ನೇಕಾರ ಸಮುದಾಯಕ್ಕೆ ದೊಡ್ಡ ಆಘಾತವನ್ನು ತಂದೊಡ್ಡಿದೆ. ಅದಿಕ್ಕೆ ಸ್ವಂತ ಆ್ಯಪ್ – ಸೋಮಶೇಖರ್ ಬೀಂಗಳೂರು .

ನೇಕಾರ ಸಮುದಾಯಕ್ಕೆ ದೊಡ್ಡ ಆಘಾತವನ್ನು ತಂದೊಡ್ಡಿದೆ. ಸ್ವಂತ ಆ್ಯಪ್ – ಸೋಮಶೇಖರ್ ಬೀಂಗಳೂರು .ನೇಕಾರ ಸಮುದಾಯಕ್ಕೆ ದೊಡ್ಡ ಆಘಾತವನ್ನು ತಂದೊಡ್ಡಿದೆ ಅದಿಕ್ಕೆ ಸ್ವಂತ ಆ್ಯಪ್ ಅನ್ನು ನಿರ್ಮಿಸಿದ್ದೇವೆಂದು ಸೋಮಶೇಖರ್ ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ತಿಳಿಸಿದರು. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ದಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ‘ಜಾತಿಗಣತಿ’ ವರದಿಯನ್ನು ನೇಕಾರ ಸಮುದಾಯವು ಸ್ವಾಗತಿಸುತ್ತದೆ. ರಾಜ್ಯದಲ್ಲಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ದಾಖಲಿಸುವಲ್ಲಿ ಆಯೋಗವು ಕೈಗೊಂಡಿರುವ ಕ್ರಮವು ಅವೈಜ್ಞಾನಿಕವಾಗಿದೆ. ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಅಂಕಿ-ಅಂಶಗಳು ಸಮುದಾಯಕ್ಕೆ ದೊಡ್ಡ ಆಘಾತವನ್ನು ತಂದೊಡ್ಡಿದೆ.
ರಾಜ್ಯದ ನೇಕಾರ ಸಮುದಾಯವು ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇಕಾರ ಸಮುದಾಯಗಳ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರುಗಳು ಸುಮಾರು ಐದಾರು ಸಭೆಗಳನ್ನು ನಡೆಸಿ ಮರುಸಮೀಕ್ಷೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ.
ನೇಕಾರ ಸಮುದಾಯವು ತನ್ನ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ತನ್ನದೇ ಆದ ‘ಆಪ್’ ಅನ್ನು ಸಿದ್ಧಪಡಿಸಿದೆ. ಈ ಆಪ್ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರುಗಳ ಮಾಹಿತಿಯನ್ನು ಒದಗಿಸಲು ಅನುಕೂಲ ಕಲ್ಪಿಸಲಾಗಿದೆ.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟವು ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯದವರ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಿದ್ದು, ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ ನೇಕಾರರನ್ನು ಸಂಪರ್ಕಿಸಿ ಕುಟುಂಬದ ಸದಸ್ಯರುಗಳ ಅಂಕಿ-ಅಂಶಗಳನ್ನು ಸಂಗ್ರಹಿಸಿ ಆಪ್ ನಲ್ಲಿ ಅವುಗಳನ್ನು ದಾಖಲಿಸಲಾಗುವುದು ಸೋಮಶೇಖರ್ ಅವರು ನೇಕಾರರಿಗೆ ಕರೆ ನೀಡಿದರು.
ರಾಜ್ಯದ ನೇಕಾರ ಸಮುದಾಯಗಳಿಗೆ ತಲುಪಿಸಿ ಸಹಕರಿಸಲು ಕೋರಿದರು
ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಎನ್.ಜಪದೂತ , ಅಧ್ಯಕ್ಷರು ‘ಬಿ.ಎಸ್ ಸೋಮಶೇಖರ್ ವರದಿ. ಮಂಜುಳಾ ರೆಡ್ಡಿ



