ಪತ್ರಿಕೋದ್ಯಮ

ಸ್ನೇಹಿತನ ಹುಟ್ಟು ಹಬ್ಬಕ್ಕೆ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ.

ಸ್ನೇಹಿತನ ಹುಟ್ಟು ಹಬ್ಬಕ್ಕೆ ರೋಗಿಗಳಿಗೆ ಹಾಲು ಹಣ್ಣು ಬ್ರೆಡ್ ವಿತರಣೆ

ಕನಕಗಿರಿ ಪಟ್ಟಣದ ತಾಲೂಕು ಆರೋಗ್ಯ ಕೇಂದ್ರದಲ್ಲಿ ಸ್ನೇಹಿತನ ಹುಟ್ಟುಹಬ್ಬವನ್ನು ರೋಗಿಗಳಿಗೂ ಹಾಗೂ ಬಾಣಂತಿಯರಿಗೂ ಹಾಲು ಹಣ್ಣು ವಿತರಣೆ ಮಾಡಲಾಯಿತು. ಪಟ್ಟಣದ ಹನುಮೇಶ್ ಸುಣಗಾರ್ ಮತ್ತು ಇವರ ಸ್ನೇಹಿತ ಬಳಗ ಸೇರಿಕೊಂಡು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಹಾಲು ಹಣ್ಣು ಬ್ರೆಡ್ ವಿತರಣೆ ಮತ್ತು ರೋಗಿಗಳೊಂದಿಗೆ ಬಂದ ಕುಟುಂಬದವರಿಗೆ ಊಟದ ವ್ಯವಸ್ಥೆ ಮಾಡಲಾಯಿತು

ನಂತರ ಮಾತನಾಡಿದ ಹನುಮೇಶ್ ತನ್ನ ಬಾಲದ ಸ್ನೇಹಿತನಾದ ಮಾರುತಿ ಅವರ ಸ್ನೇಹ ಅಂದರೆ ಸುಂದರ ಸಂಬಂಧ ಅಷ್ಟೇ ಅಲ್ಲ, ಸ್ನೇಹವೆಂದರೆ ಭರವಸೆ, ನಂಬಿಕೆ ಮತ್ತು ನಿಷ್ಠೆ. ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು ನಿಷ್ಠೆಯಿಂದ ಇರುವುದು ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹ ಎಂದರು. ಶಾಲಾ ದಿನಗಳಿಂದ ಕೊನೆಯ ಉಸಿರಿನ ತನಕ ಜೊತೆಯಾಗಿರುವುದು ಸ್ನೇಹದ ಅಸ್ಮಿತೆ.

ನಂತರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಹನುಮೇಶ್ ಅವರಿಗೆ ಧನ್ಯವಾದಗಳು ತಿಳಿಸಿ ಮಾತಾಡುತ್ತಾ ಒಬ್ಬರ ಮೇಲೆ ಒಬ್ಬರು ನಂಬಿಕೆ ಇಡುವುದು ನಿಷ್ಠೆಯಿಂದ ಇರುವುದು ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹ ಮತ್ತುಜೀವನದ ಸಂತೋಷ, ಸಂಭ್ರಮ, ನೋವು, ನಲಿವು ಎಲ್ಲವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಹಂಚಿಕೊಳ್ಳುವುದು ಮತ್ತು ಕಷ್ಟದ ದಿನಗಳಿಗೆ ಹೆಗಲು ನೀಡುವವರೇ ಸ್ನೇಹಿತರು ಎಂದು ಮಾರುತಿ ಜಾಲಿ ಅವರು ತಿಳಿಸಿದರು.

  • ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ *

Related Articles

Leave a Reply

Your email address will not be published. Required fields are marked *

Back to top button