ಪೂರ್ಣಗೊಳ್ಳದ ಜೆ.ಜೆ.ಎಂ. ಕಾಮಗಾರಿಗೆ ಅಧಿಕಾರಿಗಳ ನಿರ್ಲಕ್ಷ. ಪಟ್ಟಣ ಪಂಚಾಯಿತಿ ಸದಸ್ಯರು ಗರಂ* ಕನಕಗಿರಿ.

ಪೂರ್ಣಗೊಳ್ಳದ ಜೆಜೆ ಎಂ ಮತ್ತು ಕಾಮಗಾರಿಗೆ ಅಧಿಕಾರಿಗಳ ನಿರ್ಲಕ್ಷ ಪಟ್ಟಣ ಪಂಚಾಯಿತಿ ಸದಸ್ಯರು ಗರಂ*
ಕನಕಗಿರಿ ಪಟ್ಟಣದಲ್ಲಿ ಒಟ್ಟಾರೆ 17 ವಾರ್ಡ್ ಗಳಿದ್ದು ಪ್ರತಿ ವಾರ್ಡಿನಲ್ಲಿಯೂ ಕೂಡ ಜೆಜೆ ಎಂ ಕಾಮಗಾರಿಗೆ ನಡೆದಿದ್ದು ಎಲ್ಲ ವಾರ್ಡ್ಗಳಲ್ಲಿಯೂ ಕಾಮಗಾರಿಕೆಗಳು ಪೂರ್ಣವಾಗದೆ ಅರ್ಧಕ್ಕೆ ನಿಂತು ಹೋಗಿದೆ ಇದರಲ್ಲಿ ಶಾಲಾ ಮಕ್ಕಳು ವೃದ್ಧರು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ನೀರು ನಿಂತು ಹೋಗುತ್ತಿವೆ ,ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆ ಉಂಟಾಗುತ್ತಿದೆ ಅದರಲ್ಲೂ ಒಂಬತ್ತನೇ ವಾರ್ಡ್ ನಲ್ಲಿ ದ್ಯಾಮಮ್ಮನ ಗುಡಿ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆ ಅದಿಗೆಟ್ಟು ಹೋಗಿದೆ, ಎಂದು ಪಟ್ಟಣ ಪಂಚಾಯಿತಿಯ 9ನೇ ವಾರ್ಡಿನ ಸದಸ್ಯರಾದ ರಾಜಾ ಸಾಬ್ ನಂದಾಪುರ್ ಅವರು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಪ್ರಯೋಜನವಾಗುತ್ತಿಲ್ಲ ಎಂದು ತಮ್ಮ ಬೇಸರಿಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಟೆಂಡರ್ ತಗೊಂಡಿರುವ ಕಾಂಟ್ರಾಕ್ಟರ್ ಗಳು ಕೆಲಸ ಮಾಡದೆ ಬಿಲ್ಲನ್ನು ಪಾವತಿ ಮಾಡಿ ಕೊಂಡಿದ್ದಾರೆ ಎಂದು ಅವರ ಮೇಲೆ ದೂರಿದರು. ಅಧಿಕಾರಿಗಳ ಗಮನಕ್ಕೆ ಇದ್ದರೂ ಕೂಡ ಏನೂ ಮಾಡುವುದಿಲ್ಲ ಎಂದು ಕಾರಣ ಕಾಂಟ್ರಾಕ್ಟ್ರ್ ಗಳಿಗೆ ಭಯ ಇಲ್ಲದಂತಾಗಿದೆ.
