ಕಲ್ಯಾಣ ಕರ್ನಾಟಕದ ಜನಪ್ರೀಯ ಸಗರ ನಾಡು…ಡಾ. ಉದಯ ಪಾಟೀಲ,ನೇತ್ರ ತಜ್ಞರು ಕಲ್ಬುರ್ಗಿ.

ಸಗರ ನಾಡು…
ಇದು ಏನೂ ಬೇರೆ ರಾಜ್ಯದ ಭಾಗವಲ್ಲ.. ನಮ್ಮ ಕರ್ನಾಟಕದ ಒಂದು ಪ್ರದೇಶ..ಅದೂ ನಮ್ಮ ಹಳೆಯ ಕಲ್ಬುರ್ಗಿ ಜಿಲ್ಲೆಯ ಒಂದು ಪ್ರದೇಶ.. ಈಗ ಇದು ಯಾದಗಿರಿ ಜಿಲ್ಲೆಗೆ ಸೇರಿದೆ..
ಹಾಗೆ ನೋಡಿದರೆ.. ತಾಳಿಕೋಟಿ ಯ ಹತ್ತಿರದ ಕೃಷ್ಣಾ ನದಿ ದಡದಿಂದ , ಭೀಮಾ ನದಿ ಯ ದಡ ದ ನಡುವಿನ ಪ್ರದೇಶಕ್ಕೆ ಸಗರನಾಡು ಎಂದು ಕರೆಯುತ್ತಾರೆ..
ಈ ಜನರ ಆಡುವ ಭಾಷೆ ಕನ್ನಡ… ಆದರೂ ಸ್ವಲ್ಪ tone ಬೇರೆ.. ಇಲ್ಲಿಯ ಸಂಸ್ಕೃತಿ.. ಇವರ ಜೀವನ ಶೈಲಿ … ಎಲ್ಲವೂ ನಮ್ಮ ಹಾಗೇನೇ..ಆದರೆ ನಾವು ಸಗರ ನಾಡಿನವರು ಎಂದು ಹೇಳಿ ಕೊಳ್ಳಲು ಇವರಿಗೆ ಹೆಮ್ಮೆ…
ಹೌದು… ಇವರ ಸ್ವಾಭಿಮಾನವೂ ನಿಜವೇ..
ನಾನು ಕೆಲವು ವರ್ಷಗಳ ವರೆಗೆ ಈ ಸಗ ರ ನಾಡಿನಲ್ಲಿ ವೈದ್ಯಾಧಕಾರಿ ಯಾಗಿ ಸೇವೆ ಸಲ್ಲಿಸಿದ ಅನುಭವ ಇದೆ..(1985 to1988 ವರೆಗೆ ನಾನು ಕೆಂಭಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಬರುವ ಒಂದು ಪ್ರಾಥಮಿಕ ಆರೋಗ್ಯ ಘಟಕ.. ನಗನೂರು ಎಂಬ ಊರಲ್ಲಿ ಸೇವೆ ಸಲ್ಲಿಸಿ ದ್ದೇನೆ).
ಈಗೀನ ಶಹಾಪುರ, ಸುರಪುರ ಮತ್ತು ಯಾದಗಿರಿ ತಾಲೂಕು ಇವೆಲ್ಲ ಬರುವವು ಸಗರನಾಡಿನಲ್ಲಿ..
ನಾನು ವಾಸಿಸಿದ್ದು ಸುರಪುರ ಊರಲ್ಲಿ..so ನನಗೆ ಹೆಚ್ಚಿನ ಮಾಹಿತಿ ಇರುವದು ಸುರಪುರ ಊರಿನ ಮತ್ತು ಅದರ ಸುತ್ತ ಮುತ್ತಲಿನ ಭಾಗದ..
ಸುರಪುರ ಒಂದು ಸಣ್ಣ ಸ್ವಾತಂತ್ರ ರಾಜ್ಯವಾಗಿತ್ತು.. ಶ್ರೀ ರಾಜಾ ವಂಕಟಪ್ಪ ನಾಯಕ್.. ಇವರ ಹೆಸರು ಯಾರು ಕೇಳಿಲ್ಲ..?
ಬ್ರಿಟಿಷರ ವಿರುದ್ಧ ಹೋರಾಡಿದ ಧೀಮಂತ ರಾಜ..
