ಪತ್ರಿಕೋದ್ಯಮರಾಜಕೀಯ

ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ 25 ಲಕ್ಷ ರೂಪಾಯಿ ಹಣ ದುರುಪಯೋಗ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರ್ ಅವರ ವಿರುದ್ಧ ದಿನಾಂಕ 28.03.2026 ರಂದು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0048/2026 ಅಡಿಯಲ್ಲಿ ಕೇಸ್.

ಪತ್ರಿಕಾ ಪ್ರಕಟಣೆಗಾಗಿ ಮಾಧ್ಯಮ ಪ್ರತಿನಿಧಿಗಳಿಗೆ
ಮಾನ್ಯರೇ ಹಿರಿಯ ವಕೀಲರೊಂದಿಗೆ ಸವಾಲೋಚಿಸಿ ದಿನಾಂಕ ಐದು ಎಂಟು 2026 ರಂದು ನಾಡಿನ ಹಾಗೂ ದೇಶದ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳೆಲ್ಲರಿಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಆದಷ್ಟು ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂಬ ಮನವಿ ಪತ್ರಗಳನ್ನು ಸ್ಪೀಡ್ ಪೋಸ್ಟ್ ಮೂಲಕ ದಿನಾಂಕ 5 8 2026 ರಂದು ಅಂಚೆ ಇಲಾಖೆ ಮೂಲಕ ಈಗಾಗಲೇ ಕಳಿಸಿರುವ ಪ್ರತಿಗಳು ಈ ಮನವಿಯೊಂದಿಗೆ ತಮ್ಮೆಲ್ಲರಿಗೆ ನೀಡುತ್ತಿದ್ದೇವೆ
(ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಾರ್ತಾ ಇಲಾಖೆಯ ಆಯುಕ್ತರಿಗೆ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರದ ವಾರ್ತಾ ಇಲಾಖೆ ಸಚಿವರು ಹಾಗೂ ಕಾರ್ಯದರ್ಶಿಗಳಿಗೆ)
2 ಇಡೀ ರಾಜ್ಯದ 14 ಜನ ಕಾರ್ಮಿಕ ಇಲಾಖೆಯ ಸಹಾಯಕ ಅಯುಕ್ತಗಳಿಗೆ 05/ 8/ 2026 ರಂದು ನಮ್ಮ ಕರ್ನಾಟಕ ಕಾರ್ಯನಿರ್ತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಮನವಿ ಪತ್ರಗಳನ್ನು ಈಗಾಗಲೇ ಅಂಚೆ ಮೂಲಕ ರವಾನಿಸಿದ್ದು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಹಾಗೂ ಚಾನೆಲ್ ನವರು ಈಗಾಗಲೇ ಆಯಾ ಜಿಲ್ಲಾ ವ್ಯಾಪ್ತಿಯ ವಾರ್ತಾ ಇಲಾಖೆಗೆ ತಮ್ಮ ಸಿಬ್ಬಂದಿಗಳ ವಿವರವನ್ನು ನೀಡಿದ್ದು, ಕಾರ್ಮಿಕ ಇಲಾಖೆಯವರು ಕೂಡಲೇ ವಿವರಗಳನ್ನು ವಾರ್ತಾ ಇಲಾಖೆ ಮೂಲಕ ಪಡೆದು ಕಾರ್ಮಿಕ ಕಾಯ್ದೆಗಳನ್ನು ಆದಷ್ಟು ಶೀಘ್ರ ವರದಿಗಾರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಜಾರಿಯಾಗುವಂತೆ ಕ್ರಮ ವಹಿಸಬೇಕು.
ಆಧಾರ ಹಾಗೂ ಸಾಕ್ಷಿಗಳ ದಾಖಲೆಗಳಿಲ್ಲದೆ ನಕಲಿ ಪತ್ರಕರ್ತರ ಸಂಘಟನೆ ಹಾಗೂ ನಕಲಿ ಪತ್ರಕರ್ತರ ವಿವಿಧ ಕ್ರಮಕ್ಕೆ ಒತ್ತಾಯಿಸಿ ದಿನಾಂಕ 13-7-2026 ರಂದು ಡಿಜಿ ಮತ್ತು ಐಜಿಪಿ ಅವರಿಗೆ ಕಾರ್ಯನಿರ್ತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ರವರು ಕೊಟ್ಟಿರುವ ದೂರು ಇಡೀ ನಮ್ಮ ರಾಜ್ಯದ ಮಾಧ್ಯಮ ಪ್ರತಿನಿಧಿಗಳಿಗೆ ಮಾಡಿರುವ ಘೋರ ಅವಮಾನ ಒಬ್ಬ ರಾಜ್ಯದ ಅಧ್ಯಕ್ಷರಾಗಿ ಆಧಾರ ಹಾಗೂ ಸಾಕ್ಷಿಗಳಿಲ್ಲದೆ ವಿಜಯ ಸಂಕೇಶ್ವರವರ ಮಾಲಿಕತ್ವದ ರಾಜ್ಯದ ಪ್ರತಿಷ್ಠಿತ ವಿಜಯವಾಣಿ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿರುವ ಶಿವಾನಂದ ತಗೂಡೂರ ರವರೆ ನಿಮ್ಮ ಬಳಿ ಈ ದೂರಿನ ಆರೋಪಕ್ಕೆ ಸಾಕ್ಷಿಗಳಿದ್ದರೆ ಮೂರು ದಿನಗಳ ಒಳಗಾಗಿ ಪೋಲಿಸ್ ಇಲಾಖೆಗೆ ಸಾಕ್ಷಿ ನೀಡಿ ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ನಿಮ್ಮ ಜೊತೆ ನಾವು ನಿಲ್ಲುತ್ತೇವೆ ಮೂರು ದಿನಗಳ ಒಳಗಾಗಿ ನೀವು ಆಧಾರ ಸಾಕ್ಷಿ ನೀಡದಿದ್ದರೆ ಇಡೀ ರಾಜ್ಯದ ಮಾಧ್ಯಮದವರಿಗೆ ಸಮಾಪನೆ ಕೇಳಬೇಕು ಇಡೀ ರಾಜ್ಯದ್ಯಂತ ಮಾಧ್ಯಮದವರಿಗೆ ಕ್ಷಮಾಪಣೆ ಕೇಳದಿದ್ದರೆ ಮಾಡಿರುವಂತಹ ಗೋರ ಅವಮಾನ ರಾಜ್ಯಾದ್ಯಂತ ಕಾಣಿಪ ಧ್ವನಿ ಇಂದ ನಿಮ್ಮ ವಿರುದ್ಧ ಹೋರಾಟಕ್ಕೆ ಇಳಿಯುತ್ತೇವೆ
ದಿನಾಂಕ 28.03.2026 ರಂದು ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0048/2026 ಅಡಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯ ಸಂಕೇಶ್ವರರ ಪ್ರತಿಷ್ಠಿತ ದಿನ ಪತ್ರಿಕೆಯಾದ ವಿಜಯವಾಣಿ ದಿನಪತ್ರಿಕೆಯಲ್ಲಿ ಬೆಂಗಳೂರಿನ ವರದಿಗಾರರಾಗಿ ಕಾರ್ಯನಿರ್ವ ಸುತ್ತಿರುವ ಶಿವಾನಂದ ತಗೂಡು ರವರ ಮೇಲೆ ಪ್ರಕರಣ ದಾಖಲಾಗಿದ್ದು 25 ಲಕ್ಷ ರೂಪಾಯಿ ಹಣವನ್ನು ಅವಧಿ ಮುಗಿಯುವ ಮೊದಲೇ ವಂಚನೆಯಿಂದ ಬಿಡುಗಡೆ ಮಾಡಿಕೊಂಡು ಸಂಘದ ಅಭಿವೃದ್ಧಿಗಾಗಿ ಸಂಗ್ರಹಿಸಿರುವ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದಡಿಯಲ್ಲಿ ಆರೋಪಿ ಆಗಿರುವ ಶಿವಾನಂದ ತಗುಡುರವರಿಗೆ ನಕಲಿ ಪತ್ರಕರ್ತರ ಸಂಘಟನೆ ಹಾಗೂ ನಕಲಿ ಪತ್ರಕರ್ತರ ಬಗ್ಗೆ ಮಾತನಾಡುವ ಅರ್ಹತೆ ಇದೆಯೇ ನಾಡಿನ ದಿಗ್ಗಜ ಹೆಸರಾಂತ ಡಿ ವಿ ಗುಂಡಪ್ಪ (ಡಿವಿಜಿ) ರವರ ಸ್ಥಾಪಿಸಿದಂತ ಕರ್ನಾಟಕ ಕಾರ್ಯನಿರ್ತ ಪತ್ರಕರ್ತರ ಸಂಘಕ್ಕೆ ಮಸಿ ಬೆಳೆಯುವ ಕಾಯಕ ಸಾರುತ್ತಿರುವ ಹಿನ್ನೆಲೆಯಲ್ಲಿ ತಗುದುರವರ ಈ ಕೂಡಲೇ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿವಿಜಿ ಅವರ ಸ್ಥಾಪಿಸಿದಂತ ಸಂಘದ ಘನತೆ ಉಳಿಯಬೇಕಾಗಿದೆ.


ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯತ್ವ ಸ್ಥಾನಕ್ಕೆ ಹಾಗೂ ಪೆನ್ಷನ್ ಸಮಿತಿಯ ಸದಸ್ಯ ಸ್ಥಾನಕ್ಕೆ, ಗುರು ತರ 25 ಲಕ್ಷಗಳ ಅವ್ಯವಾರದಲ್ಲಿ ಆರೋಪಿ ಆಗಿರುವ ತಗಡೂರು ರವರ ಈ ಕೂಡಲೇ ರಾಜೀನಾಮೆ ಸಲ್ಲಿಸಿ ಸಂಘದ ಘನತೆ ಉಳಿಸಬೇಕು ಈ ಕೋರಿಕೆಯಂತೆ ಮೂರು ದಿನಗಳ ಒಳಗಾಗಿ ರಾಜೀನಾಮೆ ನೀಡಿದಿದ್ದರೆ ಮಾನ್ಯ ಮುಖ್ಯ ಅಧಿಕಾರಿಗಳಿಗೆ ಹಾಗೂ ಮಾನ್ಯ ರಾಜ್ಯಪಾಲರಿಗೆ ಇಡೀ ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮನುವಿಗಳನ್ನು ಆಯಾ ಜಿಲ್ಲಾಧಿಕಾರಿ ಹಾಗೂ ತಾಲೂಕ ದಂಡಾಧಿಕಾರಿಗಳ ಮುಖಾಂತರ ಸಲ್ಲಿಸಲಾಗುವುದೆಂದು ಈ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳೊಂದಿಗೆ ತಮಗೆ ಸಲ್ಲಿಸುತ್ತಿದ್ದೇವೆ.

Related Articles

Leave a Reply

Your email address will not be published. Required fields are marked *

Back to top button