ಸುದ್ಧಿ
ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ ಶಾಖಾಮಠ ಅವರು ಸಿಂಧನೂರು ಅರಣ್ಯ ಇಲಾಖೆಗೆ ಭೇಟಿ
ಸಿಂಧನೂರಿನ ಕರಿಬಸವ ನಗರದ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ರಂಭಾಪುರಿ ಶಾಖಾಮಠ ಅವರು ಸಿಂಧನೂರು ಅರಣ್ಯ ಇಲಾಖೆಗೆ ಭೇಟಿ ನೀಡಿ ಈ ಬಾರಿ ಸಾರ್ವಜನಿಕರಿಗೆ ಹಾಗೂ ವನಸಿರಿ ಫೌಂಡೇಶನ್ ಮತ್ತು ಇನ್ನಿತರ ಸಂಘ ಸಂಸ್ಥೆಗಳಿಗೆ ವಿತರಿಸುವ ಸಸಿಗಳನ್ನು ಬೆಳಸಿರುವುದನ್ನು ನೋಡಿ ತುಂಬಾ ಸಂತೋಷದಿಂದ ಇಲಾಖೆಯ ಅಧಿಕಾರಿಗಳಾದ ರುದ್ರಮುನಿ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿದರು .
ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ, ವೀರೇಶ ಸಾನಬಾಳ ಉದ್ಯಮಿಗಳು ಹಾಗೂ ಪರಿಸರ ಪ್ರೇಮಿಗಳು,ಅರಣ್ಯ ಇಲಾಖೆಯ ಅಧಿಕಾರಿ ರುದ್ರಮುನಿ,ಹಾಗೂ ಸಿಬ್ಬಂದಿಗಳು ಇದ್ದರು.




