ಕರ್ನಾಟಕ ರಾಜ್ಯಾದ ಬಿ.ಜೆ.ಪಿ. ರಾಜ್ಯಾಧ್ಯಕ್ಷರು ಹುಚ್ಚರ ಕೈಯ ಕಲ್ಲಾಗುತ್ತಿದ್ದಾರಾ???….

ಕರ್ನಾಟಕ ರಾಜ್ಯಾದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಹುಚ್ಚರ ಕೈಯ ಕಲ್ಲಾಗುತ್ತಿದ್ದಾರಾ???….
ದಿನಾಂಕ ೩೦/೧೨/೨೦೨೩ ರಂದು ವಿಜಯಪುರಕ್ಕೆ ನಗರಕ್ಕೆ ಎಂಟ್ರಿ ಕೊಟ್ಟು ಕಾರ್ಯಕರ್ತರಿಂದ ಹೂವಿನ ಮಳೆಗರಿಸಿಕೊಂಡು ಮರಿ ಹುಲಿ – ಗಿರಿ ಹುಲಿ ಎನ್ನಿಸಿಕೊಂಡು, ಬಹುಪರಾಕ ಹಾಕಿಸಿಕೊಂಡು, ದೇಶದಲ್ಲಿ ಗುಲಾಮಿ ಪದ್ದತಿ ಇನ್ನೂ ಜೀವಂಥವಿದೆ. ಕಾಂಗೈನವರು ಮಾತ್ರ ಗುಲಾಮಿ ಪದ್ದತಿ ಪಾಲಿಸುತ್ತಾರೆ ಎಂದು ತಿಳಿದಿದ್ದ ವಿದ್ಯಾವಂತರಿಗೆ ಗುಲಾಮಿ ಪದ್ದತಿ ಬಿ.ಜೆ.ಪಿಯಲ್ಲೂ ಇದೆ ಎನ್ಸುವುದನ್ನು ಸಾಕ್ಷೀಕರಿಸಿದಿರಿ. ಬಿ..ಜೆ.ಪಿ. ಪಕ್ಷವು ಸಹ ಈ ಪದ್ಧತಿಯನ್ನು ಪೋಷಿಸುತ್ತದೆ ಎನ್ನುವುದನ್ನು ಶನಿವಾರ ವಿಜಯಪುರ ನಗರದಲ್ಲಿ ನೀವು ತೋರಿಸಿಕೊಟ್ಟಿರಿ.
ಯಾವ ಪುರುಷಾರ್ಥಕ್ಕಾಗಿ ವಿಜಯಪುರಕ್ಕೆ ಹೋಗಿದ್ದಿರಿ? ವಿಶೇಷವಾದ ಕಾರ್ಯಕ್ರಮಗಳು ಏನಿತ್ತು. ಮದುವೆ ಕಾರ್ಯಕ್ರಮವಾ? ಅಡಿಗಲ್ಲು ಸ್ಥಾಪಿಸುವುದಾ?, ಗಣ್ಯರ ಮರಣವಾಗಿತ್ತಾ?, ಸಂಬಂಧಿಗಳ ಸುಖ-ದುಖ ವಿಚಾರ ಇಟ್ಕೊಂಡು ವಿಜಯಪುರಕ್ಕೆ ಹೋಗಿದ್ದಿರಾ? ಏನು ಸಾಧಿಸಲು ಹೋಗಿದ್ದಿರಿ.
