ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.ಸನ್ಮತಿ. ವಿ. ಎಸ್. ಡಿಸ್ಟ್ರಿಕ್ಟ್ ಟಾಪರ್.98.16. ಅಭಿನಂದನೆಗಳು.
ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ
ಸುರಪುರ : ನಗರದ ಶ್ರೀಮತಿ ಎನ್ ಎನ್ ಶೆಟ್ಟಿ ಪದವಿಪೂರ್ವ ವಿಜ್ಞಾನ ಕಾಲೇಜಿನ ಪಿಯು ವಿದ್ಯಾರ್ಥಿಗಳು 2023-24 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಒಟ್ಟು 237 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಕಾಲೇಜಿಗೆ ಶೇಕಡಾ 100% ಫಲಿತಾಂಶ ಬಂದಿದ್ದು ಆ ವಿದ್ಯಾರ್ಥಿಗಳ ಪೈಕಿ ಅತ್ಯುನ್ನತ ಶ್ರೇಣಿಯಲ್ಲಿ 32 ವಿದ್ಯಾರ್ಥಿಗಳು, ಉನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್ )42 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 162 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 01 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇವರಲ್ಲಿ ಸನ್ಮತಿ ತಂದೆ ವಿಷ್ಣು ಗುತ್ತೇದಾರ್ (98.16%), ಪ್ರತಿಭಾ ತಂದೆ ಅಶೋಕ್( 96.16%), ರಾಮಚಂದ್ರ ತಂದೆ ಮಲ್ಲಯ್ಯ( 95.33%) , ಸುಪ್ರಿಯಾ ತಂದೆ ಚಿನ್ನಪ್ಪ (95.16%), ತೇಜಸ್ವಿನಿ ತಂದೆ ವಿರೂಪಾಕ್ಷ (95.16%), ರಾಧಿಕಾ ತಂದೆ ನಾಗಪ್ಪ( 95.16%),ಭಾಗಮ್ಮ ತಂದೆ ನಾಗಪ್ಪ (93.83%), ಸೀಮಾ ತಂದೆ ಪರಶುರಾಮ್ (93.50%),ವೈಷ್ಣವಿ ತಂದೆ ಸುರೇಶ್( 93.33%) ,ಸಿಂಧು ತಂದೆ ಗುರಣ್ಣ (93.16%), ಅಭಿಷೇಕ್ ತಂದೆ ಅಮರಪ್ಪ(93.16%),ಪ್ರತಿಶತದೊಂದಿಗೆ ಅಂಕ ಪಡೆದು ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು 3 ವಿದ್ಯಾರ್ಥಿಗಳು ಪಡೆದಿದ್ದಾರೆ. ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದು ಸನ್ಮತಿ ತಂದೆ ವಿಷ್ಣು ಗುತ್ತೇದಾರ್ ಯಾದಗಿರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಬೂದೆಪ್ಪ ಎನ್ ಶೆಟ್ಟಿ, ಕಾರ್ಯದರ್ಶಿಗಳಾದ ತಿರುಪತಿ ಎನ್ ಶೆಟ್ಟಿ , ಪ್ರಾಚಾರ್ಯರಾದ ಲಕ್ಷ್ಮಿ ಬಿ ಶೆಟ್ಟಿ ಹಾಗೂ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.




