ದಲಿತರ ಸಂವಿಧಾನ ಬದ್ಧ ಹಕ್ಕುಗಳಿಗೆ ಆಗ್ರಹಿಸಿ, ಬೃಹತ್ ಪ್ರತಿಭಟಣಾ ಧರಣಿ – ಎಂ. ಸಿ. ನಾರಾಯಣ್ ಬೆಂಗಳೂರು.

ದಲಿತರ ಸಂವಿಧಾನ ಬದ್ಧ ಹಕ್ಕುಗಳಿಗೆ ಆಗ್ರಹಿಸಿ, ಬೃಹತ್ ಪ್ರತಿಭಟಣಾ ಧರಣಿ – ಎಂ. ಸಿ. ನಾರಾಯಣ್ ಬೆಂಗಳೂರು. ಆದ್ದರಿಂದ ದಿನಾಂಕ 21-12-2023 ರಂದು ಸರ್ಕಾರದ ದಲಿತರ ಸಂವಿಧಾನ ಬದ್ಧ ಹಕ್ಕುಗಳಿಗೆ ಆಗ್ರಹಿಸಿ, ಬೃಹತ್ ಪ್ರತಿಭಟಣಾ ಧರಣಿಯನ್ನು ಫ್ರೀಡಂಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿದೆ. ಎಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ , ಭೀಮವಾದ ಅವರು ಸರ್ಕಾರ ವನ್ನು ಡಿಮಾಂಡ್ ಮಾಡಿದರು.
ಹಕ್ಕೊತ್ತಾಯಗಳು
1) ದಲಿತರ ಅಭಿವೃದ್ಧಿಗೆ ಸ್ಥಾಪಿತವಾಗಿರುವ ಎಲ್ಲಾ ನಿಗಮ ಮಂಡಳಿಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು. ಹಾಗೂ ಈ ಯೋಜನೆಗಳನ್ನು ಜಾರಿ ಮಾಡುವಾಗ ಶಾಸಕರ ಅನುಮತಿ (ಶಿಫಾರಸ್ಸು) ಪತ್ರವನ್ನು ಖಡ್ಡಾಯವಾಗಿ ರದ್ದುಗೊಳಿಸಬೇಕು.
2) ಪಿ.ಟಿ.ಸಿ.ಎಲ್ ಕಾಯ್ದೆಗೆ ಕಾಲಮಿತಿ ಅನ್ವಯಿಸುವುದಿಲ್ಲ ಎಂದು ತಿದ್ದುಪಡಿಯಾಗಿ 3-4 ತಿಂಗಳು
ಕಳೆದರೂ ಸಹ ಎಲ್ಲಾ ನ್ಯಾಯಾಲಯದಲ್ಲಿ ಇರುವ ಪ್ರಕರಣಗಳನ್ನು ಉದ್ದೇಶಪೂರ್ವಕವಾಗಿ ಸುಪ್ರೀಂ ಕೋರ್ಟ್ / ಹೈಕೋರ್ಟ್ ಕೇವಲ ಒಂದೇ ಒಂದು ಆದೇಶ ಸಹ ಮಾಡುತ್ತಿಲ್ಲ. (ತಿದ್ದುಪಡಿಗಿಂತ ಹಿಂದೆ ನಿಕ್ಕಂಟಿ ರಾಮಲಕ್ಷ್ಮಿ V/s ಕರ್ನಾಟಕ ಸರ್ಕಾರದ ಈ ಪ್ರಕರಣಗಳನ್ನು ಮುಂದಿಟ್ಟುಕೊಂಡು ಪಿ.ಟಿ.ಸಿ.ಎಲ್ ಕಾಯ್ದೆ ವಿರುದ್ಧವಾಗಿ ಮತ್ತು ಮಂಜೂರುದಾರರ ವಿರುದ್ಧ ಎಲ್ಲಾ ನ್ಯಾಯಾಲಯಗಳಲ್ಲಿ ದಿನನಿತ್ಯ ವಜಾ ಮಾಡುತ್ತಿದ್ದರು) ಮತ್ತು ನ್ಯಾಯಾಲಯಗಳು ಆದೇಶ ಮಾಡುತ್ತಿಲ್ಲ. ಕಂದಾಯ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ತೊಂದರೆ ಕೊಡುತ್ತಿದ್ದಾರೆ.
3) ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹಾಗೂ ಸುಳ್ಳುಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಹಕ್ಕನ್ನು ಕಬಳಿಸುತ್ತಿರುವವರ ವಿರುದ್ಧ ತನಿಖೆ ಮಾಡಿ ಶಿಕ್ಷೆಗೊಳಪಡಿಸಲು ನಾಗರೀಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯಕ್ಕೆ (CRE CELL) ಗೆ ಶಾಸನಬದ್ಧ ಕಾನೂನು ಅಧಿಕಾರ ಕೊಡಬೇಕು. ದೌರ್ಜನ್ಯಗಳು ನಡೆದರೆ ಆಯಾ ಜಿಲ್ಲಾಧಿಕಾರಿಗಳು / ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಬೇಕು.
4) 15 ರಿಂದ 17 ಕ್ಕೆ ಹೆಚ್ಚಳಗೊಂಡು ಜಾರಿಯಲ್ಲಿರುವ ನ್ಯಾಯಮೂರ್ತಿ ನಾಗಮೋಹನ್ದಾಸ್ರವರ ವರದಿಯಂತೆ, ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಕೂಡಲೇ ಶಿಪಾರಸ್ಸು ಮಾಡಬೇಕು. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ದಲಿತ ಹಾಗು ಹಿಂದುಳಿದ ವರ್ಗದ ನೌಕರರುಗಳನ್ನು ಕೂಡಲೇ ಖಾಯಂಗೊಳಿಸಬೇಕು.
13) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಣ್ಣಕೈಗಾರಿಕೆಗಳ
ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯಾದ್ಯಂತ ಹಂಚಿಕೆಯಾದ ಒಟ್ಟು ಕೈಗಾರಿಕೆ ಭೂಮಿ / ನಿವೇಶನ / ಮಳಿಗೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನುಪಾತದ ತಾರತಮ್ಯ ನಿವಾರಣೆಗಾಗಿ ಅಧ್ಯಯನ ಮಾಡಿ ವರದಿ ತರಲು ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಲು ಕೂಡಲೇ ಕ್ರಮಕೈಗೊಳ್ಳಬೇಕು. 14) ದಲಿತ ವರ್ಗಕ್ಕೆ ಸೇರಿದ ಐ.ಎ.ಎಸ್ ಮತ್ತು ಐ.ಪಿ.ಎಸ್ ಅಧಿಕಾರಿಗಳು ಮತ್ತು ಪ್ರಮುಖ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸದೆ ಜಾತಿ ತಾರತಮ್ಯ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು.
ಬಿ.ಎನ್.ವೆಂಕಟೇಶ್
ಓಂಕಾರಪ್ಪ ಕಪ್ಪಗಪ್ಪ
ಹೆಚ್.ಮಂಜುನಾಥ್
ಎಂ.ಚಂದ್ರಶೇಖರ್ ರಾಜ್ಯ , ಸಮಿತಿ ಸದಸ್ಯರು
ಪರಶುರಾಮ ನೀಲನಾಯಕ್
ರಾಜ್ಯ ಸಂಘಟನಾ ಸಂಚಾಲಕರು ಕೆ.ಕುಮಾರ್
ವಂದನೆಗಳೊಂದಿಗೆ, ಎಂ.ಸಿ. ನಾರಾಯಣ)ರಾಜ್ಯ ಸಂಚಾಲಕರು
ಡಿ.ನಾ.ಡಿ.ನಾರಾಯಣ್)
ರಾಜ್ಯ ಸಂಘಟನಾ
ಡಿ.ಸಿದ್ದರಾಜು). ವರದಿ. ಮಂಜುಳಾ ರೆಡ್ಡಿ.




