ಪತ್ರಿಕೋದ್ಯಮ

ದೇವರು ವರ ನೀಡಿದರು ಪೂಜಾರಿ ಅಡ್ಡಿ ಆಗಿದ್ದರೆ ಕೋಟಕ್ ಮಹೀಂದ್ರ ಬ್ಯಾಂಕ್ ನೌಕರರ ಸಂಘ – ಸಿ.ರಾಮಾಚಾರಿ

ದೇವರು ವರ ನೀಡಿದರು ಪೂಜಾರಿ ಅಡ್ಡಿ ಆಗಿದ್ದರೆ ಕೋಟಕ್ ಮಹೀಂದ್ರ ಬ್ಯಾಂಕ್ ನೌಕರರ ಸಂಘ – ಸಿ.ರಾಮಾಚಾರಿ

ಬೆಂಗಳೂರು.ದೇವರು ವರ ನೀಡಿದರು ಪೂಜಾರಿ ಅಡ್ಡಿ ಆಗಿದ್ದರೆ ಕೋಟಕ್ ಮಹೀಂದ್ರ ಬ್ಯಾಂಕ್ ನೌಕರರ ಸಂಘ ದ ಸದಸ್ಯ ಸಿ.ರಾಮಾಚಾರಿ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ವಿಚಾರ ವ್ಯಕ್ತ ಪಡಿಸಿದರು.
ಪತ್ರಿಕಾಗೋಷ್ಟಿ ಯಲ್ಲಿ ಮತನಾಡುತ್ತ ಸಿ. ರಾಮಾಚಾರಿ, ಕಳೆದ 28 ವರ್ಷಗಳಿಂದ ಕೋಟಕ್ ಮಹೀಂದ್ರ ಬ್ಯಾಂಕ್ ನೌಕರರ ಸಂಘದ ನಿಷ್ಠಾವಂತ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಂಘದ ವಿವಿಧ ಚಟುಪಟಿಕೆಗಳಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂದು, ನೌಕರರ ಹಿತಕ್ಕಾಗಿ ಧ್ವನಿ ಎತ್ತಿದ್ದೇನೆ.
ಗತ ವರ್ಷ ಹುಬ್ಬಳ್ಳಿಯಲ್ಲಿ ನಡೆದ ವಿಭಾಗೀಯ ಸಭೆಯಲ್ಲಿ, ನಾನು ಹಾಗೂ ನನ್ನೊಡನೆ ಹಲವರು ಕೆಳವರ್ಗದ ನೌಕರರ (ಸಬ್ ಸ್ಟಾಫ್) ಬಡ್ತಿ ಪ್ರಮೋಷನ್ ಸಂಖ್ಯೆ ಇಳಿಕೆಯಾಗಿರುವ ವಿಚಾರ, ಅರೆಕಾಲಿಕ ನೌಕರರ ಬಡ್ತಿ ಸಮಸ್ಯೆ, ಹಾಗೂ ಇತರ ನಮ್ಮ ನೌಕರರ ಸಮಸ್ಯೆಗಳ ಬಗ್ಗೆ ಯುನಿಯನ್‌ಗೆ ಮನವಿ ಹಾಗು ಹೆಚ್ಚು ಸಕ್ರಿಯ ವಾಗಿಸುವಂತೆ ಗಮನ ಹರಿಸುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿದೆವು. ಅದರ ಸಂಘದ ಪ್ರಧಾನ ಕಾರ್ಯದರ್ಶಿಯವರು ಈ ವಿಚಾರಕ್ಕೆ ಯಾವುದೇ ಸಮಂಜನ ಉತ್ತರ ನೀಡದೇ ನಿರ್ಲಕ್ಷ್ಯ ವಹಿಸಿದರು.
ಈ ಬಗ್ಗೆ ನಾವು ದಿನಾಂಕ ಏಪ್ರಿಲ್ 24 ರಂದು ಲಿಖಿತವಾಗಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಷ್ಟನೆ ನೀಡಲಾಗಲಿಲ್ಲ. ಅಧ್ಯಕ್ಷರು ಮತ್ತು ಇತರ ಪದಾಧಿಕಾರಿಗಳ ಗಮನಕ್ಕೂ ನಾವು ದಿನಾಂಕ 22/09/2024 ರಂದು ಮನವಿ ಸಲ್ಲಿಸಿದ್ದೇವೆ.
ಇದಕ್ಕೆ ಪ್ರತಿಕ್ರಿಯೆ ನೀಡದ ಸಂಘದ ಪದಾಧಿಕಾರಿಗಳು, ಬದಲಿಗೆ ನಾವು ಪರಸ್ಪರ ಚರ್ಚೆ ಮಾಡಿದ ಕುರಿತು ಹಲವಾರು ಆರೋಪಗಳನ್ನು ಹೊರಿಸಿ ನನ್ನ ವಿರುದ್ಧ ನೋಟಿಸ್ ಜಾರಿ ಮಾಡಿದರು. ಸಮಸ್ಯೆಗಳನ್ನು ಪರಿಹರಿಸಲು ನಾನೂ ಸೇರಿದಂತೆ ಸುಮಾರು 35 ರಿಂದ 40 ಸದಸ್ಯರು ಪತ್ರ ಬರೆದಿದ್ದು ಕೇವಲ ನನ್ನೊಬ್ಬನಿಗೆ ಸಂಘ ವಿರೋಧಿ ಆರೋಪ ಹೊರಿಸಿ ನೋಟಿಸ್ ಜಾರಿ ಮಾಡಿರುವರೂ ಅವರ ನೋಟಿನ್ ಗೆ ಉತ್ತರ ನೀಡಿದರೂ ಅದರ ಪರಿಶೀಲನೆ ಮಾಡದೆ, ನ್ಯಾಯಸಮ್ಮತ ವಿಚಾರಣೆಯಿಲ್ಲದೆ, ಎಕಪಕ್ಷೀಯವಾಗಿ ನನ್ನ ಸದಸ್ಯತ್ವವನ್ನು ವಜಾ ಮಾಡಿರುವರು ಎಂದು ದೂರಿದರು.
