ಕಲ್ಯಾಣಕ್ಕಾಗಿ ಸ್ಪಷ್ಟ ಅಭಿವೃದ್ಧಿ ಯೋಜನೆ ರೂಪಿಸಿ ಹೋರಾಟ ಸಮಿತಿಯ ದುಂಡುಮೇಜಿನ ಸಭೆ ಸರ್ಕಾರಕ್ಕೆ 13 ಮಹತ್ವದ ನಿರ್ಣಯಗಳು ಶಿಫಾರಸು

ಕಲ್ಯಾಣಕ್ಕಾಗಿ ಸ್ಪಷ್ಟ ಅಭಿವೃದ್ಧಿ ಯೋಜನೆ ರೂಪಿಸಿ ಹೋರಾಟ ಸಮಿತಿಯ ದುಂಡುಮೇಜಿನ ಸಭೆ ಸರ್ಕಾರಕ್ಕೆ 13 ಮಹತ್ವದ ನಿರ್ಣಯಗಳು ಶಿಫಾರಸು
ಕಲಬುರ್ಗಿ ಆಗಸ್ಟ್ 14 ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಹಾಗೂ ಸಮತೋಲನ ಅಭಿವೃದ್ಧಿಗೆ ಸರ್ಕಾರವು 5 ರಿಂದ 10 ವರ್ಷಗಳ ದೂರದೃಷ್ಟಿಯೊಂದಿಗೆ ಕಾಲಮಿತಿಯ ವೈಜ್ಞಾನಿಕವಾದ ಕ್ರಿಯಾಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದ ದುಂಡುಮೇಜಿನ ಸಭೆ ಆಗ್ರಹಿಸಿದೆ
ಕಲ್ಯಾಣ ಕರ್ನಾಟಕ ಜಿಲ್ಲೆಗಳ ಗಣ್ಯರು ಸಭೆಯ ಶುಕ್ರವಾರ ಕಲಬುರ್ಗಿಯ ಶರಣಬಸವ ವಿಶ್ವವಿದ್ಯಾಲಯ ಮುಖ್ಯ ಕಚೇರಿ ಸಭಾಂಗಣದಲ್ಲಿ ನಡೆಯಿತು
ರಾಯಚೂರಿನ ಅಭಿವೃದ್ಧಿಪರ ಹೋರಾಟಗಾರ ಡಾ/ ರಜಾಕ್ ರಾಯಚೂರಿನ ಏಮ್ಸ್ ಹೋರಾಟಗಾರ ಸಮಿತಿ ಅಧ್ಯಕ್ಷ ಡಾ/ ಬಸವರಾಜ ಕಳಸ ಗಂಗಾವತಿಯ ಶಿಕ್ಷಣ ತಜ್ಞ ಪ್ರೊಫೆಸರ್ ಧನರಾಜ್ ಎಚ್ ಕೆ ಸಿ ಸಿ ಐ ಮಾಜಿ ಅಧ್ಯಕ್ಷ ನಿಗ್ಗುಡಗಿ ಮಾತನಾಡಿ ಗೋವಿಂದರಾವ್ ಸಮಿತಿಯ ವರದಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಕುರಿತಂತೆ ದ್ವಂದ್ವವಿದೆ ಹೇಳಿದರು
13 ವರ್ಷ ಕಳೆದರೂ 371(ಜೆ ) ಕಲಂ ಇಲ್ಲಿವರೆಗೆ ಸಮರ್ಪಕವಾಗಿ ಜಾರಿಯಾಗಿಲ್ಲ ಇದಕ್ಕೆ ಕಾರಣ ಇಲ್ಲಿನ ಜನ ಪ್ರತಿನಿಧಿಗಳು ಬೇಜವಾಬ್ದಾರಿ ನಿರ್ಲಕ್ಷದಿಂದ ಇನ್ನು ಕತ್ತಲ 371(ಜೆ) ಕೋಣೆಯಲ್ಲಿ ಇವೆ.
ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಕಲಬುರಗಿಯಲ್ಲಿ ಸಚಿವ ಸಂಪುಟ ನಡೆದರು ಇಲ್ಲಿವರೆಗೆ ಅನುಷ್ಠಾನವಾಗಿಲ್ಲ ಕಾಗದಲ್ಲಿ ನಿರ್ಣಯಗಳು ಕೋಳಿತಾ ಇದ್ದಾವೆ ಮತ್ತು ಯುವಕರು ಮತ್ತು ಯುವತಿಯರು ಉದ್ಯೋಗದ ಭರವಸೆ ಕನಸು ನನಸಾಗಿ ಉಳಿದಿದೆ ಎಂದು ಪಿಡಪ್ಪ ಜಾಲಗಾರ ಕಾರವಾಗಿ ನುಡಿದರು