ಈಗಲೂ ಇವರ ವಂಶದವರು ಸುರಪುರ ಊರಲ್ಲಿ ಇದ್ದಾರೆ..ಒಂದು ಹಳೆಯ ಕಾಲದ ಅರಮನೆ ಕೂಡ ಇದೆ. ಈ ರಾಜ ಮನೆತನದ ಕುಲದೇವರು ತಿರುಪತಿಯ ವೆಂಕಟೇಶ್ವರ..ಈಗಲೂ ಇವರ ವಂಶದವರ ಹೆಸರಿನಲ್ಲಿ ತಿರುಪತಿ ತಿಮ್ಮಪ್ಪ ನಿಗೆ ದಿನಾಲೂ ಆರತಿ ಆಗುತ್ತದೆ..
ಈ ರಾಜರ ಉಪ ಪತ್ನಿಗೆ ಒಂದೊಂದು ಊರು ಬಳುವಳಿ ಯಾಗಿ ಕೊಟ್ಟ ಹಾಗೆ ಕಾಣುತ್ತದೆ..
ಸುರಪುರ ಊರು ಇಂದು ಎತ್ತರವಾದ ಪ್ರದೇಶದ ಮೇಲಿದೆ..ನೀವು ಸುರಪುರಿಗೆ ಹೋಗಬೇಕಾದರೆ ತಿರುಮಲ ಬೆಟ್ಟ ಏರಿದ ಹಾಗೆ ಏರಬೇಕು.. ಸುರಪುರ ಊರಿನ ಸುತ್ತಲೂ ಇರುವ ಗ್ರಾಮಗಳು…
ತಿಮ್ಮಾಪುರ…ರಾಣಿ ತಿಮ್ಮಕ್ಕನ ಹೆಸರಿನಲ್ಲಿ..
ರುಕ್ಮಾಪೂರ..ರಾಣಿ ರುಕ್ಕಮ್ಮ ನ ಹೆಸರಿನಲ್ಲಿ..
ವೆಂಕಟಾಪುರ…ರಾಣಿ ವೆಂಕಮ್ಮ ನ ಹೆಸರಿನಲ್ಲಿ..
ಹೀಗೆ ಅನೇಕ ಗ್ರಾಮಗಳು ಸುರಪುರ ಊರಿನ ಸುತ್ತಲೂ ಈಗಲೂ ಇವೆ..
ಸುರಪುರ ಸಂಸ್ಥಾನ ಮುಂದೆ ಬ್ರಿಟಿಷರ ಆಡಳಿತ ಕ್ಕೆ ಒಳಪಟ್ಟು ಒಬ್ಬ ಆಂಗ್ಲ ಅಧಿಕಾರಿ ಶ್ರೀ Taylor ಈ ಸಂಸ್ಥಾನದ ಆಡಳಿತ ಅಧಿಕಾರಿ ಆಗಿದ್ದನಂತೆ.. ಅವನ ಹೆಸರಿನಲ್ಲಿ ಊರ ಬೆಟ್ಟದ ತುದಿಯಲ್ಲಿ ಒಂದು ಭವ್ಯ ಬಂಗಲೆ ಇದೆ..( ಇದರ ಹೆಸರು… Taylor’s Manzil..)
ಇದೊಂದು ವಿಶೇಷವಾಗಿ ಕಟ್ಟಿದ ಒಂದು guest house..(ಇದರ ವಾಸ್ತು ಕಲೆ..ಒಂದು ಅದ್ಭುತ.. ಬಿಜಾಪುರದ ಗೋಲಗುಮ್ಮಟ ತರಹ.. ಇದರ ಒಂದು ಬಾಗಿಲು ಮುಚ್ಚಿದರೆ ಉಳಿದ ಬಾಗಿಲು ಗಳು
ಅಲುಗಾಡುವವು.. ಬಿಜಾಪುರ ದ ಗೋಳಗುಮ್ಮಟ whispering gallery ತರಹ..)
Taylor’s Manzil ಇರುವದು ಊರಿನಿಂದ ಬಹು ದೂರ.. ಬೆಟ್ಟದ ಮೇಲೆ.. ಬಹುಷ್ಯ ಕಳ್ಳರಿಂದ ಸಾವಧಾನ ಇರಲು ಈ ರೀತಿ ಇದನ್ನು ಕಟ್ಟಿರಬೇಕು..
ಈಗ ಈ ಭವ್ಯ buliding ಒಂದು ಸರಕಾರಿ ಅಥಿತಿ ಗೃಹ ಆಗಿದೆ..