ನಾನು ಒಬ್ಬ ಕೆಳಹಂತದ ನೌಕರನಾಗಿದ್ದು ಅಂಗ್ಲ ಭಾಷೆಯ ಜ್ಞಾನ ಕಡಿಮೆ ಇದ್ದುದರಿಂದ ನೋಟಿಸನ್ನು ನನಗೆ ಅರ್ಥವಾಗುವ ಕನ್ನಡದಲ್ಲಿ ಕೋಡಲು ವಿನಂತಿಸಿದರೂ ಲೆಕ್ಕಿಸದೆ ಸರ್ವಾಧಿಕಾರಿ ಧೋರಣೆಯಿಂದ ಅಂಗ್ಲ ಭಾಷೆಯಲ್ಲೇ ಕೊಟ್ಟಿದ್ದಾರೆ. ನಮ್ಮ ಸಂಘದ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದ್ದರೂ ಇವರಿಗೆ ಕನ್ನಡ ಬರುವುದಿಲ್ಲ. ನಾವು ಕನ್ನಡದಲ್ಲಿ ನಮ್ಮ ಕಪ್ಪ ಹೇಳಿದರೆ, ಅರ್ಥವೂ ಆಗುವುದಿಲ್ಲ ಮತ್ತು ಪರಿಹರಿಸುವ ಗೋಜಿಗೂ ಹೋಗುವುದಿಲ್ಲ.
ಕೇವಲ ನನ್ನದೇ ಅಲ್ಲ, ಎಲ್ಲ ಸದಸ್ಯರು ತಮ್ಮ ಕಷ್ಟ-ಸಮಸ್ಯೆಗಳನ್ನು ಹೇಳಿಕೊಳ್ಳಲು ಯತ್ನಿಸಿದಾಗ ಅವರನ್ನು “ಸಂಘಟನಾ ವಿರೋಧಿ” ಎಂದು ಬಿಂಬಿಸಿ, ಬೆದರಿಕೆ ನೀಡುವುದು ಮತ್ತು ಸದಸ್ಯತ್ವದಿಂದ ವಜಾ ಮಾಡುವ ಕ್ರಮಗಳು ಎಷ್ಟು ಸಮಂಜನ ಮತ್ತು ನ್ಯಾಯ, ಪ್ರಧಾನ ಕಾರ್ಯದರ್ಶಿಯವರು ಸಂಘದ ಲೆಕ್ಕದಲ್ಲಿ ತಿಂಗಳಿಗೆ ಅಂದಾಜು 50 ರಿಂದ 60 ಸಾವಿರ ರೂಗಳ ಗೌರವಧನವನ್ನು ಪಡೆಯುತ್ತಿದ್ದು ನೌಕರರ ಕ್ಷೇಮಗಳ ಬಗ್ಗೆ ಗಮನ ಕೊಡದೆ ಇದ್ದರೆ ಹೇಗೆ ಎಂದು ಪ್ರಶ್ನಿಸಿದರು.
ನಾವು ಯಾವುದೇ ರೀತಿಯ ಸಂಘ ವಿರೋಧಿ ಚಟುವಟಿಕೆ ನಡೆಸಿಲ್ಲ. ನಮ್ಮ ಧೈಯ ಸಂಘ ಬಲಿಷ್ಠವಾಗಬೇಕೆಂಬದು. ಸದಸ್ಯರ ಸಮಸ್ಯೆಗಳಿಗೆ ಸಮಾಧಾನ ಸಿಗಬೇಕೆಂಬದು. ನಾಯಕತ್ವದ ಗೌರವ ಉಳಿಸಿಕೊಳ್ಳುವ ಜೊತೆಗೆ, ಸದಸ್ಯರ ನ್ಯಾಯವನ್ನು ಉಳಿಸಲು ಹೋರಾಟ ನಡೆಸಲು ತೀರ್ಮಾನಿಸಿದರು. ಜುಲೈ 11.12ರಂದು ಹೈದರಾಬಾದಿನಲ್ಲಿ *ಸಮ್ಮೇಳನವಿದ್ದು ಅದರಲ್ಲಿ ಚುನಾವಣೆ ನಡೆಯುವುದರಿಂದ ಸದಸ್ಯರೆಲ್ಲರೂ ಕಾರ್ಮಿಕರ ಹಿತರಕ್ಷಣೆಯನ್ನು ನೋಡುವ ವ್ಯಕ್ತಿಗೆ ಮತವನ್ನು ಹಾಕಬೇಕೆಂದು ಈ ತರಹದ ವ್ಯಕ್ತಿ ನಮಗೆ ಬೇಡವೆಂದು ತಿಳಿಸಿದರು.
ರಾಮಾಚಾರಿ ಸದಸ್ಯತ್ವವನ್ನು ಮರುಸ್ಥಾಪಿಸ ಬೇಕೆಂದು ಡೈಮಂಡ್ ಮಾಡಿದರು, ಈ ಘಟನೆಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ನ್ಯಾಯಸಮ್ಮತವಾಗಿ ಪರಿಶೀಲಿಸುವಂತೆ ಸಿ.ರಾಮಾಚಾರಿ ಒತ್ತಾಯಿಸಿದರು. ನಮ್ಮ ಹಕ್ಕುಗಳಿಗಾಗಿ ನಾವು ಶಾಂತಿಯುತ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದರು.
ಸಿ.ರಾಮುವನ್ ಕೆಎಂಬಿಇಯು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button