ಶ್ರೀ ಮುನೇಶ್ವರ ದೇವಸ್ಥಾನ ಹಾಗೂ ಅಕ್ಕಯ್ಯಮ್ಮನವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನವಗ್ರಹ ಪೂಜೆ, ವಾಸ್ತು ಪೂಜಾ. ಬೆಂಗಳೂರು.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಪುನೀತ್ ರಾಜಕುಮಾರ ವಾರ್ಡ್ ನ ನವನಂದಿನಿ ಉದ್ಯಾನವನ ಹತ್ತಿರವಿರುವ ಶ್ರೀ ಮುನೇಶ್ವರ ದೇವಸ್ಥಾನ ಹಾಗೂ ಅಕ್ಕಯ್ಯಮ್ಮನವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನವಗ್ರಹ ಪೂಜೆ, ವಾಸ್ತು ಪೂಜಾ, ಗಣ ಹೋಮ ಹವನ, ಅಘೋರ ರುದ್ರಹೋಮ ಸೇರಿದಂತೆ ಹಲವು ಪೂಜಾ ಕಾರ್ಯಕ್ರಮ ನಡೆದವು. ಇನ್ನು ಶಿವಭಕ್ತರ ದಂಡು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆತ್ತಿರುವುದು ಕಂಡು ಬಂತು. ಇದರ ನಡುವೆ ಮುನೇಶ್ವರ ದೇವಸ್ಥಾನವನ್ನು ಹೂವು ತಳಿರು ತೋರಣ ಗಳಿಂದ ಹಾಗೂ ಅಲಂಕಾರಿಕ ಲೈಟ್ ಗಳಿಂದ ಸಿಂಗರಿಸಿರುವದರಿಂದ ದೇವಸ್ಥಾನ ಎಲ್ಲರ ಗಮನ ಸೆಳೆಯಿತು. ಇನ್ನು ಸಾಯಂಕಾಲ ನಡೆಯುವ ಶಿವಸ್ತುತಿ ಹಾಡು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲ ಶಿವಭಕ್ತರು ಪಾಲ್ಗೊಂಡು ಶಿವನ ಕೃಪೆಗೆ ಪಾತ್ರರಾಗಬೇಕು ಜೊತೆಗೆ ಅನ್ನ ಪ್ರಸಾದ್ ವಿತರಣೆವಿದ್ದು ಪ್ರಧಾನ ಅರ್ಚಕರಾದ ವಿಜಯಕುಮಾರ್ ಎಂದು ತಿಳಿಸಿದರು.ದೇವಸ್ಥಾನದಲ್ಲಿ ನಡೆಯುವ ಇಂದಿನ ವಿಶೇಷ ಪೂಜಾ ಕೈಂಕರ್ಯ ಗಳಲ್ಲಿ ಈ ಭಾಗದ ಜನರು ಮತ್ತು ನಂದಿನಿ ಬಡಾವಣೆ, ಶ್ರೀನಿವಾಸ ನಗರ, ಬಿ ಎಚ್ ಇ ಎಲ್ ಬಡಾವಣೆ ಹಾಗೂ ನವನಂದಿನಿ ಪಾರ್ಕ್ ನ ಎಲ್ಲ ಭಕ್ತಾದಿಗಳು ಮತ್ತು ನಿವಾಸಿಗಳ ಸಹಕಾರದಿಂದ ಅದ್ದೂರಿಯಾಗಿ ಮಹಾಶಿವರಾತ್ರಿ ಜಾಗರಣೆ, ಪೂಜಾ ನಡೆಯುತ್ತಿದ್ದು, ಈ ಪೂಜಾ ಕಾರ್ಯಕ್ಕೆ ಸ್ಥಳೀಯ ಜನಪ್ರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಕೆ. ಗೋಪಾಲಯ್ಯ ಅವರು ಪಾಲ್ಗೊಂಡು ದೇವರ ದರ್ಶನ ಪಡೆದು ಶಿವರಾತ್ರಿ ಹಬ್ಬದ ಶುಭಾಶಯ ಕೋರಿದರು. ಈ ದೇವಸ್ಥಾನ ಪುರಾತನವಾಗಿದ್ದು, ಇದರ ಜೀರ್ಣೋದ್ದಾರ ಬಗ್ಗೆ ಅರ್ಚಕರಾದ ವಿಜಯಕುಮಾರ್ ನನ್ನ ಬಳಿ ಪ್ರಸ್ತಾಪಿಸಿದ್ದು, ಆದಷ್ಟು ಬೇಗ ದೇವಸ್ಥಾನ ಅಬ್ಯುದಯಕ್ಕೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ಗೋಪಾಲಯ್ಯ ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ್ ಮೂರ್ತಿ, ಎನ್. ವೆಂಕಟೇಶ್, ಸಂಪತಕುಮಾರ್, ಮತ್ತು ಈ ಭಾಗದ ಕಾಂಗ್ರೆಸ್ ಪಕ್ಷದ ಮಾಜಿ ಬಿಬಿಎಂಪಿ ಸದಸ್ಯರಾದ ಎಂ. ಶಿವರಾಜು, ಎಸ್. ಕೇಶವಮೂರ್ತಿ, ನಂದಿನಿ ಲೇಔಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪರಿಸರ ರಾಮಕೃಷ್ಣ, ಮುಖಂಡರುಗಳಾದ ಶಿವಕುಮಾರ್, ರಾಜು, ಸಾರ್ವಜನಿಕರು, ನವನಂದಿನಿ ಪಾರ್ಕ್ ನಡಿಗೆದಾರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.