ಇದರ ಮುಂದೆ ಸ್ವಲ್ಪ ಅಂತರದಲ್ಲಿ ಒಂದು ದೊಡ್ದ ಬಂಡೆ ಇದೆ.. ಈ ಬಂಡೆಯ ಮೇಲೆ ಏರಿ ಕುಳಿತು ಕೊಳ್ಳಲು ಮೆಟ್ಟಲು ಇವೆ.. ಇದರ ಮೇಲೆ ಕುಳಿತು ಸುತ್ತ ನೋಡಿದರೆ ಸುರಪುರ ಊರಿನ ವಿಹಂಗಮ ನೋಟ ಕಣ್ಣಿಗೆ ಹಿತ.. ದೂರದ ಕೃಷ್ಣ ನದಿ ಕೂಡಾ ಕಾಣುತ್ತದೆ..(ಇಲ್ಲಿಂದ ಕೃಷ್ಣ ನದಿ ಸಮಾರು 7/8km ದೂರಿದೆ..ದೂರದ ಶೆಳ್ಳಗಿ ಗ್ರಾಮದ ಹತ್ತಿರ ಹರಿಯುತ್ತದೆ).
ಸಾಯಂಕಾಲ ಅದೆಷ್ಟೋ ಸಲ ನಾನು ಈ Taylor’s Manzil ಮತ್ತು ಆ ಬೆಟ್ಟ ಹತ್ತಿ ಸುರಪುರ ಊರಿನ ವಿಹಂಗಮ ನೋಟವನ್ನು ನೋಡಿದ್ದೇನೆ..
ವೇಣುಗೋಪಾಲ ದೇವಸ್ಥಾನ..
ಇದೊಂದು ಅದ್ಭುತ ವಾಸ್ತು ಕಲೆ ಯ ಉದಾಹರಣೆ . ಊರಿನ ಮಧ್ಯ ಭಾಗದಲ್ಲಿ ಸ್ವಲ್ಪ ಎತ್ತರದಲ್ಲಿ ಕಟ್ಟಲ್ಪಟ್ಟ ಶ್ರೀ ವೇಣಗೋಪಾಲ ದೇವಸ್ಥಾನ..ಸುಂದರ ಮಂದಿರ..
ಇದರ ಹಿಂದೆಯೂ ಒಂದು ರೋಚಕ ಕಥೆ ಇದೆ..ಹಿಂದೆ ಈ ಭಾಗದಲ್ಲಿ ಅರಣ್ಯ ಇತ್ತಂತೆ. ಒಮ್ಮೆ ಸುರಪುರ ದೊರೆ ಬೇಟೆ ಆಡಲು ಬಂದಾಗ ಒಂದು ಮೊಲ ನರಿಯನ್ನು ಅಟ್ಟಿಸಕೊಂಡು ಬಂದಿತ್ತಂತೆ.. ಹೀಗೆ ಏನೋ ಒಂದು ಸ್ವಾರಸ್ಯಕರ ವಾದ ಕಥೆ ಇದೆ..(ಈ ವಿಷಯದ ಬಗ್ಗೆ ನನಗೆ 100% ಸತ್ಯ ಘಟನೆ ನೆನಪಿಲ್ಲ.. ಕ್ಷಮಿಸಿ..)
ಇನ್ನೂ ಸುರಪುರದ ಬಾವಿಗಳು..
ಬಲು ಪ್ರಸಿದ್ಧ.. ಸುರಪುರ ಊರಿಗೆ ಈಗ ಕೃಷ್ಣೆಯ ನೀರು supply ಆಗ್ತಾ ಇದೆ.. ಹಿಂದಿನ ಕಾಲದಲ್ಲಿ ಈ ರೀತಿಯ ವ್ಯವಸ್ಥೆ ಇರಲಿಕ್ಕಿಲ್ಲ.. ಆಗ ಇಲ್ಲಿಯ ಜನರಿಗೆ ಬಾವಿಯ ನೀರೇ ಗತಿ ಕುಡಿಯಲು ಮತ್ತು ಬಳಿಸಲು..
ಹೀಗಾಗಿ ಈ ಊರಿನಲ್ಲಿ ಅನೇಕ ಬಾವಿಗಳು ಇವೆ. ಬಹುತೇಕ ಮನೆಯೆಲ್ಲೊಂದು ಸೇದಿ ಬಾವಿ ಇದೆ.. ಆದರೆ ಈ ಬಾವಿ ಗಳ ನೀರು ಕುಡಿಯಲು ಅಷ್ಟು ಸಿಹಿ ಅಲ್ಲ ಎಂದು ಸುರಪುರ ಊರಿನ ಜನ ಕುಡಿಯುವುದು ಒಂದು ಪ್ರಸಿದ್ಧ ಬಾವಿಯ ನೀರನ್ನೇ .
