ಸಂಪಾದಕೀಯ

ಆಟಲ್ ಭೂಜಲ್ ಯೋಜನೆಯ ಪ್ರೋತ್ಸಾಹಧನ ನೀಡಬೇಕು. ಕೊಡಿಹಳ್ಳಿ ಚಂದ್ರಶೇಖರ್.

ಸರ್ಕಾರದಿಂದ ಸರಿಯಾದ ನ್ಯಾಯ ದೊರಕದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ 2025- 26 ನೇ ಸಾಲಿನಲ್ಲಿ ಆಟಲ್ ಭೂಜಲ್ ಯೋಜನೆಯ ಪ್ರೋತ್ಸಾಹಧನ ನೀಡಬೇಕು ರೈತ ಸಂಘ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಜ್ಯಾಧ್ಯಕ್ಷರಾದ ಕೊಡಿಹಳ್ಳಿ ಡಿಮಾಂಡ್ ಬೆಂಗಳೂರು. ಆಟಲ್ ಭೂಜಲ್ ಯೋಜನೆಯ ಪ್ರೋತ್ಸಾಹಧನ ನೀಡಬೇಕು ರೈತ ಸಂಘ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರಾಜ್ಯಾಧ್ಯಕ್ಷರಾದ ಕೊಡಿಹಳ್ಳಿ ಪ್ರೆಸ್ ಕ್ಲಬ್ ನಲ್ಲಿ ರೈತ ಸಂಘ ರೈತ ಸಂಘ ಮತ್ತು ಹಸಿರು ಮತ್ತು ಸೇನೆ ವತಿಯಿಂದ ರಾಜ್ಯಾಧ್ಯಕ್ಷರಾದ ಕೊಡಿಹಳ್ಳಿ ಚಂದ್ರಶೇಖರ್ ಡಿಮ್ಯಾಂಡ್ ಮಾಡಿದರು .
ದೊಡ್ಡಬಳ್ಳಾಪುರ ಘಟಕ ಸೇರಿದಂತೆ ಕೆಎಂಎಫ್ ನ ಪಶು ಆಹಾರ ಖರೀದಿಯಲ್ಲಿ 100 ಕೋಟಿ ರೂ ಭ್ರಷ್ಟಾಚಾರ ನಡೆದಿರುವ ಮತ್ತು ತೋಟಗಾರಿಕಾ ಇಲಾಖೆಯಲ್ಲಿ ಸರ್ಕಾರದ ಯೋಜನೆಗಳಿಂದ ರೈತರಿಗೆ ಬರಬೇಕಾದ ಸಬ್ಸಿಡಿ ಯನ್ನು ಕೂಡಲೆ ಬಿಡುಗಡೆ ಮಾಡುವಂತೆ ಆಗ್ರಹಿಸಿದರು .
ದೊಡ್ಡಬಳ್ಳಾಪುರ ಘಟಕ‌‌ ಸೇರಿದಂತೆ
ಕೆಎಂಎಫ್ ನಲ್ಲಿ ₹ 100 ಕೋಟಿ ಭ್ರಷ್ಟಾಚಾರ ನಡೆದಿದ್ದು, ಆರೋಪಿಗಳನ್ನು ಅಮಾನತು ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ, ಅಧಿಕಾರಿಗಳು ₹ 50 ಕೋಟಿ ವ್ಯವಹಾರದ ಬಗ್ಗೆ(ವೇದವತಿಯವರ ಮೇಲೆ ಅಧಿಕಾರಿಗಳು ಒತ್ತಡ ಹಾಕಿ ಮಾತನಾಡಿರುವುದರ ಬಗ್ಗೆ) ಮಾತನಾಡಿರುವ ಆಡಿಯೊ‌ ಇದೆ’ ಎಂದು ಪೆನ್ ಡ್ರೈವ್ ಪ್ರದರ್ಶಿಸಿದರು.
