ಸಂಪಾದಕೀಯ

ತ್ರೀವಿಧ ಸುಜ್ಞಾನಿ ಸರ್ವತೋಮುಖ ಜ್ಞಾನ ಹಂಚುವ ಶ್ರೀಸ್ವಾಮಿ ಕಾಂತು ಮಹಾರಾಜ ಬಿದರಿ ಆಶ್ರಮ.

ತ್ರೀವಿಧ ಸುಜ್ಞಾನಿ ಸರ್ವತೋಮುಖ ಜ್ಞಾನ ಹಂಚುವದರೊಂದಿಗೆ ಭಕ್ತರ ಮನೆ-ಮನಗಳಲ್ಲಿ ಶಾಶ್ವತ ಸ್ಥಾನ ಪಡೆದಿರುವ ಶ್ರೀಸ್ವಾಮಿ ಕಾಂತು ಮಹಾರಾಜ ಅವರ ಅಪಾರ ಸಂಖ್ಯೆಯ ಭಕ್ತರು ಸೇರಿಕೊಂಡು ದಿನಾಂಕ. 21/07/2024.ರ ಗುರು ಪೌರ್ಣಿಮೆಯಂದು ಬಿದರಿ ಆಶ್ರಮದಲ್ಲಿ ಏರ್ಪಡಿಸಿದ ಅದ್ಭೂತವಾದ ಕಾರ್ಯಕ್ರಮ ಹಾಗೂ ಗುರುಸನ್ಮಾನ ಕಾರ್ಯಕ್ರಮವು ಜನಮೆಚ್ಚುಗೆಯಾಗಿತ್ತು ಗುರುಪೂರ್ಣಿಮೆಯ ಈ ಕಾರ್ಯಕ್ರಮದಲ್ಲಿ ಗುರುಜೀ ಶ್ರೀ ಕಾಂತು ಮಹಾರಾಜ ಅವರೊಂದಿಗೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಹಲವಾರು ಮಠದ ಶ್ರೀಗಳು, ಸ್ವಾಮಿಗಳು ಈ ಶುಭ ಕಾರ್ಯಕ್ರದಲ್ಲಿ ಭಾಗವಹಿಸಿದ್ದರು. ಭಕ್ತರು ಭಕ್ತಿಯಿಂದ ನಡೆಯಿಸಲ್ಪಟ್ಟ ಕಾರ್ಯಕ್ರಮದಲ್ಲಿ ಶ್ರೀ ಗುರುಜೀ ಕಾಂತು ಮಹಾರಾಜರೊಂದಿಗೆ ಹಲವಾರು ಮಠದ ಸ್ವಾಮಿಗಳು ತಮ್ಮ ಆಧ್ಯಾತ್ಮಿಕ ಜ್ಞಾನದ ನುಡಿ ಮುತ್ತಿನೊಂದಿಗೆ ಅಪಾರ ಭಕ್ತರ ಮನದಲ್ಲಿ ಭಕ್ತಿಯ ಸುಧೆ ಹರಿಯುವಂತೆ ಹಾದಿ ಸುಗಮಗೊಳಿಸಿದರು.

ಶ್ರೀಸ್ವಾಮಿ ಶ್ರೀ ಕಾಂತು ಮಹಾರಾಜ ಅವರನ್ನು ತ್ರೀವಿಧ ಸುಜ್ಞಾನಿಗಳು ಎನ್ನಲು ಹಲವಾರು ಕಾರಣಗಳಿವೆ. ಶ್ರೀಸ್ವಾಮಿಯವರು ಪಾರಂಪರಿಕವಾಗಿರುವ ಮತ್ತು ಋಷಿ-ಮುನಿಗಳಿಂದ ಪೂಜಿಸಲ್ಪಟ್ಟ ಜಡಿ-ಬೂಟಿ ಅಂದರೇ ನಾರು-ಬೇರು-ತೊಗಟೆ ( ಗಿಡ-ಮರಗಳ ಹೊರಕವಚ), ತಪ್ಪಲು, ಮೊಗ್ಗು-ಹೂಗಳು ಇನ್ನಿತರ ಹಲವಾರು ಭೂ- ತಾಯಿಯ ಒಡಲಿನಲ್ಲಿ ಹುದುಗಿರುವ ಆಶ್ಚರ್ಯಜನಕ ವಸ್ತುಗಳನ್ನು ಶೋಧಿಸಿ, ವಿಶ್ಲೇಷಿಸಿ, ಮಾನವ ಆರೋಗ್ಯಕ್ಕೆ, ಜೀವಕ್ಕೆ, ಜೀವನಕ್ಕೆ ಹೊಂದಿಕೊಳ್ಳುವಂತೆ ಅವುಗಳನ್ನು ತಯಾರಿಸಿಕೊಂಡು ಹಲವಾರು ಲಕ್ಷ ರೋಗಿಗಳ ರೋಗಗಳನ್ನು ವಾಸಿ ಮಾಡಿರುವ ಮಹಾ-ಮಹಿಮರಿವರು.