ಅದೇ.. ಯಲ್ಲಪ್ಪ ನ ಬಾವಿ . ಈ ಬಾವಿ ಇರುವದು ಊರಿನಿಂದ ಬಹು ದೂರ.. ಆ Taylor’s Manzil ಹತ್ತಿರ ..ಅಂದರೆ ಮುಖ್ಯ ಊರಿನಿಂದ ಸಮಾರು ೨/೩km ದೂರ. . ಆದರೂ ಸುರಪುರ ಊರಿನ ಜನರಿಗೆ ಯಲ್ಲಪ್ಪ ನ ಬಾವಿಯ ನೀರೇ ಬೇಕು ಕುಡಿಯಲು..
ಅಷ್ಟು importance ಈ ಬಾವಿಗೆ..
ನಾನೂ ಕುಡಿದು ನೋಡಿದ್ದೇನೆ ಯೆಲ್ಲಪ್ಪನ್ ಬಾವಿ ನೀರನ್ನು.. ಬಹಳ tasty…. ತಂಪಾದ ತೆಂಗಿನ ನೀರಿನ ತರಹ. ..ಅಷ್ಟೊಂದು ಸಿಹಿ ನೀರು. ..ಆದರೆ..ಆದರೆ…..
ಆದರೆ ..ಏನು…
ಇದೊಂದು ಇಳಿ ಬಾವಿ..so ನಾರು ಹುಣ್ಣಿನ ಬಾವಿ .. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಈ ಬಾವಿಯ ನೀರನ್ನು ಕುಡಿಯುವರ ಸಂಖ್ಯೆ ಕಡಿಮೆ ಆಗ್ತಾ ಇದೆ..
ಯೆಲ್ಲಪ್ಪನ ಬಾವಿ ನೀರು ಕುಡಿಯುವದು ಸುರಪುರ ಜನರ ಒಂದು ಪ್ರತಿಷ್ಠೆ…
ಎಲ್ಲಪ್ಪನ ಬಾವಿ ನೀರ…
ಆದ್ರ… ಆ ಬಾವಿ ಬಲು ದೂರ .
ರುಚಿ… ತೆಂಗಿನ ನೀರಿನ ಹಾಗ..
ಆದ್ರ… ಕುಡಿದ ವರಿಗೆಲ್ಲ ನಾರ…
ಗೀಯ.. ಗೀ ಯ ..
ಗೀ.. ಗಿ.. ಗಿ…..
ಹೀಂಗ ಈ ಬಾವಿ ಬಗ್ಗೆ ಜನ ಹಾಡು ಕಟ್ಟಿ ಹಾಡ್ತಾರ…
ಇದಲ್ಲದೆ ಇನ್ನೂ ಅನೇಕ ಇಲಿ ಬಾವಿ ಇವೆ ಸುರಪುರ ಊರಲ್ಲಿ..
ಬಡಿಗೇರ ಬಾವಿ, ದೇವರ ಬಾವಿ, ನಾಕಿ ಬಾವಿ. . ಇತ್ಯಾದಿ…
ಈಗ ಇವೆಲ್ಲ ಬಾವಿಗಳ ನೀರು ಯಾರೂ ಕುಡಿಯುವುದಿಲ್ಲ, ಸಮೀಪ ಹರಿಯುವ ಕೃಷ್ಣಾ ನದಿ ಯ ನೀರು ಫಿಲ್ಟರ್ ಮಾಡಿ supply ಮಾಡ್ತಾರೆ..(ಸಮೀಪದ ಶೆಳ್ಳಗಿ ಗ್ರಾಮದಿಂದ ಕೃಷ್ಣಾ ನದಿ ಯ ನೀರು ಲಿಫ್ಟ್ ಮಾಡಿ ಫಿಲ್ಟರ್ ಮಾಡಿ supply ಮಾಡ್ತಾರೆ..)
ಸುರಪುರ ಊರು ಸಾಂಸ್ಕೃತಿಕ ವಾಗಿಯೂ… ಮುಂದು ವರಿದ ಊರು..
ಇಲ್ಲಿಯ ಸುರಪುರ ಪಂಚಾಂಗ ಬಲು ಪ್ರಸಿದ್ಧ..
ಸುರಪುರ ಊರಿನ ಹತ್ತಿರವೇ ಕಣ್ವ ಮಠ ಇದೆ .