ರೈತರ ಬಹುದೊಡ್ಡ ಸಂಸ್ಥೆಯಾದ ಕೆಎಂಎಫ್ ಭ್ರಷ್ಟಾಚಾರದ ಕೂಪವಾಗಿದೆ‌. ಆಡಳಿತ ಮಂಡಳಿ ಇಲ್ಲದ್ದರಿಂದ ಅಲ್ಲಿ ಅಧಿಕಾರಿಗಳ ದರ್ಬಾರ್ ನಡೆಯುತ್ತಿದೆ. ಅಧಿಕಾರಿಗಳು ಒಬ್ಬರನ್ನೊಬ್ಬರು ರಕ್ಷಿಸಿಕೊಂಡು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಸರ್ಕಾರವು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಕೆಎಂಎಫ್ ನೀಡುವ ‌ಪಶು ಆಹಾರ ಕಳಪೆ‌ ಗುಣಮಟ್ಟದಿಂದ ಕೂಡಿದೆ. ಖಾಸಗಿ ಕಾರ್ಖಾನೆಗಳಿಂದ ಕಾಂಕಂಬಿ ಖರೀದಿಸಲಾಗಿದ್ದು, ಅದರಲ್ಲಿ ಭ್ರಷ್ಟಾಚಾರ ನಡೆದಿದೆ. ರಾಜಾನುಕುಂಟೆಯ ಕಾಕಂಬಿ ಪಶು ಆಹಾರ ಕಾರ್ಖಾನೆಯಲ್ಲಿ ಕಳಪೆ ಗುಣಮಟ್ಟದ ಕಚ್ಚಾ ಪದಾರ್ಥಗಳಿಂದ ತಯಾರಿಸಿದ ಪಶು ಆಹಾರವನ್ನು ಸೇವಿಸಿದ ರಾಸುಗಳು ಅನಾರೋಗ್ಯದಿಂದ ಮೃತಪಟ್ಟಿವೆ’ ಎಂದರು.

*ಕೆಳಹಂತದ ಅಧಿಕಾರಿಗಳ ಅಮಾನತಾಗಿದೆ. ಆದರೆ, ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ, ಎಂ.ಎಸ್.ಸುಹೈಲ್, ಜಂಟಿ ನಿರ್ದೇಶಕರಾದ ಜಿತೇಂದ್ರ, ಶ್ರೀನಿವಾಸ್ ವಿರುದ್ಧ ಯಾವುದೇ ಕ್ರಮವಾಗಿಲ್ಲ ಕೂಡಲೇ ಕ್ರಮ ಕೈಗೊಂಡು ಅವರಿಂದ‌ಲೇ ನಷ್ಟ ಭರಿಸಬೇಕೆಮನದು . ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೆಎಮ್ಎಫ್ ನ ಕೇಂದ್ರ ಘಟಕದ ಬಳಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಸರ್ಕಾರಕ್ಕೆ ಮತ್ತು ಕೆಎಮ್ಎಎಫ್ ಗೆ ಎಚ್ಚರಿಕೆ ನೀಡಿರುತ್ತಾರೆ.

ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ಹಸಿರು ಮನೆ ನಿರ್ಮಾಣ, ಸೇರಿದಂತೆ ಹಲವಾರು ಯೋಜನೆಗಳಲ್ಲಿ ಸರ್ಕಾರ ಸಹಾಯಧನ ಬಿಡುಗಡೆ ಮಾಡಿಸುವ ಕುರಿತು, ಕರ್ನಾಟಕ ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಿಕ್ಕಮಗಳೂರು ಹಾಗೂ ಗದಗ ಈ ಏಳು ಜಿಲ್ಲೆಗಳಲ್ಲಿ ಕೇಂದ್ರ ಪುರಸ್ಕೃತ 2025- 26 ನೇ ಸಾಲಿನಲ್ಲಿ ಆಟಲ್ ಭೂಜಲ್ ಯೋಜನೆಯ ಪ್ರೋತ್ಸಾಹಧನ ಘಟಕದಡಿ ಕ್ರಿಯಾಯೋಜನೆಗೆ ರಾಜ್ಯ ತೋಟಗಾರಿಗೆ ಇಲಾಖೆ ವತಿಯಿಂದ 2025-26 ನೇ ಸಾಲಿಗೆ ಹಸಿರು ಮನೆ ನಿರ್ಮಾಣ ಮಾಡಿಕೊಳ್ಳಲು ಮೇಲ್ಕಂಡ ಎಲ್ಲಾ ಜಿಲ್ಲೆಯ ರೈತರಿಗೆ ಸಹಾಯಧನ ನೀಡುವುದಾಗಿ ಕಾರ್ಯವೇಶ ನೀಡಲಾಗಿರುತ್ತದೆ.