ಎರಡನೇಯದಾಗಿ ಮಾನವನಿಗೆ ರೋಗ ಬಂದಾಗ ಶ್ರೀಸ್ವಾಮಿಯವರನ್ನರಸಿ ಬರುವ ರೋಗಿಗಳ ರೋಗ ವಾಸಿ ಮಾಡುವುದರೊಂದಿಗೇ, ರೋಗ ಬಾರದಂತೇ ಪ್ರತಿಯೊಬ್ಬ ಮನುಷ್ಯ ತನ್ನ ಆರೋಗ್ಯ ಹ್ಯಾಗೆ ಕಾಪಾಡಿಕೊಳ್ಳಬೇಕೆಂಬುದನ್ನು ವಿವರವಾಗಿ ತಿಳಿಸಿಕೊಡುತ್ತಾರೆ. ಜೊತೆಗೆ ಹಲವಾರು ಥರಹದ ಯೋಗಾಸನಗಳನ್ನು ತಿಳಿಸಿಕೊಡುತ್ತಾರೆ. ಅಕ್ಯೂಪಂಚರ್, ಅಕ್ಯೂಪ್ರೇಶರ್ಗಳ ಹಲವಾರು ಸುಲಭ-ಸುಲಲಿತವಾಗಿರುವ ಪಾಯಿಂಟ್ಗಳನ್ನು ಹೇಳಿಕೊಡುತ್ತಾರೆ. ಜೊತೆಗೆ ಕೋಟಿ ಕೋಟಿ ವರ್ಷಗಳಿಂದ ಹಿಮಾಲಯ ಪರ್ವತದಲ್ಲಿ ಋಷಿ-ಮುನಿಗಳು ವಾಸವಿದ್ದು ತಪಸ್ಸು ಮಾಡಿ, ಸಾವಿರ ಸಾವಿರ ವರ್ಷಗಳಿಂದ ಸಿದ್ಧಿ ಮಾಡಿಕೊಂಡ ಮಾನವನ ಒಳಿತಿಗಾಗಿ ರೂಪಿಸಿಕೊಂಡಿರುವ ವಿಶೇಷ ಚಕ್ರಗಳು-ಮಂತ್ರಗಳು, ಅವುಗಳ ಕಾರ್ಯವೈಖರಿ, ಅವುಗಳನ್ನು ಜಾಗೃತಗೊಳಿಸುವ ವಿಧಾನ, ಮಾನವನ ದೇಹದಲ್ಲಿರುವ ಚಕ್ರಗಳು ಎಷ್ಟು ವಿಧವಾಗಿವೆ? ಎಷ್ಟು ಸಂಖ್ಯೆಯಲ್ಲಿವೆ? ಒಂದೊಂದು ಚಕ್ರಗಳಿಂದ ಮಾನವನ ಮನಸ್ಸು, ಹೃದಯ, ಮತ್ತು ಆರೋಗ್ಯದ ಮೇಲೆ ಯಾವ ಥರಹದ ಸ್ವಾಸ್ಥ ಜೀವನ ನಡೆಯಿಸಲು ಪ್ರಯೋಜನವಾಗುತ್ತದೆ ಎಂಬ ವಿಷಯ ಬಗ್ಗೆ ಸುಧೀರ್ಘವಾಗಿ ಪ್ರವಚನ ಕೊಡುತ್ತಾರೆ ಮತ್ತು ಪ್ರಯೋಗಿಕವಾಗಿ ಮಾಡಿ ತೋರಿಸಿ ಈ ವಿಷಯದಲ್ಲಿ ಒಲವು ತೋರಿಸಿದ ವ್ಯಕ್ತಿಗಳಿಗೆ ತಮ್ಮ ಆಶ್ರಮದಲ್ಲಿಯೇ ತರಬೇತಿ ಕೂಡ ಕೊಡುತ್ತಾರೆ.

