ಸಂಪಾದಕೀಯ

ಯೋಗಿಗೆ, ಭೋಗಿಗೆ, ತ್ಯಾಗಿಗೆ, ಸಂಸಾರಿಗೆ, ಸ್ವಾರ್ಥಿಗೆ, ಪರಮಾರ್ಥಿಗೆ,…….….ಅಮರದೇವ.

ಯೋಗಿಗೆ, ಭೋಗಿಗೆ, ತ್ಯಾಗಿಗೆ, ಸಂಸಾರಿಗೆ, ಸ್ವಾರ್ಥಿಗೆ, ಪರಮಾರ್ಥಿಗೆ, ವಿದ್ಯಾರ್ಥಿಗೆ, ಅರ್ಥಾರ್ಥಿಗೆ, ಅಭ್ಯರ್ಥಿಗೆ, ಅಪಾರ್ಥಿಗೆ, ಅಂತ್ಯಾರ್ಥಿಗೆ ಅದೆಲ್ಲರಿಗೂ ಸಮಾಧಾನ ಅವಶ್ಯ – ಅತ್ಯವಶ್ಯ.

” ಸಮಾಧಾನ ” ದ ಒಂದು ಮುಖವೇ “ಸಹನೆ”. ಸಹನೆಯ ವಜ್ರ ಕವಚ ನಮ್ಮೆಲ್ಲರಿಗೂ ಅಗತ್ಯ.

ಸಮಾಧಾನವಿದು ದೌರ್ಬಲ್ಯವಲ್ಲ. ಇದೊಂದು ಪ್ರಬಲ ಹಾಗೂ ಪ್ರಮುಖ ಅಸ್ತ್ರ. ಮನೋ ಸಂಕಲ್ಪದ ತಾರಕ ಮಂತ್ರವೇ ಸಮಾಧಾನ.

ಸಮಾಧಾನ ಅಂಗಡಿ ಮುಂಗಟ್ಟುಗಳಲ್ಲೋ, ಮಾರ್ಕೇಟ್ – ಮಾಲ್ ಗಳಲ್ಲೋ, ಚೈನಾ ಬಜಾರನಲ್ಲೋ, ಮೆಟ್ರೋ ಸಿಟಿಯಲ್ಲೋ ಸಿಗುವ ವಸ್ತುವಲ್ಲ.

ಹಳ್ಳಿಯಲ್ಲೋ, ದಿಲ್ಲಿಯಲ್ಲೋ, ಮೆಟ್ರೋಪಾಲಿಟನ್ ಸಿಟಿಯಲ್ಲೋ, ಕಾಸ್ಮೋ ಪಾಲಿಟನ್ ನಗರಗಳಲ್ಲೋ ದೊರಕುವ ಸರಕಲ್ಲ.

ಸ್ಮಾರ್ಟ್ ಸಿಟಿಯಲ್ಲಿ, ಪಿಂಕ್ ಸಿಟಿಯಲ್ಲಿ, ಗಾರ್ಡನ್ ಸಿಟಿಯಲ್ಲಿ, ಟೆಂಪಲ್ ಸಿಟಿಯಲ್ಲಿ, ಪಾಲೇಸ್ ಸಿಟಿಯಲ್ಲಿ, ಲೇಕ್ ಸಿಟಿಯಲ್ಲಿ ಸಿಗುವ ಸಾಮಗ್ರಿಯಲ್ಲ.

ಭವ್ಯ ಅರಮನೆಗಳಲ್ಲಿ, ದಿವ್ಯ ದೇವಾಲಯಗಳಲ್ಲಿ, ನವ್ಯ ರೆಸಾರ್ಟ್ ಗಳಲ್ಲಿ, ವ್ಯೂಹ ಕಾರಿಡಾರ್ ಗಳಲ್ಲಿ ಕಾಣುವ ವೈಭೋಗವಲ್ಲ.

ಅದಲ್ಲ, ಇದಲ್ಲ, ಅಹುದಲ್ಲ, ಅಲ್ಲಲ್ಲ, ಇಲ್ಲಲ್ಲ, ಮತ್ತಲ್ಲ, ಮುಂದಲ್ಲ, ಮಗದಲ್ಲ, ಎಲ್ಲವೂ ಅಲ್ಲ..ಅಲ್ಲ… ಅಲ್ಲ…. ಎನ್ನುವುದಾದರೆ……???

……….ಅಮರದೇವ.

Related Articles

Leave a Reply

Your email address will not be published. Required fields are marked *

Back to top button