ಸುಮಾರು 15/20km ಅಂತರದಲ್ಲಿ ಪ್ರಸಿದ್ಧವಾದ ಮೌನೇಶ್ವರ ದೇವಸ್ಥಾನ ಇದೆ..(ಹಿಂದು ಮುಸ್ಲಿಂ ಭಾವೈಕ್ಯತೆಯ ಒಂದು ಭವ್ಯ ಮಂದಿರ..ಹತ್ತಿರವೇ ಕೃಷ್ಣಾ ನದಿ ಹರಿಯುತ್ತಾಳೆ ಸದ್ದು ಮಾಡದೆ..)
ದೇವರ ದಾಸಿಮಯ್ಯ ನ ಹೆಸರು ಕೇಳದವರು ಕಡಿಮೆ.. ಸುರಪುರ ಊರಿನಿಂದ 30km ದೂರದಲ್ಲಿ ಮುದನೂರು ಎಂಬ ಊರನಲ್ಲಿ ಹಿಂದೆ ದೇವರ ದಾಸಿಮಯ್ಯ ಎಂಬ ಮಹಾನ ಕನ್ನಡದ ಕವಿ ಆಗಿ ಹೋದ..
ಅವನ ಕವಿತೆ ಒಂದು ನನಗೆ 9ನೆಯ ಇಯತ್ತೆ ಯಲ್ಲಿ ಕನ್ನಡ text Book ನಲ್ಲಿ ಇತ್ತು..
ಅದು ..
ಹರಿದ ಗೋಣಿಯಲ್ಲೊಬ್ಬ..
ಕಳವೇಯ ತುಂಬಿದ..
ಇರುಳೆಲ್ಲ ನಡೆದನು..
ಸುಂಕ್ಕ ಕ್ಕಂಜಿ..
ಕಳವೆಯಲ್ಲ ಹೋಗಿ..ಬರೀ ಗೋಣಿ ಉಳಿದಿತ್ತು..
ಅಳಿ ಮನದವನ ಭಕ್ತಿ ,ಇಂತಾಯಿತ್ತು ಕಾಣಾ ರಾಮನಾಥ…
ಸುರಪುರ ಊರು ಕಲ್ಲು ಬಂಡೆಗಳ ನಡುವೆ.. ಹೀಗಾಗಿ ಇಲ್ಲಿಯ ಹವಾಗುಣ ತುಸು ಊಶ್ಣ ಮಯ.. ಬಿಸಿಲು ಜಾಸ್ತಿ .. ಗುಡ್ಡ ಬೆಟ್ಟಗಳ ನಡುವೆ ಬೆಳೆಯುವ ಸೀತಾ ಫಲ ಹಣ್ಣು ಹೇರಳ ಇಲ್ಲಿ.. ಅಷ್ಟೇ ರುಚಿಕರ ವೂ..
ಇಲ್ಲಿಯ ವ್ಯಾಪಾರ ಬಹುತೇಕ ಮಾರ್ವಾಡಿ ಜನರ ಕೈಯಲ್ಲಿ… ದೂರದ ರಾಜಸ್ಥಾನ ರಾಜ್ಯ ದ ಮಾರವಾಡ ಪ್ರದೇಶದಿಂದ ಬಂದ ಈ ಜನರು ಈಗ ಪಕ್ಕಾ ಇಲ್ಲಿಯವರೇ ಆಗಿ ಹೋಗಿದ್ದಾರೆ..
ಹೆಸರಾಂತ ವೈದ್ಯ ರಾಗಿದ್ದಾರೆ..(ನನ್ನ ಮಿತ್ರ. ..Dr.L.S.Rathi..)
Dr. inder chandar jain..
ರಾಜಾ ವೆಂಕಟಪ್ಪಾಯಕ ನ ಮನೆತನ ದವ ರು ಸಕ್ರೀಯ ರಾಜಕಾರಣದಲ್ಲಿ ಇದ್ದಾರೆ..
ಹೀಗೆ ನನಗೆ ತಿಳಿದಷ್ಟು ..ನಾನು ಈ ಸಗರನಾಡಿನ ಒಂದು ರಾಜರ ಸಂಸ್ಥಾನ ಸುರಪುರ ಊರಿನ ಬಗ್ಗೆ ಬರೆದಿದ್ದೇನೆ .
Dr. ಉದಯ ಪಾಟೀಲ,
ನೇತ್ರ ತಜ್ಞ ರು .
ಕಲ್ಬುರ್ಗಿ..
ದೂರವಾಣಿ..9342018762..




