ಸುದ್ಧಿ

ಬರಬೇಕು ಬರಬೇಕು ತಿಪ್ಪೆಗೆ, ತಿಪ್ಪೆಯಂತಿರುವ ನಮ್ಮ ಬದುಕಿ ….ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಹು ಖುಷಿಯಿಂದ ಸ್ವಾಗತಿಸಿದ್ದಾರೆ.

ಕೇವಲ ಮೂರು ಜನ ಶಾಸಕರಿರುವ ಚಿಕ್ಕ ಜಿಲ್ಲೆ ಯಾದಗಿರಿ. ಆಡಳಿತ ನಿರ್ವಹಣೆ ತುಂಬಾ ಸರಳವಿರುವ ಜಿಲ್ಲೆ. ನಮ್ಮ ದುರಾದೃಷ್ಟ ಏನೆಂದರೆ ಈ ಜಿಲ್ಲೆಯನ್ನು ನಮ್ಮ ಚುನಾಯಿತ ರಾಜಕಾರಣಿಗಳು ಕಸದ ತೊಟ್ಟಿಯನ್ನಾಗಿಸಿದ್ದಾರೆ. ಭ್ರಷ್ಟರನ್ನು, ಎಲ್ಲೂ ಸಲ್ಲದವರನ್ನು, ಅಮಾನತುಗೊಂಡವರನ್ನು ಜಿಲ್ಲೆಗೆ ಹಾಕಿಸಿಕೊಂಡು ಭ್ರಷ್ಟರೊಂದಿಗೆ ತಾವೂ ಸೇರಿ ಇಲ್ಲಿ ಜನರಿಗೆ ಸಲ್ಲಬೇಕಾದ ಅಭಿವೃದ್ಧಿ ಹಣವನ್ನು ಅವ್ಯಾಹತವಾಗಿ ಲೂಟಿ ಮಾಡಲಾಗುತ್ತಿದೆ. ಇದರ ಪರಿಣಾಮ ಅತ್ಯಂತ ಸ್ಪಷ್ಟವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತಿದ್ದರೂ ಧ್ವನಿ ಇಲ್ಲ. ಭ್ರಷ್ಟರು, ಭ್ರಷ್ಟ ಕುಟುಂಬದ ಸದಸ್ಯರು ಇಲ್ಲಿ ಚುನಾಯಿಸಲ್ಪಡುತ್ತಾರೆ. ದೇವದುರ್ಗವನ್ನು ನಾಶ ಮಾಡಿದ ಈ ಖದೀಮರನ್ನು ಯಾದಗಿರಿ ಜಿಲ್ಲೆಗೆ ಅಮಾನತು ತೆರುವುಗೊಳಿಸಿ ನಿಯುಕ್ತಿಗೊಳಿಸಲಾಗಿದೆ, ವ್ಯಾಪಕ ವಿರೋಧವಿಲ್ಲ. ನಮ್ಮ ಶಾಸಕರು ಸುಮ್ಮನಿದ್ದಾರೆ, ನಮ್ಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬಹು ಖುಷಿಯಿಂದ ಸ್ವಾಗತಿಸಿದ್ದಾರೆ. ಬರಬೇಕು ಬರಬೇಕು ತಿಪ್ಪೆಗೆ, ತಿಪ್ಪೆಯಂತಿರುವ ನಮ್ಮ ಬದುಕಿಗೆ ಇಂತಹ ಕೆಟ್ಟ ಆರ್ಥಿಕ ಅಪರಾಧ ಎಸಗಿ ದೇವದುರ್ಗದಿಂದ ತಿರಸ್ಕಾರಗೊಂಡ ನೌಕರರು ನಮ್ಮನ್ನು ಉದ್ಧರಿಸಲು ಬರಬೇಕು, ಸ್ವಾಗತ ನಿಮಗೆ!

ಲಕ್ಷ್ಮೀಕಾಂತ ನಾಯಕ
098459 68164

Related Articles

Leave a Reply

Your email address will not be published. Required fields are marked *

Back to top button