ಯಾವ ಪಕ್ಷಕ್ಕೆ ಓಟು ಹಾಕಬೇಕು ಅಂತಿರಾ? ಉದಾಹರಣೆಗೆ ಬಿ.ಜೆ.ಪಿ.ಗೆ….

ಯಾವ ಪಕ್ಷಕ್ಕೆ ಓಟು ಹಾಕಬೇಕು ಅಂತಿರಾ? ಉದಾಹರಣೆಗೆ ಬಿ.ಜೆ.ಪಿ.ಗೆ ಓಟು ಹಾಕೋಣವೆಂದರೆ. ಗಟ್ಸ ಇಲ್ಲದ, ಲೀಡರ್ ಅಲ್ಲದ ವ್ಯಕ್ತಿಗೆ ಮುಖ್ಯಮಂತ್ರಿ ಮಾಡುತ್ತಾರೆ. ಯಡೆಯೂರಪ್ಪಾಜೀ ಯಡವಟ್ಟುಗಳು ಹ್ಯಾಗಿವೆ ಎಂದರೆ ಹಿಂದೆ ತಾವು ಹೇಳಿದ ವ್ಯಕ್ತಿಯೇ ಮುಖ್ಯಮಂತ್ರಿಯನ್ನಾಗಿ ಮಾಡಿದರು ೧) ಸದಾನಂದಗೌಡ ಅರ್ಹರಲ್ಲದವರಿಗೆ ಅಧಿಕಾರ ಕೊಟ್ಟರೇ ಏನಾಗುತ್ತದೆ ಎನ್ನುವುದನ್ನು ತೋರಿಸಿದರು. ೨ ನೇ ಬಾರಿ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರು. ಆ ಯಪ್ಪ ಮಿಲೇತೋ ಮಾರಿ ನಹಿ ತೋ ಸದಾ ಭ್ರಹ್ಮಚಾರಿ ಎನ್ನುವಂತೆ ಕರ್ನಾಟಕ ರಾಜ್ಯದ ಆಡಳಿತವನ್ನು ಅಜ್ಜನ ಕೋಲು ಬುಜಕ್ಕೆ ಹಾಕಿಕೊಂಡು ಮುಂದೆ ಮುಂದೆ ನಡೆದಂತೆ ನಡೆದರು.ಅವರ ಅಧಿಕಾರಾವಧಿಯಲ್ಲಿ ವಿಧಾನಸಭಾ ಚುನಾವಣೆಯಾಗಿ ಪಕ್ಷ ಬೊರಲು ಮಲಗಿತು. ಈ ಬಾರಿ ಬಸವರಾಜ ಬೊಮ್ಮಾಯಿಯವರನ್ನು ಸಿ.ಎಮ್. ಮಾಡಿದರು ಅವರೋ, ಅದೆಂಥಹ ಕೆಟ್ಟ. ಮತ್ತು ನಿಧಾನಗತಿಯ ಆಡಳಿತ ನಡೆಯಿಸಿದರು. ಎಂದರೇ, ಬೊಮ್ಮಾಯಿಯವರ ಆಡಳಿತದಲ್ಲಿ ಆಡಳಿತ ಹ್ಯಾಗಿದೆ ಸ್ವಾಮಿ ಎಂದು ಫೋನ್ ನಲ್ಲಿ ಕೇಳಿದ ವ್ಯಕ್ತಿಗೆ ಆಡಳಿತ ನಡೆಯುತ್ತಿಲ್ಲ. ನಾವೇ ನೂಕಿಕೊಂಡು ಹೊಗುತ್ತಿದ್ದೆವೆ ಎಂದು ಮಧುಸ್ವಾಮಿಯವರು ಉತ್ತರಿಸಿರುವ ಆಡಿಯೋ ನೀವು ಕೇಳಿರಬೇಕು ಅಲ್ಲವೇ? ೪೦ ಪರ್ಸೆಂಟ ಸರಕಾರ ಎಂದು ಕಾಂಗೈನವರು ಹೋದಲ್ಲಿ ಬಂದಲ್ಲಿ ಕೂಗಾಡುತ್ತಾ ಜನರ ಮನಸ್ಸಿನಲ್ಲಿ ಗಾಢವಾಗಿ ಬಿತ್ತಿದರು. ಚುನಾವಣೆಯಲ್ಲಿ ಆ ವಿಷಯವೇ ದೊಡ್ಡದಾಗಿ ಬಿಂಬಿಸಿದರು ಕಾಂಗೈ ಆಯ್ಕೆಯಾಗಲು ಈ ವಿಷಯೂ ಕಾರಣವಾಯಿತು.
ಯಡಿಯ್ಯೂರಪ್ಪಾಜಿಗೆ ಈ ರಾಜ್ಯ ಲಿಂಗಾಯತರೇ ಆಡಳಿತ ನಡೆಯಿಸಬೇಕು. ಅದೂ ತನ್ನ ಛೇಲಾನೇ ಆಗಿರಬೇಕು ಎಂಬ ಮನಸ್ತಿತಿ ಇರುವವರು. ಕಳೆದ ಬಾರಿಯ ಚುನಾವಣೆಯಲ್ಲಿ ಏನಾಯಿತು? ೬೬ ಬಿ.ಜೆ.ಪಿ ಶಾಸಕರು ಆಯ್ಕೆಯಾದರು. ಸುಮಾರು ೫೦+ ಸ್ಥಾನದಲ್ಲಿ ೫೦೦, ೧೦೦,೧೫೦೦ ಓಟುಗಳಿಂದ ಬಿ.ಜೆ.ಪಿಯ ಅಭ್ಯೆರ್ಥಿಗಳು ಸೋತಿದ್ದಾರೆ.
ಯಡಿಯ್ಯೂರಪ್ಪಾಜಿಯ ಬಾಲ್ಯದ ಗೆಳೆಯ ಈಶ್ವರಪ್ಪನವರನ್ನು ಸಿ.ಎಮ್. ಮಾಡಬಹುದಾಗಿತ್ತು. ಯತ್ನಾಳರನ್ನು ಸಿ.ಎಮ್.ಮಾಡಬಹುದಿತ್ತು ಆ ಕೆಲಸ ಮಾಡಲೇ ಇಲ್ಲ. ಸಮರ್ಥ ಅಭ್ಯಾರ್ಥಿಯಿಂದ ಮಾತ್ರ ಆಡಳಿತ ನಡೆಯಿಸಲು ಸಾಧ್ಯಾ. ಬಿ.ಜೆ.ಪಿಯಲ್ಲಿ ಸಮರ್ಥ ಅಭ್ಯರ್ಥಿ ಸಿ.ಎಮ್. ಆಗಿದ್ದಿದ್ದರೇ ಕಾಂಗೈನವರ ಯಾವ ಗ್ಯಾರಂಟಿ ಗಿಮಿಕ್ ಕೆಲಸ ಮಾಡಿತ್ತಿರಲಿಲ್ಲ. ಉದಾ. ರಾಜಸ್ಥಾನ ರಾಜ್ಯದ ಚುನಾವಣೆ.