ಇವು ಯಾವವೂ ಅಲ್ಲ ನಿಮ್ಮ ಉದ್ಧೇಶ-ದುರುದ್ಧೇಶ ಒಂದೇ…. ಅದು ಬಸನಗೌಡ ಪಾಟೀಲರಿಗೆ ಠಕ್ಕರ್ ಕೊಡುವುದು ಅಷ್ಟೇ ತಾನೆ? ವಿಜಯಪುರಕ್ಕೆ ಹೋಗಿ ಕಾರ್ಯಕರ್ತರ ನಡುವೆ ಹೂಂಕಾರ ಝೇಂಕಾರ ಹಾಕಿಕೊಂಡು ಭಲೇ ಎನ್ನಿಸಿಕೊಂಡದ್ದು ಬಿಟ್ಟರೇ ಕರ್ನಾಟಕ ರಾಜ್ಯ ಬಿ.ಜೆ.ಪಿ. ಪಕ್ಷದ ಅಧ್ಯಕ್ಷರು ಹುಚ್ಚರ ಕೈಯಲ್ಲಿಯ ಕಲ್ಲು ಇದ್ಸಂತೆ ಎನ್ನುವುದನ್ನು ಮಾಗಿದ ಮನಸ್ಸುಗಳಿಗೆ, ಪ್ರಜ್ಞಾವಂತ ಹಿರಿ-ಕಿರಿಯ ಕಾರ್ಯಕರ್ತರಿಗೆ ಮತ್ತು ನನ್ನಂಥಹವರಿಗೆ ಅಸಂಹ್ಯಾವಾಯಿತು. ಮುಜುಗರದಿಂದ ಮುದುಡಿಕೊಳ್ಳುವಂಥಾಯಿತು. ” ತಿಖ ಚಿವುಟಿ ಮಗು ಅಳಲಾರಂಭಿಸಿದಾಗ ಲಾಲಿ ಹಾಡುವುದು” ಗಾದೆ ಮಾತಿದೆ. ಈ ಕೆಲಸ ರಾಜಕೀಯದಲ್ಲಿ ನುರಿತ ಕೇಡಿ ರಾಜಕಾರಣಿಗಳು ಕಾಲ ಕಾಲಕ್ಕೆ ಮಾಡುವುದು ಸಾಮಾನ್ಯ ಸಂಗತಿ.
ಆದರೇ, ಪಕ್ಷದಲ್ಲಿರುವ ಅನುಭವಿ, ನುರಿತ ರಾಜಕಾರಣಿ, ನಿಮಗಿಂತಲೂ ದುಪ್ಪಟ್ಟು ವಯಸ್ಸಿನ ಅಧಿಕಾರದಲ್ಲಿರುವ, ಅದೂ ಒಂಟಿ ಸಲಗದಂತೆ ಹೋರಾಟ ಮಾಡಿ ಚುನಾವಣೆಗಳಲ್ಲಿ ಆಯ್ಕೆಯಾಗುವ ಜನಪ್ರೀಯ ಜನನಾಯಕ. ಮತ್ತು
ಕೇಂದ್ರ ರಾಜ್ಯಗಳಲ್ಲಿ ಅಧಿಕಾರ ನಡೆಯಿಸಿದ ಅನುಭವಿ ವ್ಯಕ್ತಿ ಬಸನಗೌಡ ಪಾಟೀಲ್ ಯತ್ನಾಳರಿಗೆ ನೀವು ಯಾವ ಸಂದೇಶ ತಲುಪಿಸಿದ್ದಿರಿ. ನೀವು ವಿಜಯಪುರನಗರಕ್ಕೆ ಹೋದ ತಕ್ಷಣ ಅವರು ಗಡ ಗಡ ನಡುಗಿದರಾ? ತಪ್ಪಾಯಿತು ಮಹಾಸ್ವಾಮಿ ಎಂದು ನಿಮ್ಮ ಕೈ ಕಾಲು ಹಿಡಿದರಾ?
ನೀವು ಇಲ್ಲಿ ಗಮನಿಸಬೇಕಾದ ಅಂಶವೆನೆಂದರೇ ನಿಮ್ಮ ದೇಹದ ಒಟ್ಟು ತೂಕದಷ್ಟು ಪಾಟೀಲರಲ್ಲಿ ದೀಮಾಕು, ಸೊಕ್ಕು, ಅಸಡ್ಡೆ ಇದೆ. ಅದನ್ನು ಹೂಫ್ ಎಂದು ಊದಿದ ತಕ್ಷಣ ಗಾಳಿಗೆ ಹಾರಿ ಹೊಗುವಂಥಹದ್ದಲ್ಲ. ಅದರಲ್ಲಿ ಓರಿಜಿನಾಲಿಟಿ ಇದೆ. ಸಂಕಲ್ಪವಿದೆ. ಗಟ್ಟಿತನ, ಧೈರ್ಯ, ಕಾಯುವ ತಾಳ್ಮೆ ಇದೆ, ಸಮಾಧಾನದ ಗುಣವಿದೆ. ಆದರೇ ಅವರ ವ್ಯಕ್ತಿತ್ವವನ್ನು ಯಡಿಯೂರಪ್ಪಾಜೀ ಅರ್ಥ ಮಾಡಿಕೊಳ್ಳಲೇ ಇಲ್ಲ.
