ರಾಜಕೀಯ

ಬಸನಗೌಡ ಪಾಟೀಲರಿಗೆ ಸೂಕ್ತ.ಸ್ಥಾನಮಾನ ಕೊಡದಿದ್ದರೇ….?? ಪ್ರೊ. ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

ಬಸನಗೌಡ ಪಾಟೀಲರಿಗೆ ಯತ್ನಾಳ ಇವರಿಗೆ ಬಿ.ಜೆ.ಪಿ.ಯಲ್ಲಿ. ಸ್ಥಾನಮಾನಗಳನ್ನು ನೀಡಿ ಗೌರವಿಸಿ ಇಲ್ಲದಿದ್ದರೆ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟವನ್ನು ಹೋರಾಟದ ಸವಾಲನ್ನು ಸ್ವೀಕರಿಸಿ ಉತ್ತರ ಕರ್ನಾಟಕದ ಹಿಂದೂ ಹುಲಿ ಪ್ರಭಾವಿ ಪಂಚಮಸಾಲಿ ಲಿಂಗಾಯತ ನಾಯಕ ಎಂದು ಗುರುತಿಸಿಕೊಂಡಿರುವ ಬಸನಗೌಡ ಪಾಟೀಲರು ವಿರೋಧಪಕ್ಷದ ನಾಯಕರಾಗುತ್ತಾರೆ ಇಲ್ಲವೇ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗುತ್ತಾರೆ ಎಂಬ ನಿರೀಕ್ಷೆ ಇತ್ತು ಈ ನಿರೀಕ್ಷೆಗಳು ಈಗ ಹುಷಿಯಾಗಿದೆ ಬಿಜೆಪಿ ಅವರಿಗೆ ಅನ್ಯಾಯ ಮಾಡಿದೆ ಎಂಬುದನ್ನು ಈಗ ಅವರು ಹೇಳುತ್ತಿಲ್ಲ ಉತ್ತರ ಕರ್ನಾಟಕದ ಜನತೆ ಹೇಳುತ್ತಿದೆ ಒಬ್ಬ ನಾಯಕನನ್ನು ಹೇಗೆ ಧಮನ ಮಾಡುತ್ತಾರೆ ಯಾವ ರೀತಿ ರಾಜಕೀಯವಾಗಿ ತುಳಿಯುತ್ತಾರೆ ಮುಂದೆ ಬರಲು ಬಿಡುವುದಿಲ್ಲ ರಾಜಕೀಯವಾಗಿ ಮುಗಿಸುತ್ತಾರೆ ಎಂಬುದನ್ನು ನೋಡಬೇಕಾದರೆ ಬಸನಗೌಡ ಪಾಟೀಲರ ಜೀವನದ ಸದ್ಯದ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಿಂದ ಕಿತೂಗೆಯುತ್ತೇವೆ ಎಂದು ಹೇಳುವ ಬಿಜೆಪಿ ನಾಯಕರು ಈಗ ಬಿಜೆಪಿ ಕಿತ್ತಿ ಹೋಗದಂತೆ ಕರ್ನಾಟಕದಲ್ಲಿ ಕಾಪಾಡುವ ಹೊಣೆ ಅವರ ಮೇಲಿದೆ ಒಂದು ಕಡೆ ಸಿಟಿ ರವಿ ಮತ್ತೊಂದು ಕಡೆ ವಿ ಸೋಮಣ್ಣ ಇನ್ನೂಂದು ಕಡೆ ಬಸನಗೌಡ ಪಾಟೀಲ್ ಯತ್ನಾಳ ಮೂವರು ಮೂರು ದಿಕ್ಕಿನಲ್ಲಿ ಚಲಿಸುತ್ತಿದ್ದಾರೆ ಈಗಾಗಲೇ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸೌದಿ ಬಿಟ್ಟು ಹೋಗಿರುವುದರಿಂದ ಈಗ ಬಿಜೆಪಿ ಮುರಿದ ಮನೆಯಾಗಿದೆ ಇದೆಲ್ಲವೂ ಸರಿಪಡಿಸಬೇಕಾದರೆ ಈಗ ತುರ್ತು ಸೋಮಣ್ಣನವರನ್ನು ಸಮಜಾಯಿಸಬೇಕು ಸಿಟಿ ರವಿ ಅವರ ಕೋಪ ಆರಿಸಬೇಕು ಬಸನಗೌಡ ಪಾಟೀಲರಿಗೆ ಆದ ಅಸಮಾಧಾನ ನಿವಾರಿಸಬೇಕು ಅದಕ್ಕಾಗಿ ಇಂದು ಬಸನಗೌಡರ ಮನೆಗೆ ಬಿಜೆಪಿ ನಾಯಕರು ಭೇಟಿ ಕೊಟ್ಟು ಸಮಜಾಯಿಸಿ ಹೇಳಿದ್ದಾರೆ ಅದು ಎಷ್ಟರ ಮಟ್ಟಿಗೆ ಕಾರ್ಯಗತವಾಗುತ್ತದೆ ಎಂಬುದು ಕಾದು ನೋಡಬೇಕು ಈಗ ನಮ್ಮ ಮುಂದೆ ಇರುವ ಸವಾಲು ಬಸನಗೌಡ ಪಾಟೀಲರಿಗೆ ಸೂಕ್ತ ಸ್ಥಾನಮಾನವನ್ನು ನೀಡುವ ಮೂಲಕ ಬಿಜೆಪಿ ಅವರನ್ನು ಗೌರವಿಸಬೇಕು ಇಲ್ಲದಿದ್ದರೆ ಪ್ರತ್ಯೇಕ ಉತ್ತರ ಕರ್ನಾಟಕದ ಸವಾಲನ್ನು ಸ್ವೀಕರಿಸಬೇಕು ಬಸನಗೌಡ ಅವರ ಪ್ರಮುಖ ವಾದವೆಂದರೆ ನಾನು ಹಿಂದುವಾಗಿರಲಿ ಅಥವಾ ಲಿಂಗಾಯಿತನೇ ಆಗಿರಲಿ ಆದರೆ ನ್ಯಾಯ ನಿಸ್ತೂರಿ ದಾಕ್ಷಿಣ್ಯ ಪರ ನಾನಲ್ಲ ಲೋಕ ವಿರೋಧಿ ಶರಣ ನಾನು ಯಾರಿಗೂ ಅಂಜುವವನಲ್ಲ ಎಂದು ಹೇಳುತ್ತಾ ಗಟ್ಟಿ ಧೈರ್ಯದಿಂದ ಎರಡೂ ಸ್ಥಾನಗಳನ್ನು ದಕ್ಷಿಣದವರಿಗೆ ಕೊಟ್ಟರೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ ಅದಕ್ಕೆ ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಗಬೇಕಾದರೆ ನೇರ ನಡೆಯ ದಿಟ್ಟನುಡಿಯ ಗಟ್ಟಿ ಎದೆಗುಂಡಗಿಯ ಬಸನಗೌಡ ಪಾಟೀಲರಿಗೆ ಸೂಕ್ತ ಸ್ಥಾನಮಾನವನ್ನು ನೀಡುವುದರ ಮೂಲಕ ಬಿಜೆಪಿಗೆ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಚಿಂತಕರ ಚಿಂತನೆಯಾಗಿದೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

Related Articles

Leave a Reply

Your email address will not be published. Required fields are marked *

Back to top button