ಮೂರನೇಯದಾಗಿ ಶ್ರೀಸ್ವಾಮಿಗಳು ಪ್ರಜ್ಞಾವಂತ ರೈತರೂ ಆಗಿದ್ದಾರೆ. ಕೃಷಿಯನ್ನು ತಮ್ಮ ಧ್ಯೆಯವನ್ನಾಗಿಸಿಕೊಂಡಿರುವ ಕಾಂತು ಮಹಾರಾಜರು ತಮ್ಮ ತೋಟದಲ್ಲಿ ವ್ಯೆವಸಾಯ ಚಟುವಟಿಕೆಗಳಲ್ಲಿ ಮಗ್ನರಾಗಿರುತ್ತಾರೆ. ಜೊತೆಗೆ ಹಲವಾರು ನಾಟಿ ಸಾಮಗ್ರಿಗಳಿಂದ ಸ್ವಯಂ ತಯಾರಿಸಿದ ಕೀಟ ನಾಶಕಗಳು, ಭೂ ಫಲವತ್ತತೆಗೆ ಬೇಕಾಗುವ ಸಾವಯವ ಗೊಬ್ಬರವನ್ನು ತಯಾರಿಸಿಕೊಂಡು ತಮ್ಮ ತೋಟದಲ್ಲಿಯೇ ಪ್ರಯೋಗಿಸಿ ಫಲವತ್ತಾಗಿಸಿಕೊಂಡಿದ್ದಾರೆ. ಪ್ರತಿ ದಿನ ಇವರ ತೊಟಕ್ಕೆ ಭೇಟಿ ಕೊಡುವ ಹಲವಾರು ಸಾವಿರ ರೈತರಿಗೆ ಸಾವಯವ ಕೃಷಿಯಿಂದ ಆಗುವ ಲಾಭಗಳು ಇದರಿಂದ ವಾತಾವರಣದ ಮೇಲೆ ಮತ್ತು ಭವಿಷ್ಯದಲ್ಲಿ ಮಾನವನ ಸುಸ್ಥೀರ ಆರೋಗ್ಯದ ಮೇಲೆ ಆಗುವ ಒಳಿತಿನ ಬಗ್ಗೆ ತಿಳಿಸಿ ಹೇಳುತ್ತಾರೆ. ಸ್ವಯಂ ಸಾವಯವ ಕೃಷಿಯನ್ನು ತಮ್ಮ ತೋಟದಲ್ಲಿ ಅಳವಡಿಸಿಕೊಂಡು ಹಲವಾರು ಥರಹದ ಬೆಳೆ ಬೆಳೆದು ರೈತರಿಗೆ ಮಾರ್ಗದರ್ಶಕರಾಗಿದ್ದಾರೆ.

ಮಹಾಮಹಿಮರು ದೀನ ಬಂಧು, ಬಡವರ ಆರೋಗ್ಯ ದೇವರು, ದೀನ-ದಯಾಳುಗಳು, ಜನಸ್ನೇಹಿ, ಪ್ರಜಾ ಪ್ರೇಮಿಯಾಗಿರುವ ಶ್ರೀಸ್ವಾಮಿ ಕಾಂತು ಮಹಾರಾಜರು ಈ ಹಿಂದುಳಿದ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ ಹುಟ್ಟಿ ಬೆಳೆದು ಸುಜ್ಞಾನ ಹರಡುತ್ತಿರುವುದು ಈ ಪ್ರದೇಶದ ಜನರ ಪುಣ್ಯವಂತರೆಂದು ನಮ್ಮ ಪ್ರಜಾಶ್ರೀ ಕನ್ನಡ-ಇಂಗ್ಲೀಷ ಪಾಕ್ಷೀಕ ಪತ್ರಿಕೆ ಬೆಂಗಳೂರು ವರದಿಗಾರರು ಸಮಗ್ರ ಮಾಹಿತಿ ಕಲೆಹಾಕಲು ಈ ಪ್ರದೇಶದ ಗ್ರಾಮ, ಪಟ್ಟಣ, ಜಿಲ್ಲೆಯ ಜನರ ಮನದಾಳದ ಮಾತು ಪತ್ರಿಕೆಗೆ ಬರೆದುಕೊಂಡಿದ್ದಾರೆ. 

Related Articles

Leave a Reply

Your email address will not be published. Required fields are marked *

Back to top button