ಯಡಿಯೂರಪ್ಪಾಜೀ ರಾಜ್ಯದಲ್ಲಿ ಸುಧೀರ್ಘ ಹೋರಾಟ ಮಾಡೀ ತಾವು ಬೆಳಕಿಗೆ ಬಂದರು ನಿಜ. ರಾಜ್ಯದಲ್ಲಿ ಅಧಿಕಾರಕ್ಕೇರಲು ಇನ್ನಿಲ್ಲದ ಅವಗಡ, ಅಡ್ಡ ದಾರಿ ಹಿಡಿದರು. ಯಡಿಯೂರಪ್ಪಾಜೀಯವರೆಂದರೇ ನನಗೆ ಕನಿಕರವಿದೆ. ಅವರು ಹುಟ್ಟು ಹೋರಾಟಗಾರರೇ ವಿನಹ ಒಳ್ಳೆ ಆಡಳಿತಗಾರರಲ್ಲ. ಅಪ್ಪಾಜೀ, ಬಹುಪರಾಕ ಹೇಳುವವರನ್ನು ತಮ್ಮ ಸುತ್ತಲೂ ಇಟ್ಟುಕೊಂಡು ಪಕ್ಷ ಮತ್ತು ಆಡಳಿತ ನಡೆಯಿಸಿದರೇ ವಿನಹ ರಾಜ್ಯದ ಜನತೆಗೆ ಒಳ್ಳೆ ಆಡಳಿತ ಕೊಡಲಿಲ್ಲ.
ಹಲವಾರು ಎಡವಟ್ಟುಗಳನ್ನುಮಾಡಿಕೊಂಡರು. ಇನ್ಜಿಲ್ಲದಂತೆ ಮುಗ್ಗರಿಸಿದರು. ಯಡಿಯೂರಪ್ಪಜೀಯನ್ನು ರಾಜಕೀಯವಾಗಿ ಯಾರೂ ಛೀ… ಥೂ.. ಅನ್ನುತ್ತಿಲ್ಲ. ಯಾಕೆಂದರೇ ಅವರ ಬೆನ್ನಿಗೆ ಬಹುಸಂಖ್ಯಾತ ಕೋಮಿನವರಿದ್ದಾರೆ, ಮಠಾಧಿಪತಿಗಳಿದ್ದಾರೆ ಎಂದು ವಿರೋಧ ಪಕ್ಷದ ಮಹಾನ್ ರಾಜಕಾರಣಿಗಳು ರಾಜಕೀಯ ಉದ್ದೇಶಕ್ಕಾಗಿ ಹೆದರಿದರೇ ವಿನಹ ಅಪ್ಪಾಜೀಯವರ ಆಡಳಿತ, ಜಾಣತನ, ದೂರಗಾಮಿ ವ್ಯಕ್ತಿ ಎಂದು ಹೆದರಲಿಲ್ಲ. ನನಗೆ ಸ್ಪಾನ್ಸರಗಳೇನಾದರೂ ಸಿಕ್ಕರೇ ಮುಂದಿನ ದಿನಗಳಲ್ಲಿ ”” ಯಡಿಯೂರಪ್ಪಾಜೀಯ ಯಡವಟ್ಟಿಗಳು “” ಎಂಬ ಸರಣಿ ಹೊರಗೆ ತರುವ ಉದ್ದೇಶವಿದೆ.
