ಸಂಪಾದಕೀಯ
ನಮ್ಮ ಕನ್ನಡಿಗರು ನಮ್ಮ ಹೆಮ್ಮೆ, ಬೆಂಗಳೂರು

ನಮ್ಮ ಕನ್ನಡಿಗರು ನಮ್ಮ ಹೆಮ್ಮೆ,
ಕರ್ನಾಟಕ ಸಾಹಿತ್ಯ ಮಂದಿರ, ಲಿಂಗಪಲ್ಲಿ, ಖಾಚಿಗುಡ, ನೃತುoಗ ಸ್ಕೂಲ್ ಕ್ಯಾಂಪಸ್, ಹೈದರಾಬಾದ್ ನಲ್ಲಿ ಹಮ್ಮಿಕೊಂಡಿರುವ ” ಕರ್ನಾಟಕ ಫುಡ್ ಫೆಸ್ಟಿವಲ್ ಕಾರ್ಯಕ್ರಮ” ವು ಕನ್ನಡಿಗರು ಹೆಮ್ಮೆ ಪಡುವಂತಹ ಶ್ಲಾಘನೀಯ ಕಾರ್ಯವಾಗಿದೆ.
ನಮ್ಮವರು ನಮ್ಮ ಕನ್ನಡಿಗರು ಎಲ್ಲಿಯೇ ಇದ್ದರೂ ಕೂಡ ಕನ್ನಡತನ ಕನ್ನಡ ಬಾವುಟ ಹಾರಿಸುತ್ತಾ ಮೆರೆಯಿಸುತ್ತಿರುವುದು ಖುಷಿಯ ವಿಷಯ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ” ಎಂಬ ಕನ್ನಡ ಕವಿಯ ಹಾಡು ಈ ಸಂರ್ಭದಲ್ಲಿ ನೆನಪಿಸುವಂತ ಮತ್ತು ಸಾರ್ಥಕವಾಗಿದೆ. ಕಾರ್ಯಕ್ರಮ ಸುಲಲಿತವಾಗಿ ನಡೆಯಲಿ ಕನ್ನಡ ಭಾಷೆ, ಸಂಸ್ಕೃತಿ, ದಶ ದಿಕ್ಕುಗಳಲ್ಲಿ ಹರಡಲು ಕನ್ನಡ ಕಟ್ಟಾಳುಗಳುಗಳು ತಾವು ನೆಲೆಸಿರುವ ಪ್ರದೇಶದಲ್ಲಿ ಶ್ರಮಿಸಲಿ ಎಂದು ನಾವೆಲ್ಲ ಹರಸಿ ಹಾರೈಸೋಣ.
ಎಂ. ಎ. ಸುಗಂಧಿ. ವಕೀಲರು, ಬೆಂಗಳೂರು 9731113141.🙏



