ಸಂಪಾದಕೀಯ

ಮಡಿವಾಳ ಕೆ. ವಿ. ಅಮರ್‌ನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು – c. ನಂಜಪ್ಪ

ಮಡಿವಾಳ ಕೆ. ವಿ. ಅಮರ್‌ನಾಥ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು – c. ನಂಜಪ್ಪ

                                 ಬೆಂಗಳೂರು.  ಮಡಿವಾಳ ಕೆ. ವಿ. ಅಮರ್‌ನಾಥ್  ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು  ಕರ್ನಾಟಕ ಮಡಿವಾಳರ ಸಂಘದ ಅಧ್ಯಕ್ಷ ಸಿ .ನಂಜಪ್ಪ   ಅವರು ಇಂದು ಬೆಂಗಳೂರು  ಪ್ರೆಸ್  ಕ್ಲಬ್  ನಲ್ಲಿ ಸರ್ಕಾರ ವನ್ನು ಡಿಮ್ಯಾಂಡ್ ಮಾಡಿದರು.     ಮಡಿವಾಳ ಸಮುದಾಯದ ಪ್ರಮುಖರಾದ ಶ್ರೀಯುತ ಕೆ. ವಿ. ಅಮರನಾಥ್ ಅವರು ಮಡಿವಾಳ ಸಮುದಾಯದ ಸಮಾಜದ ಸೇವೆ ಮಾಡುತ್ತಾ ಮತ್ತು ಸಮಾಜದ ಅನೇಕ ಸಮಾವೇಶಗಳಿಗೆ ಆರ್ಥಿಕ ಸಹಾಯ, ಸಂಘಟನೆ ಮಾಡುತ್ತಾ ಬಂದಿದ್ದಾರೆ. ಮಾನ್ಯ ಕೆ. ವಿ. ಅಮರ್‌ನಾಥ್ ರವರು ಮಡಿವಾಳ ಸಮುದಾಯದ ಯಾವುದೇ ಸಮಸ್ಯೆಗೂ ಸ್ಪಂದಿಸಿ ನೆರವಾಗುವ ಮೂಲಕ ಸಮುದಾಯದ ಮುಂಚೂಣಿಯ ನಾಯಕರಾಗಿದ್ದಾರೆ. ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕೀಯ ಕ್ಷೇತ್ರಕ್ಕೆ ಬಂದು ಇವರು ಕಾಂಗ್ರೆಸ್ ಪಕ್ಷವನ್ನು ಸೇರಿ ಪಕ್ಷವನ್ನು ಸಂಘಟನೆ ಮಾಡಿ ತುಮಕೂರಿನಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಬೃಹತ್ ಜನ ಜಾಗೃತಿ ಸಮಾವೇಶವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸಿದರು. ಸಮಾಜ ಸೇವೆ ಎನ್ನುವುದು ಕೆ. ವಿ. ಅಮ‌ರನಾಥ್ ರವರ ರಕ್ತದಲ್ಲಿ ಬೆರೆತು ಹೋಗಿದೆ. ನೊಂದು ಬಂದವರನ್ನು ಯಾವತ್ತು ಬರಿಗೈಯಲ್ಲಿ ಕಳಿಸಿದವರಲ್ಲ. ಹಾಗೆಯೇ ಬದುಕಿನಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಸಹಾಯ ಮಾಡಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಸಮುದಾಯ ಭವನಗಳಿಗೆ ಸಹಾಯ ಹಸ್ತ ನೀಡಿದ್ದಾರೆ. ಮಡಿವಾಳ ಸಮುದಾಯದ ಪ್ರಮುಖರಾಗಿ ರಾಜಕೀಯ ದುರೀಣರಾಗಿ ಕಾಂಗ್ರೆಸ್ ಪಕ್ಷದ ಪ್ರಚಾರಕರಾಗಿ ಕೆಲಸ ನಿರ್ವಹಿಸಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಾಗಿರುವ ತಾವು ಆ ಸಮಾವೇಶದಲ್ಲಿ 'ರಾಜಕೀಯವಾಗಿ ನೀವುಗಳು ಹಿಂದುಳಿದಿದ್ದು ನಿಮಗೆ ರಾಜಕೀಯ ಶಕ್ತಿ ತುಂಬುತ್ತೇನೆ' ಎಂದು ಆಶ್ವಾಸನೆ ನೀಡಿದ್ದಿರಿ. ಮಡಿವಾಳ ಸಮಾಜವು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಅತ್ಯಂತ

ಹಿಂದುಳಿದ ಸಮಾಜವಾಗಿದ್ದು ಎಲ್ಲಾ 30 ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಹಾಗೂ ರಾಜ್ಯ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯದ ಮಡಿವಾಳ ಸಮುದಾಯದ ಅಮರನಾಥ ರವರನ್ನು ತಮ್ಮ ಘನ ಸರ್ಕಾರದಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಡಿಮ್ಯಾಂಡ್ ಮಾಡಿದರು. ಮಂಜುನಾಥ್ ಜಿ. ವೆಂಕಟರಾಮಯ್ಯ
ಖೈಮೊಬ್ರಿಸಾರ್
ಆರ್. ಮೂರ್ತಿ
ಬಿ. ಸುಬ್ರಹ್ಮಣ್ಯ ಗಿರಿಧರ್
ನಂದೀಶ್ ,
ದೇವೇಂದ್ರ. ಸಿದ್ದಗಂಗಯ್ಯ , ಉಮಾಪತಿ
ಕೆ.ವಿ. ಧ್ರುವಕುಮಾರ್
ವಿ. ಸೋಮಶೇಖರ್
ದೇವರಾಜು ಕರಿಯಪ್ಪ
ಡಿ.ಎನ್. ನರಸಿಂಹಮೂರ್ತಿ
ಪಿ.ಎಂ. ಪದ್ಮಾವತಿ ರವಿ ಮುಂತಾದವರು ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button