ಸಂವಿಧಾನ ವಿರೋದ್ಧಿ ಹೇಳಿಕೆ ಖಂಡನಿಯ. ಕನಕಗಿರಿ.

ಸಂವಿಧಾನ ವಿರೋದ್ಧಿ ಹೇಳಿಕೆ ಖಂಡನಿಯ
ಸಂಸದ ಅನಂತ್ ಕುಮಾರ್ ಹೆಗಡೆಯವರು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಸಂಸದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕನಕಗಿರಿ ತಾಲೂಕಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ಮಾಡಲಾಯಿತು ಈ ಸಂಧರ್ಭದಲ್ಲಿ ಮಾತನಾಡಿದ ಪಾಮಣ್ಣ ಅರಳಿಗನೂರ ಸಂಸದ ಅನಂತ ಕುಮಾರ್ ಹೆಗಡೆ ಅವರು ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಪದೆ ಪದೆ ಆಡುತ್ತಿರುವುದು ಖಂಡನಿಯವಾಗಿದೆ ಅವರು ರೀತಿಯಲ್ಲಿ ಪದೆಪದೆ ಮಾತನಾಡುವುದನ್ನು ಗಮನಿಸಿದರೆ ಇವರು ಮನುಸ್ಮೃತಿಯನ್ನು ಜಾರಿಗೆ ತರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ ಎಂದರು.
ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಸಂಸದ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೋಳ್ಳಬೇಕೆಂದು. ಕನಕಗಿರಿ ತಸಿಲ್ದಾರ್ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಾಂತಪ್ಪ ಬಸರಿಗಿಡ,ಕನಕಪ್ಪ ಮ್ಯಗಡೆ, ಬಾಲರಾಜ್ ಸೋಮಸಾಗರ್, ದುರಗಪ್ಪ ಕಲಕೇರಿ ಇತರರು ಇದ್ದರೂ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



