ಸಚಿವ ತಂಗಡಗಿ ಅವಹೇಳನ ಹೇಳಿಕೆಗೆ ವಿರೋಧ : ಬಿಜೆಪಿ ಮಾಜಿ ಶಾಸಕ ಬಸವರಾಜ್ ದಡೆಸೂಗೂರ್ ಗರಂ!

ಸಚಿವ ತಂಗಡಗಿ ಅವ್ವೇಳನ ಹೇಳಿಕೆ ವಿರೋಧ : ಬಿಜೆಪಿ ಮಾಜಿ ಶಾಸಕ ಬಸವರಾಜ್ ದಡೆಸೂಗೂರ್ ಗರಂ!
ಕನಕಗಿರಿ ಮುತ್ತು ಕಾರ್ಟಗಿ ಪಟ್ಟಣಗಳಲ್ಲಿ ಮೋದಿ ವಿರುದ್ಧ ಮಾತನಾಡಿದ ಸಚಿವ ಸಚಿವರಾಜ್ ತಂಗಡಗಿ ಅವರ ವಿರುದ್ಧ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡುವ ಮೂಲಕ ಹೆಚ್ಚುವ ತಂಗಡಗಿ ಅವರು ಕ್ಷಮೆ ಯಾಚಿಸಬೇಕೆಂದು ಧಿಕ್ಕಾರಗಳನ್ನು ಕೂಗುತ್ತಾ ಕಾರ್ಯಕರ್ತರು ಪ್ರತಿಭಟನೆ ಮಾಡಿದರು ನಂತರ ಮಾತನಾಡಿದ ಕನಕಗಿರಿ ಕ್ಷೆತ್ರದ ಮಾಜಿ ಶಾಸಕರಾದ ಬಸವರಾಜ್ ದಡೆಸೂಗೂರು ರವರು ಮಾತನಾಡಿ ದೇಶದ ಗೌರವಾನ್ವಿತ ವಿಶ್ವಕಂಡ ಮಹಾನ್ ನಾಯಕ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತೇವೆ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಗಿ ಯವರು ಇಂದಿನ ಯುವಕರ ಬಾಯಿಯಲ್ಲಿ ಮೋದಿ ಅನ್ನೋ ಪದ ಬಂದರೆ ಕಪಾಳ ಮೋಕ್ಷ ಮಾಡಿ ಎಂದು ಅವಹೇಳನಕಾರಿ ಹೇಳಿಕೆ ಯಾವ ನೈತಿಕತೆ ಇಟ್ಟುಕೊಂಡು ದೇಶದ ಪ್ರಧಾನಿಗಳನ್ನು ಟಿಕೀಸುತ್ತಿದ್ದಾರೆ ಇಂತಹ ಅಶಾಂತಿಯ ಪದಗಳ ಮಾತುಗಳನ್ನ ನಿಲ್ಲಿಸಿಬೇಕು ಒಂದು ವೇಳೆ ಇದೆ ರೀತಿ ಮುಂದುವರೆದರೆ ಮುಂದಿನ ದಿನಮಾನಗಳಲ್ಲಿ ಭಾ. ಜ. ಪಾ ಪಕ್ಷದ ವತಿಯಿಂದ ಮತ್ತು ಯುವ ಮೋರ್ಚಾದ ವತಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಶಿವರಾಜ್ ತಂಗಡಗಿಯವರಿಗೆ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠವನ್ನು ಕಲಿಸಲು ಸಿದ್ದರಿದ್ದಾರೆ, ನಿಮ್ಮ ಇಂತಹ ಅವಹೇಳನಕಾರಿ ಹೇಳಿಕೆಯು ತಪ್ಪು ಎಂದು ಒಪ್ಪಿಕೊಂಡು ಭಹಿರಂಗ ಸಭೆಯಲ್ಲಿ ಕ್ಷೆಮೆಯಾಚಿಸಬೇಕು ಎಂದು ಕಾರ್ಯಕರ್ತರು ಪ್ರತಿಭಟಿಸಿದರು .
ಈ ಸಂದರ್ಭದಲ್ಲಿ ಕನಕಗಿರಿ ಮಂಡಲ ಅಧ್ಯಕ್ಷರಾದ ಜಡಿಯಪ್ಪ ಮುಕ್ಕುಂದಿ, ಪ್ರ. ಕಾರ್ಯದರ್ಶಿ ಪ್ರಕಾಶ್ ಹಾದಿಮನಿ ಮತ್ತು ಗ್ಯಾನಪ್ಪ ಗಾಣದಾಳ, ಪ. ಪಂಚಾಯತ್ ಸದಸ್ಯರಾದ ಸುರೇಶಪ್ಪ ಗುಗ್ಗಳಶೆಟ್ಟಿ,ಮುಖಂಡರಾದ ಪಂಚಯ್ಯ್ ತಾತ, ರವಿ ಭಜಂತ್ರಿ, ನಿಂಗಪ್ಪ ನಾಯಕ, ರಂಗಪ್ಪ ಕೊರಗಟಗಿ, ಹರೀಶ್ ಪೂಜಾರ್, ಹುಲಿಗೆಮ್ಮ ನಾಯಕ, ಸುಭಾಸ್ ಕಂದಕೂರ್,ಪಂಪನಗೌಡ ಆಕಳಕುಂಪಿ, ಮಂಜುನಾಥ್ ಸ್ವಾಮಿ, ಬಸವನಗೌಡ ಹೇರೂರ್, ಚಿದಾನಂದ್ ಜಿರಾಳ, ನಾಗರಾಜ್ ಭಾವಿಕಟ್ಟಿ,ವಿರುಪಣ್ಣ ಶೆಟ್ಟರ್,ಶಶಿ ಕೋರಿ, ಉಮೇಶ್ ಮ್ಯಾಗಡೆ, ಕನಕರಾಯ್ ಡ್ಯಾಗಿ,ನಾಗರಾಜ್ ತಗ್ಗಿನಮನಿ,ಮತ್ತು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




