ರಾಜ್ಯ

ಭಾರತಾಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತೀವ್ರಗೊಳಿಸಿ ಸಂಸದ ಜಿ ಕುಮಾರ ನಾಯಕ..

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಚಿವರು ಸಂಸದರಿಂದ ಜಂಟಿ ಸಭೆ.

ಯಾದಗಿರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ ಸಚಿವ ಶರಣಬಸಪ್ಪ ದರ್ಶನಾಪುರ.

ಭಾರತಾಮಾಲಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ತೀವ್ರಗೊಳಿಸಿ ಸಂಸದ ಜಿ ಕುಮಾರ ನಾಯಕ..

ಇದು ಯಾದಗಿರಿ ಜಿಲ್ಲೆಯ ಸಚಿವರ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮೆಗಳ ಇಲಾಖೆಯ ಸಚಿವರಾದ ಶ್ರೀ ಶರಣಬಸವ ದರ್ಶನಾಪುರ್ ರವರು ಹಾಗೂ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಜಿ ಕುಮಾರ ನಾಯಕ ರವರು ಜಂಟಿಯಾಗಿ ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ಭಾರತ್ ಮಾಲಾ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗಳನ್ನು ತೀವ್ರಗೊಳಿಸಿ ಕುರಿತು ಸರ್ವಿಸ್ ರೋಡ್ ಗಳ ನಿರ್ಮಾಣ, ರೈತರ ಹೊಲಗಳಿಗೆ ಅಂಡರ್ ಪಾಸ್ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಪ್ಯಾಕೇಜ್ -3 ದೇವದುರ್ಗ ತಾಲೂಕಿನ ಬಸಂತಪುರದಿಂದ ಯಾದಗಿರಿ ಜಿಲ್ಲೆಯವರೆಗೆ ಕಾಮಗಾರಿ ನಡೆದಿದ್ದು ಇದು ನನ್ನ ಲೋಕಸಭಾ ಕ್ಷೇತ್ರದ ಅನ್ವಯಿಸುವುದರಿಂದ ಈ ಕಾಮಗಾರಿಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು ಅಲ್ಲದೆ ಶಾಹಪುರ ತಾಲೂಕು ಜನಸಂಖ್ಯೆ ದಟ್ಟಣೆ ದಿನೇ ದಿನೇ ಬೆಳೆಯುತ್ತಿರುವುದರಿಂದ ಶಾಹಪುರ ಬಿ,ಗುಡಿಯಿಂದ ಶಾಹಪುರ ಹೊರವಲಯದ ವರೆಗೆ ಬೈಪಾಸ್ ನಿರ್ಮಾಣ ಅಗತ್ಯ ಇರುವುದರಿಂದ ಬೈಪಾಸ್ ಸಂಬಂಧಿಸಿದಂತೆ ನಿಲಾನಕ್ಷೆ ರೂಪಿಸಿ ಕೇಂದ್ರದ ಹೆದ್ದಾರಿ ರಸ್ತೆ ಸಾರಿಗೆ ಸಚಿವರನ್ನು ಭೇಟಿಯಾಗಿ ಬೈಪಾಸ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಚಿವರು ನಾವು ಕೇಂದ್ರ ಸರ್ಕಾರದ ಸಚಿವರನ್ನು ಬೇಟೆಯಾಗಿ ಈ ವಿಷಯದ ಕುರಿತು ಪ್ರಸ್ತಾಪಿಸುತ್ತೇವೆ ಎಂದು ಹೇಳಿದರು, ಸಿಂದಗಿ ಕೋಡಂಗಲ್ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬದ ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು, ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸುಶೀಲಾ ಬಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಪೃಥ್ವಿಕ್ ಶಂಕರ್, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಶ್ರೀ ಮಿಲಿಂದ್ ವಾಬಳೆ ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಜ್ಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಜರಿದರು .

.

Related Articles

Leave a Reply

Your email address will not be published. Required fields are marked *

Back to top button