ಕರ್ನಾಟಕ ರಾಜ್ಯದ ಬಿ.ಜೆ.ಪಿ ಪಕ್ಷದಲ್ಲಿ ನಿಮ್ಮದಲ್ಲದ, ಅರ್ಹತೆ ಇಲ್ಲದ, ಅಧಿಕಾರ ಸ್ಥಾನವನ್ನು ಪಡೆದಿದ್ದಿರಿ. ಇದು ನಿಮ್ಮ ಸಾಮಥ್ಯ೯ ದಿಂದ ಸಿಕ್ಕಿದ್ದಲ್ಲ. ಬದಲಿಗೆ ಅಪ್ಪಾಜಿಯವರ ಜಿದ್ದು, ಅವರಿಗಿರುವ ಪ್ರಭಾವದಿಂದ ಪಡೆದಿದ್ದಿರಿ ವಿನಹ ಅಧಿಕಾರದ ಅನುಭವ ಸಾಲದು. ಕಾರಣವೇನೆಂದರೇ ಹಿರಿಯರ, ಇನ್ನಿತರರ ಸಲಹೆ – ಸೂಚನೆ ಪಡೆದು ಅಧಿಕಾರ ನಡೆಯಿಸುಂತಾದರೇ ಇದೇ ಥರಹ ಬೇಕಿಲ್ಲದವರೊಂದಿಗೆ ಗುದ್ದಾಡಲು ಊರೂರು ಅಲೆದು, ವೈರಿಗಳ ದಮ್ಮ್-ಕೆಮ್ಮುಗಳ ಬಗ್ಗೆ ಸವಾಲು ಹಾಕುತ್ತಾ ಸುತ್ತಾಡಬೇಕಾಗುತ್ತದೆ.
ಪಕ್ಷದಲ್ಲಿರುವ ಒಬ್ಬ ರಾಜಕಾರಣಿಯ ಮೊನಚಾದ ಮಾತುಗಳಿಂದ ಪಕ್ಷಕ್ಕೆ ಡ್ಯಾಮೇಜ ಅಗುತ್ತದೆ. ಎಂಬ ಮನಸ್ಥತಿಯಿಂದ ಪಾಟೀಲರೊಂದಿಗೆ ಕುಸ್ತಿ ಆಡಲು ಅವರಿದ್ದ ಸ್ಥಳಕ್ಕೆ ತೊಡೆ ತಟ್ಟಲು ಹೋಗಿದ್ದಿರಲ್ಲಾ? . ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಹತ್ತು ಹಲವು ಇದೇ ಥರಹದವರು ಹುಟ್ಟಿಕೊಂಡಾಗ ಅಂಥಹ ವ್ಯಕ್ತಿಗಳಿರುವ ಸ್ಥಳಕ್ಕೆ ಹೋಗಿ ತೊಡೆ ತಟ್ಟುತ್ತಿರಾ? ಇದೇ ರೀತಿ ಮಾಡುತ್ತಾ ನಡೆದರೇ ರಾಜ್ಯದಲ್ಲಿ ಪಕ್ಷ ಹ್ಯಾಗೆ ಉಳಿಸಿಕೊಳ್ಳುತ್ತಿರಿ?.ಹ್ಯಾಗೆ ಬೆಳೆಸುತ್ತಿರಾ?
ಪಾಟೀಲರನ್ನು ಉತ್ತೇಜಿಸುತ್ತಿರುವುದು ನೀವೇ? ನೀವೇ? ಇದಕ್ಕೆ ನಿಮ್ಮ ಸುತ್ತಲೂ ಇರುವವರು ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ, ಬಹುಪರಾಕ ಹಾಕುತ್ತಿದ್ದಾರಷ್ಟೇ.
