ಕನಕಗಿರಿ ಉತ್ಸವದ ಕಾರ್ಯ ಅಧಿಕಾರಿಗಳಿಂದ ಚುರುಕುಗೋಳ್ಳುತ್ತಿವೆ.

ಕನಕಗಿರಿ ಉತ್ಸವದ ಕಾರ್ಯ ಅಧಿಕಾರಿಗಳಿಂದ ಚುರುಕುಗೋಳ್ಳುತ್ತಿವೆ
ಕನಕಗಿರಿ ಉತ್ಸವದ ಕುರಿತು ಕ್ರೀಡಾ ಸಮಿತಿ,ವಸತಿ,ಭದ್ರತಾ ಸಮಿತಿ,ಸ್ವಚತ ಬಗ್ಗೆ ಮತ್ತು ಕುಡಿಯುವ ನೀರಿನ ವಿಷಯದ ಕುರಿತು ವಿವಿಧ ಕ್ರೀಡೆಗಳ ಆಯೋಜಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮತ್ತು ತಾಲೂಕ ಮಟ್ಟದ ಅಧಿಕಾರಿಗಳೊಂದಿಗೆ ಹಾಗೂ ಪೊಲೀಸ್ ಉಪವಿಭಾಗಾಧಿಕಾರಿಗಳೊಂದಿಗೆ ಸಹಾಯಕ ಆಯುಕ್ತರು ಕೊಪ್ಪಳ ರವರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ಜರುಗಿಸಲಾಯಿತು ಉತ್ಸವ ಮತ್ತು ಕ್ರೀಡಾ ನಡೆಯುವ ಸ್ಥಳಗಳನ್ನು ವೀಕ್ಷಣೆ ಮಾಡಲಾಯಿತು.
ಐತಿಹಾಸಿಕ ಸುಪ್ರಸಿದ್ಧವಾದ ಎರಡನೇ ತಿರುಪತಿ ಎಂದು ಕರಿಯಲು ಪಟ್ಟ ಕನಕಗಿರಿ ಉತ್ಸವ 2024ರ ಹಿನ್ನೆಲೆಯಲ್ಲಿ ಸಿದ್ಧತೆಯನ್ನು ಪರಿಶೀಲಿಸಿದರು ಸಹಾಯಕ ಆಯುಕ್ತರಾಗ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ ಹಾಗೂ ತಹಸಿಲ್ದಾರ್ ವಿಶ್ವನಾಥ್ ಮುರುಡಿ ಅವರು ವಿಶೇಷವಾಗಿ ಕಾರ್ಯಕ್ರಮಗಳು ನಡೆಯುವಂತಹ ಕ್ರೀಡಾ ವಸತಿ ಭದ್ರತಾ ಸ್ವಚ್ಛತೆ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು.
ನಂತರ ಅಧಿಕಾರಿಗಳು ಉಡಚಪ ನಾಯಕ ವೇದಿಕೆ ಸಿದ್ಧತೆಯ ಕಾರ್ಯ ಸೇರಿದಂತೆ ಎಲ್ಲಾ ಕಾರ್ಯಗಳು ಯುದ್ಧೋಪಾದಿಯಲ್ಲಿ ಆರಂಭವಾಗಿ ನಿಗದಿತ ಕಾಲಾವಧಿಯೊಳಗೆ ಪೂರ್ಣವಾಗಬೇಕು. ಸಬ್ಧಚಿತ್ರಗಳ ಮೆರೆವಣಿಗೆ, ಶ್ರೀ ಕನಕಾಚಲಪತಿ ಇತಿಹಾಸದ ಕುರಿತು ನಾಟಕ ಪ್ರದರ್ಶನ, ಕಾರ್ಯಕ್ರಮ, ಕೃಷಿ ಮೇಳ, ಫಲಪುಷ್ಪ ಪ್ರದರ್ಶನ ಸೇರಿದಂತೆ ನಾನಾ ಕಾರ್ಯಕ್ರಮಗಳಿಗೆ ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಬೇಕಾದರಿಂದ ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಚುರುಕುಗೊಳ್ಳಿಸುತ್ತಿರುವರು.
ಫೆ.27 ರಂದು ನಿಗದಿಪಡಿಸಿದ ಕ್ರಿಕೆಟ್ ಪಂದ್ಯ, ಫೆ.28ರಂದು ಮತ್ತು 29 ರಂದು ನಿಗದಿಪಡಿಸಿದ ಕಬಡ್ಡಿ, ವಾಲಿಬಾಲ್, ಕುಸ್ತಿ, ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ, ಸ್ಥಳ ಪರಿಶೀಲನೆ ಮಾಡಿದರು ಮಾರ್ಚ 1 ರಂದು ಮ್ಯಾರಥಾನ್, ಮಾರ್ಚ 2 ರಂದು ಕಲಾ ತಂಡಗಳಿಗಿದ ಶ್ರೀಕನಕಾಚಲಪತಿ ಮೂರ್ತಿ ಮೆರವಣಿಗೆ ಸೇರಿದಂತೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಅಚ್ಚುಕಟ್ಟಾಗಿ ತಯಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳ ತಂಡಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಕ್ಯಾಪ್ಟನ್ ಮಹೇಶ ಹಾಗೂ ಉತ್ಸವದ ನೂಡಲ್ ಅಧಿಕಾರಿಗಳು. ತಹಸೀಲ್ದಾರರು M ವಿಶ್ವನಾಥ ಮುರುಡಿ , ವಿಠ್ಠಲ ಜಾಬಾಗೌಡ ಸಹಾಯಕ ನಿರ್ದೇಶಕರು ಕ್ರೇಡಾ ಇಲಾಖೆ,ಕೊಪ್ಪಳ. ಡಿ ವೈ ಎಸ್ ಪಿ. ಸಿದ್ದನಗೌಡ ಪಾಟೀಲ್,ರಂಗ ಸ್ವಾಮಿ, ತಾಲೂಕ ಧ್ಯಹಿಕ ಶಿಕ್ಷಕರು, cmc ಮುಖ್ಯಧಿಕಾರಿಗಳು ಕನಕಗಿರಿ ಉತ್ಸವಕ್ಕೆ ರಚಿಸಿದ ವಿವಿಧ ತಂಡದ ಅಧಿಕಾರಿಗಳು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737




