ಸಂಪಾದಕೀಯ

ರಾಮವಾಡಗಿ ಗ್ರಾಮದ ಸರಕಾರದ ಜಮೀನು ಸರ್ವೇ ನಂ : 240 */1/2 ರಲ್ಲಿ 1.35 ಬಡವರಿಗೆ ಜಮೀನು ಮಂಜೂರು ಪಡಿಸಲು ಒತ್ತಾಯ

ಮಾನ್ಯ ಶ್ರೀ ಸಿದ್ದರಾಮಯ್ಯನವರು,
ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಘನ ಸರಕಾರ ಬೆಂಗಳೂರು ಇವರಿಗೆ

ಮಾನ್ಯ ತಹಶೀಲ್ದಾರ ರವರು ಹುನಗುಂದ ತಾಲೂಕು ಇವರ ಮೂಲಕ ಮನವಿ ಪತ್ರ.

ವಿಷಯ : ರಾಮವಾಡಗಿ ಗ್ರಾಮದ ಸರಕಾರದ ಜಮೀನು ಸರ್ವೇ ನಂ : 240 */1/2 ರಲ್ಲಿ 1.35 ಬಡವರಿಗೆ ಜಮೀನು ಮಂಜೂರು ಪಡಿಸಲು ಒತ್ತಾಯ ಕುರಿತು ದೂರು.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ರೈತರು ಮುಖಾಂತರ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ,
ಸರ್ಕಾರದ ಜಮೀನುಗಳನ್ನು ಮಂಜೂರು ಪಡಿಸಲು ಈಗಾಗಲೇ ಮಾನ್ಯ ತಹಶೀಲ್ದಾರ ಹುನಗುಂದ ರವರ ಮೂಲಕ ಸಾಕಷ್ಟು ಬಾರಿ ಜಮೀನು ಮಂಜೂರಾತಿಗೆ ಮನವಿ ಸಲ್ಲಿಸಿರುತ್ತೇವೆ, ಹುನಗುಂದ ತಾಲ್ಲೂಕು ಪೈಕಿ ರಾಮವಾಡಗಿ ಗ್ರಾಮದ ಸರ್ಕಾರದ ಜಮೀನು ಸರ್ವೆ ನಂ: 240 / 2 ರಲ್ಲಿ ಒಂದು (1) ಎಕರೆ 35 ಗುಂಟೆ ಸರ್ಕಾರದ ವಡಾ ಜಮೀನು ಆಗಿದ್ದು ಪೋಕಳ ಜಮೀನು ಇರುತ್ತದೆ ಎಂದು ಮಾನ್ಯ ತಹಶೀಲ್ದಾರ ಹುನಗುಂದ ರವರು ಹಿಂಬರಹ ನೀಡಿರುತ್ತಾರೆ ಇದನ್ನು ಕಡು ಬಡವರಿಗೆ ಜಮೀನಿಲ್ಲದವರಿಗೆ ( ಹನಮಂತ ರಾಮಪ್ಪ ಮಾದರ. ಸಾ : ರಾಮವಾಡಗಿ ) ಮಂಜೂರು ಪಡಿಸಬೇಕು ಎಂದು ರೈತರ ಒತ್ತಾಯವಾಗಿದ್ದು
ಒಟ್ಟು ಕ್ಷೇತ್ರ :4.20 ರಲ್ಲಿ ಇದನ್ನು 2.25 ( ಎರಡು ಎಕರೆ ಇಪ್ಪತೈದು ಗುಂಟೆ ಸರ್ಕಾರದ ಜಮೀನು / ವಡಾ ಗೋಮಾಳ ಇದೆ ) ಶ್ರೀಮಂತರಿಗೆ ಜಮೀನು ಇದ್ದವರಿಗೆ ಈಗಾಗಲೇ ಕೊಟ್ಟಿರುತ್ತಾರೆ ಕೂಡಲೇ ಆರ್ ಟಿ ಸಿ ಯಲ್ಲಿ ತಿದ್ದುಪಡಿ ಮಾಡಬೇಕು ಹಳೆ ಆರ್ ಟಿ ಸಿ ಯದನ್ನು ರದ್ದುಪಡಿಸಬೇಕು.
SC / St ಜನಾಂಗದವರಿಗೆ,ಬಡವರಿಗೆ, ನಿರ್ಗತಿಕರಿಗೆ,ಜಮೀನಿಲ್ಲದವರಿಗೆ ಹಂಚಿಕೆ ಮಾಡಿಕೊಡಬೇಕೆಂದು ಒತ್ತಾಯ.
ಇಲ್ಲವಾದಲ್ಲಿ ಬಡ ಕೂಲಿ ಕಾರ್ಮಿಕ ರೈತರು ತೀವ್ರವಾದ ಸಂಕಷ್ಟಕ್ಕೆ ಒಳಗಾಗುವುದು ನಿಶ್ಚಿತ, ಸರಕಾರದ ಭೂಮಿಯನ್ನು ಬೇಗನೆ ದೊರಕಿಸಿ ಕೊಡುವ ವ್ಯವಸ್ಥೆಯನ್ನು ಕೂಡ ಕೈಗೊಳ್ಳಬೇಕು.
ಇಲ್ದಿದ್ರೆ ಬಡ ಕೂಲಿ ಕಾರ್ಮಿಕ ರೈತರು ತಮ್ಮ ಬದುಕಿನ ಉಳಿವಿಗಾಗಿ ಬೀದಿಗಿಳಿದು ತೀವ್ರವಾದ ಹೋರಾಟವನ್ನು ಅನಿವಾರ್ಯವಾಗಿ ಬೆಂಗಳೂರು ಪ್ರಿಡಂ ಪಾರ್ಕ್ ನಲ್ಲಿ ಧರಣಿ, ಹೋರಾಟ ಕೈಗೊಳ್ಳಬೇಕಾಗುತ್ತದೆ.ಎಂದು ಎಚ್ಚರಿಕೆ ನೀಡಿರುತ್ತಾರೆ ತಮ್ಮಲ್ಲಿ ನಾವು ವಿನಂತಿ ಪೂರ್ವಕವಾಗಿ ಮನವಿ ಮಾಡಿಕೊಳ್ಳುವುದಲ್ಲದೆ ಆರೋಪ ಮಾಡಿರುತ್ತಾರೆ. ಘನತೆ ಯತ್ತ ಸರ್ಕಾರವು ಸೂಕ್ತ ಕಾನೂನು ಕ್ರಮ ಜರುಗಿಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಚೀಮಾರಿ ಹಾಕಿರುತ್ತಾರೆ ಎಂದು ಪ್ರಜಾಶ್ರೀ ಪತ್ರಿಕೆ ಸಂಪಾದಕರು ಹನಮಂತ ಮಾದರ ಬಾಗಲಕೋಟ ಮಾಹಿತಿ ಯನ್ನು ಸಂಗ್ರಹಿಸಿದ್ದಾರೆ.

ದಿನಾಂಕ : 23.06.2025.

ಪ್ರತಿ ಹಂಚಿಕೆ :

Related Articles

Leave a Reply

Your email address will not be published. Required fields are marked *

Back to top button