ಈ ಸದರಿ ಕಾರ್ಯದೇಶಗಳನ್ವಯ ನಾವುಗಳು ಈಗಾಗಲೇ ಲಕ್ಷಾಂತರ ರೂಗಳ ನಮ್ಮ ಸ್ವಂತ ಹಣ ಹಾಗೂ ಬ್ಯಾಂಕುಗಳಿಂದ ಸಾಲ ಪಡೆದು ಹಸಿರು ಮನೆ ನಿರ್ಮಾಣ ಮಾಡಿಕೊಂಡಿದ್ದು, ಇದುವರೆಗೂ ಸಹಾಯಧನದ ಹಣ ಬಿಡುಗಡೆಯಾಗಿರುವುದಿಲ್ಲ. ಈ ಸಂಬಂಧ ತೋಟಗಾರಿಗೆ ಇಲಾಖೆಯಲ್ಲಿ ವಿಚಾರಿಸಲಾಗಿ ಈವರೆಗೂ ಸದಿ ಸಹಾಯಧನದ ಹಣವು ಕೇಂದ್ರ ಸರ್ಕಾರದ ಜಲಶಕ್ತಿ ಇಲಾಖೆಯಿಂದ ಬಿಡುಗಡೆಯಾಗಿಲ್ಲವೆಂದು ಸರ್ಕಾರದಿಂದ ಹಣ ಬಿಡುಗಡೆ ಆದ ನಂತರ ನೀಡು ವುದಾಗಿಯೂ ಹಾಗೂ ಇದೇ ತಿಂಗಳ 28 ರಂದು ಸಭೆ ನಡೆಸಿ ಸಬ್ಸಿಡಿ ಬಿಡುಗಡೆ ಮಾಡುವುದಾಗಿ ತಿಳಿಸಿರುತ್ತಾರೆ.
ಈ ದಿನಾಂಕದಂದು ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಬರಬೇಕಾದ ₹ 35 ಕೋಟಿ‌ ಸಬ್ಸಿಡಿ ಬಿಡುಗಡೆ ಮಾಡುವ ನಿರ್ಧಾರ ಕೈಗೊಂಡು ಹಣ ಬಿಡುಗಡೆ ಮಾಡಬೇಕು, ಒಂದು ವೇಳೆ ಬಿಡುಗಡೆ ಮಾಡಿಲ್ಲವೆಂದಾದರೆ ಲಾಲ್ ಬಾಗ್ ನಲ್ಲಿರುವ ತೋಟಗಾರಿಕಾ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ, ಅಲ್ಲಿನ ಅಧಿಕಾರಿಗಳನ್ನು ಗೇಟಿನ ಹೊರಕ್ಕೆ ಎಳೆದು ತರಬೇಕಾಗುತ್ತದೆಂದು ತೋಟಗಾರಿಕಾ ಇಲಾಖೆಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು ಇದರೊಂದಿಗೆ ಬಿಡದಿ ಟೌನ್ ಶಿಪ್ ಯೋಜನೆ ಕೈ ಬಿಡಬೇಕು. ಹನೂರಿನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ನೀಡಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿರುತ್ತಾರೆ. ಸರ್ಕಾರದಿಂದ ಸರಿಯಾದ ನ್ಯಾಯ ದೊರಕದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಕೈಗೊಳ್ಳ ಬೇಕಾಗುತ್ತದೆಂದೂ ಎಚ್ಚರಿಕೆ ನೀಡಿದರು . ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಪ್ರಸನ್ನ , ವೀರಭದ್ರ ಸ್ವಾಮಿ, ಭೈರೇಗೌಡ, ಶ್ರೀಕಾಂತ್, ಮುದ್ದೇಗೌಡ ರವರು ಪತ್ರಿಕಾ ಗೋಷ್ಠಿ ನಡೆಸಿರುತ್ತಾರೆ . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button