳಗ್ಗೆ ಬೇಟಿಯಾಗಿ ಜಿಲ್ಲೆಯಲ್ಲಿ ಕಾಲೇಜ್ ವಿದ್ಯಾರ್ಥಿಗಳು, ವಿದ್ಯಾವಂತ ಯುವಕರು, ದುಡಿದು ತಂದೆ ತಾಯಿಯ ಸಾಕುವಂತಂಹ ಯುವ ಸಮೂಹಗಳು ಇಂದು ಗಾಂಜಾ ವೆಸನಿಗಳಾಗುತ್ತಿರುವರು, ಇಸ್ಪಿಟ್ ಅಡ್ಡಗಳು ಮೀತಿಮಿರಿ ಬೆಳೆಯುತ್ತಿವೆ.

ಕಾಲೇಜಿಗೆ ಹೋಗುವ ಹದಿಹರಿಯದ ಯುವ ಸಮೂಹಗಳು ಮನೆಯಲ್ಲಿ ತಂದೆ-ತಾಯಿಯ ಮಾತುಗಳು ಕೇಳರು, ವಿದ್ಯಾಲಾಯಗಳಲ್ಲಿ ಉಪನ್ಯಾಶಕರ ಮಾತುಗಳು ಕೇಳದವರಿಗೆ ಪೊಲೀಸರ ಲಾಠಿ, ಬೂಟಿನ ಮಾತೆ ಲೇಸು, ಜಿಲ್ಲೆಯಲ್ಲಿ ಯಾರ ಬಯವಿಲ್ಲದೆ ನಡೆಸುತ್ತಿರುವ ಇಸ್ಪಿಟ್ ಅಡ್ಡಗಳ, ಕಡಿವಾಣ ಬಿಳಬೇಕು. ಹಾಗೆ ಗಾಂಜಾ, ಓಸಿ, ಅಡ್ಡಗಳಿಗೂ ಕಡಿವಾಣ ಬಿದ್ದರೆ ಬಡ ಕೂಲಿ ಕಾರ್ಮೀಕರ ಕುಟುಂಬ ವರ್ಗಗಳು ಭೂಮಿಯ ಮೇಲೆ ಉಸಿರಾಡುವರು ಎಂದು ಅಹಿಂದ ಮುಖಂಡರು ಹೇಳಿದರು.

ನಗರದಲ್ಲಿ ಗಾಂಜಾ, ಓಸಿ, ಇಸ್ಪಿಟ್ ಅಡ್ಡಗಳ ನಡೆಸುವರ, ಮರಳು ಅಕ್ರಮ ಸಾಗಟಗಳ ಎಲ್ಲಾ ಮಾಹಿತಿ ಠಾಣೆಯ ಬಿಟ್ ಪೊಲೀಸರಿಗೆ ಮಾಹಿತಿ ಇರುತ್ತದೆ, ಅವರೊಂದಿಗೆ ಠಾಣಾಧಿಕಾರಿಗಳು ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲು ತಿಳಸಿ, ಇದರಿಂದ ಯುವ ಸಮೂಹಗಳು ದಾರಿ ತಪ್ಪುವುದು ತಪ್ಪುತ್ತದೆ.

ಇಂತಹವುಗಳಲ್ಲಿ ಪೊಲೀಸ್ ಸಿಬ್ಬಂದಿಗಳು ಸಾಮಿಲು ಆಗಿರುವುದು, ನಾಗರಿಕರಿಂದ ಹಾಗೂ ಮಾದ್ಯಮಗಳಲ್ಲಿ ಕಂಡು ಬಂದಲ್ಲಿ ಅಂತವರನ್ನು ಅಮಾನತ್ತು ಗೊಳಸಿ ಎಂದು ಅಹಿಂದ ಮುಖಂಡರು ಆಗ್ರಹಿಸಿಸುತ್ತ ರಕ್ಷಣಾಧಿಕಾರಿಗೆ ಪುಷ್ಪಗುಚ್ಛವನ್ನು ನೀಡಿ ಆಭಿನಂದನೆಗಳು ಹೇಳಿದರು

ಈ ಸಂದರ್ಭದಲ್ಲಿ ಅಹಿಂದ ಚಳವಳಿ ರಾಜ್ಯ ಸಂಚಾಲಕ ಮೊಹಮ್ಮದ್ ಸನಾವುಲ್ಲಾ, ಜಿಲ್ಲಾ ಸಂಚಾಲಕರು, ಎಸ್.ಪಿ. ಶೇಷಾದ್ರಿ, ಜಂಟಿ ಸಂಚಾಲಕ ಎ.ಕೆ. ಚಂದ್ರಪ್ಪ, ಜಿಲ್ಲಾ ಸಂಚಾಲಕರು ಉಮೇಶ್ ಯಾದವ್, ಚನ್ನವೀರಪ್ಪ ಗಾಮನಗಟ್ಟಿ, ಜಿಎಂ ವಿಜಯ್ ಕುಮಾರ್, ನಿಂಗಪ್ಪ ಹಾಗೂ ಇತರರು ಉಪಸ್ಥತರಿದ್ದರು.

Related Articles

Leave a Reply

Your email address will not be published. Required fields are marked *

Back to top button