ಒಂದು ಮಾತು ನೆನಪಿರಲಿ ನಿಮಗೆ ಪಕ್ಷ ಉಳಿಸುವುದು, ಬೆಳೆಸುವದು, ನೀವು ಒಳ್ಳೆಯ ನಾಯಕರಾಗಿ ಎಲ್ಲರನ್ನು ಒಟ್ಟಿಗೆ ಕರೆದ್ಯೋಯುವ ಸ್ನೇಹಮಯಿ ನಾಯಕತ್ವದ ವ್ಯಕ್ತಿ ಎನ್ನಿಸಿಕೊಂಡು ಸಮಾಜದಲ್ಲಿ, ರಾಜ್ಯದಲ್ಲಿ, ಕೇಂದ್ರದಲ್ಲಿ ಭೇಷ್ ಎನ್ನಿಸಿಕೊಳ್ಳಬೇಕಾದರೇ ಬಸನಗೌಡ ಎಂಬ ಬೆಂಕಿ ಚೆಂಡನ್ನು ( ಇಂಥಹ ಬೆಂಕಿ ಚಂಡುಗಳು ಬಿ.ಜೆ.ಪಿಯಲ್ಲಿ ತುಂಬಾ ಇವೆ ಆದರೇ ಅಪ್ಪಾಜೀಯ ಹೊಡೆತಕ್ಕೆ ಮೂಲೆ ಗುಂಪಾಗಿವೆ. ಜೊಳ್ಳು – ಜೊಟ್ಟುಗಳು ಮಾತ್ರ ಮುನ್ನೆಲೆಯಲ್ಲಿದ್ದು ಮೂಗೂತಿ ಆಟ ಆಡುತ್ತಿವೆ) ಅಂಥಹವರನ್ನು ಅಥವಾ ಕೆಲವು ಬೆಂಕಿ ಚಂಡುಗಳೊಂದಿಗೆ ನಿಮ್ಮ ಸುತ್ತಲೂ ಇರುವ ಬಹಪರಾಕಗಳನ್ನು ಮಿಶ್ರಣ ಮಾಡಿಕೊಂಡು ನೀವು ಯಜಮಾನಿಕೆ ನಡೆಯಿಸಿದ್ದೇ ಆದರೇ ಒಳ್ಳೆಯ ನಾಯಕರೆನ್ನಿಸಿಕೊಳ್ಳುತ್ತಿರಿ. ಇಲ್ಲದ್ದರೇ ಹತ್ತರಲ್ಲಿ ಒಬ್ಬರಾಗುತ್ತಿರಷ್ಟೇ.
ಅಪ್ಪಾಜಿಯವರು ಬಿ.ಜೆ.ಪಿ.ಕಟ್ಟಿ ಬೆಳೆಸಲಿಲ್ಲ. ಬಿ.ಜೆ.ಪಿ. ಪಕ್ಷ ಕಟ್ಟಿ ಬೆಳೆಸಿದ್ದು ೧೯೮೪ರ ಆಸುಪಾಸಿನಲ್ಲಿ ಪಕ್ಷದಲ್ಲಿದ್ದ ಎ.ಕೆ.ಸುಬ್ಬಯ್ಯನವರು ನೆನಪಿರಲಿ. ನಂತರ ಬಂದ ಅಪ್ಪಾಜಿಯವರು ಯಡವಟ್ಟು ದಾರಿಗಳಿಂದ ಪಕ್ಷ ಅಧಿಕಾರಕ್ಕೆ ತಂದರಷ್ಟೇ.
ಇವನ್ಯಾರು? ಹೀಗೆ ಬರೆದುಕೊಳ್ಳುವವನು? ಎಂದೆನ್ನಿಸಬಹುದು. ನಾನು ೧೯೮೦ ರಿಂದ ಆರ್.ಎಸ್.ಎಸ್ ನಲ್ಲಿ ಕಲಬುರ್ಗಿ ನಗರದ ಅರ್.ಎಸ್.ಎಸ್ ಪ್ರಮುಖರಾಗಿದ್ದ, ಚಿಲ್ಲಾಳರು, ಶರಣಗೌಡ ಪಾಟೀಲರು, ಡಾ.,ಬಸವರಾಜ ಪಾಟೀಲ್ ವಿದ್ಯಾಸಾಗರ್, ಇನ್ನೂ ಹಲವಾರು ಅತಿರಥ ಮಾಹಾರಥರೊಂದಿಗೆ ಕೆಲಸ ಮಾಡುತ್ತಾ, ೧೯೮೬ ರಿಂದ ಬಿ.ಜೆ.ಪಿ. ಪಕ್ಷದೊಂದಿಗೆ ನಂಟು ಇಟ್ಟುಕೊಂಡು ಬೆಳೆದವನು. ೨೦೦೦ ರಲ್ಲಿ ಬೆಂಗಳೂರಿಗೆ ಬಂದು ಹೈಕೋರ್ಟಿನಲ್ಲಿ ವಕೀಲ ವೃತ್ತಿ ನಡೆಸುತ್ತಾ ಇದ್ದೆನೆ. ಇಂದು ಯಾರಾದರೂ “” ನೀವು ಬಿ.ಜೆ.ಪಿ ಪಕ್ಷದ ಕಟ್ಟಾಳುಗಳಾ? “” ಎಂದು ಸ್ನೇಹಿತರು ಕೇಳಿದಾಗ ಮುಜುಗರವಾಗುತ್ತದೆ.




