ಪತ್ರಿಕೋದ್ಯಮ

ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಂಕ್ಲೇವ್ 2026 ಅನ್ನು ದಿನಾಂಕ 29/01ರಿಂದ 01/02/ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ. ಬೆಂಗಳೂರು.

ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಂಕ್ಲೇವ್

ಬೆಂಗಳೂರು. ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ನಾಲ್ಕನೇ ಐ ಎಲ್ ವೈ ಎಫ್ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾಂಕ್ಲೇವ್ 2026 ಅನ್ನು ದಿನಾಂಕ 29/01ರಿಂದ 01/02/ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಆಯೋಜನೆಮಾಡಲಾಗುತ್ತಿದೆ ಎಂದು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . 29 ರಂದು ಸಂಜೆ 04:30 ಕ್ಕೆ ನಡೆಯುವ ಉದ್ಘಾಟನ ಸಮಾರಂಭಕ್ಕೆ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು, ಸಚಿವರಾದ ಎಂ ಬಿ ಪಾಟೀಲ್, ಈಶ್ವರ್ ಖಂಡ್ರೆ, ಶರಣಬಸಪ್ಪ ದರ್ಶನಾಪುರ್ ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮುಂತಾದ ಗಣ್ಯರೂ, ದಿನಾಂಕ 01 ರಂದು ಸಂಜೆ 04:30 ಕ್ಕೆ ನಡೆಯುವ ಸಮಾರೋಪ ಸಮಾರಂಭಕ್ಕೆ ಬಸವ ತತ್ವ ಪೀಠದ ಶ್ರೀ ಬಸವ ಸ್ವಾಮೀಜಿಗಳು, ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್, ವಿಜಯಾನಂದ ಎಸ್ ಕಾಶಪ್ಪನವರ್, ನಿವೃತ್ತ ಐಪಿಎಸ್ ಅಧಿಕಾರಿಯದ ಶಂಕರ್ ಬಿದರಿ, ಮುರುಗೇಶ್ ನಿರಾಣಿ, ಶ್ರೀಮತಿ ರಾಣಿ ಸತೀಶ್, ನವೀನ್ ಕೆ ಎಸ್ ಮುಂತಾದ ಗಣ್ಯರು, ಉದ್ಯಮಿಗಳು ಕೈಗಾರಿಕಾ ನಾಯಕರು, ನೀತಿ ನಿರ್ಣಾಯಕರು, ಸ್ಟಾರ್ಟ್ ಅಪ್ ಗಳು, ಎಂಎಸ್ಎಂಇ ಹಾಗೂ ಜಾಗತಿಕ ವ್ಯಾಪಾರ ಪ್ರತಿನಿಧಿಗಳು ಸೇರಿದಂತೆ, ಈ ನಾಲ್ಕು ದಿನದ ಕಾರ್ಯಕ್ರಮದಲ್ಲಿ ಸುಮಾರು 40 ರಿಂದ 50,000 ಜನ ಬಂದು ಹೋಗುವ ಸಾಧ್ಯತೆ ಇರುತ್ತದೆಂದು ಹಾಗೂ ಇಲ್ಲಿಗೆ ಆಗಮಿಸುವ ಸಾರ್ವಜನಿಕರು ಹಾಗೂ ಗಣ್ಯರಿಗೆ ಮೂಲಭೂತ ಸೌಕರ್ಯಗಳನ್ನು ನೀಡುತ್ತಿವೆಂದರು. ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಸಂತೋಷ್ ಕೆ ಶಿವಕುಮಾರ್ ಶೆಟ್ಟಿ, ಪ್ರತಾಪ್ ಆರಾಧ್ಯ, ವಿದ್ಯಾಪಟೇಲ್, ವಿನಯ್, ಮಹದೇವ ಸ್ವಾಮಿ ಮುಂತಾದವರು ಪತ್ರಿಕಾ ಗೋಷ್ಠಿ ಯಲ್ಲಿ ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button