ಈ ಕೂಡಲೇ ಅಧಿಕಾರಿಗಳು ಜೆಜೆ ಎಂ ಕಾಮಗಾರಿಕೆ ಬಗ್ಗೆ ಗಮನವಹಿಸಿ ಕ್ರಮ ಕೈಗೊಳ್ಳಬೇಕೆಂದು ಕನಕಗಿರಿ ಪಟ್ಟಣದ ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ, ಇಲ್ಲದಿದ್ದಲ್ಲಿ ಕಾಮಗಾರಿಕೆ ನಡೆಸಿರುವ ಕಾಂಟ್ರಾಕ್ಟರ್ ಗಳು ಹಾಗೂ ಅಧಿಕಾರಿಗಳ ಮೇಲೆ ದೂರು ಸಲ್ಲಿಸಿ ಅವರ ಮೇಲೆ ಸೂಕ್ತ ಕಾನೂನಿನ ಕ್ರಮ ವಹಿಸಬೇಕಾಗುತ್ತದೆ ಎಂದು ಒಂಭತ್ತನೇ ವಾರ್ಡಿನ ಪ.ಪಂ.ಸದಸ್ಯರಾದ ರಾಜಾ ಸಾಬ್ ನಂದಾಪುರ್ ಅವರು ಎಚ್ಚರಿಕೆಯ ನೀಡಿರುತ್ತಾರೆ.
ಇದೇರೀತಿ ಅನೇಕ ಕನಕಗಿರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಪೂರ್ಣ ಕೆಲಸ ಮಾಡದೆಕಂಟ್ರೇಟರ್ ಬಿಲ್ ಪಾವತಿಸಲಾಗಿದೆ ಎಂದು ತಿಳಿಸಿದರು.
ಅದರಲ್ಲಿ ಕನಕಗಿರಿ ಪಟ್ಟಣದ 17 ವಾರ್ಡ್ಗಳಲ್ಲಿ JJM 2.0 ಕಾಮಗಾರಿ ಇಂದ ರಸ್ತೆಗಳು ಹಾಡಿಗೆಟ್ಟಿವೆ ಕೆಲಸ ಮಾಡುವಾಗ ಜನರಿಗೆ ಹಾಡಿಗೆಟ್ಟ ರಸ್ತೆ ಗಳನ್ನು ಸರಿಪಡಿಸುತ್ತೇವೆ ಎಂದು ತಿಳಿಸಿ ಈಗ ಕಾಮಗಾರಿ ಮಾಡದೇ ಪರಾರಿಯಾಗಿದರೆ ಎಂದು ಸಾರ್ವಜನಿಕರ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನು ಜಿಲ್ಲಾ ಅಧಿಕಾರಿಗಳು ಜೆಜೆ ಎಂ ಕಾಮಗಾರಿಗೆ ಕೆಲಸ ಮಾಡಿದವರ ಕಂಟ್ರೇಟರ್ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣ ಪಂಚಾಯತ್ ಸದಸ್ಯ ರಾಜ ಸಬ್ ನಂದಾಪುರ್ ತಿಳಿಸಿದ್ದಾರೆ. ಇಲ್ಲದಿದ್ದಲ್ಲಿ ಅವರಮೇಲೆ ಕಾನೂನಿನ ಕ್ರಮ ವಹಿಸಿಲೂ ಮುಖ್ಯ ಮಂತ್ರಿ ಗಳಿಗೆ ಪಾತ್ರಬರೆದು ಕಂಟ್ರೇಟರ್ ಲೈಸೆನ್ಸ್ ರದ್ದು ಮಾಡಬೇಕು ಎಂದು ತಿಳಿಸಿದರು.
ಬಾಕ್ಸ್ 1
JJM ಕಾಮಗಾರಿಗೆ ಕೋಟ್ಯಂತರ ರೂಪಾಯಿ ಹಣ ನೀಡಿದ್ದಾರೆ ಆದರೆ ಕೆಲಸ ಶೂನ್ಯ ಇದ್ದನು ಜಿಲ್ಲಾ ಅಧಿಕಾರಿಗಳು ಗಮನ ವಹಿಸಿ ಕ್ರಮ ಕೈಗೊಳ್ಳಬೇಕು…
ರಾಜ ಸಬ್ ನಂದಾಪುರ ಪ. ಪಂ ಸದಸ್ಯರು 9ನೇ ವಾರ್ಡ್ ಕನಕಗಿರಿ...
ವರದಿಗಾರ ಗೌತಮ್ ಯಾದವ್ ಕನಕಗಿರಿ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




