ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಲಿಂಗಸೂಗೂರು ವಕೀಲರ ಸಂಘ.

ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಲಿಂಗಸೂಗೂರು ವಕೀಲರ ಸಂಘ.
ಇಂದು ದಿನಾಂಕ ೨೧/೦೨/೨೦೨೪ ರಂದು ರಾಯಚೂರು ಜಿಲ್ಲೆಯ ಲಿಂಗಸೂಗೂರು ನ್ಯಾಯಾಲಯ ಸಂಕಿರ್ಣದಲ್ಲಿ ಎಲ್ಲಾ ನ್ಯಾಯವಾದಿಗಳು ಸೇರಿಕೊಂಡು, ಲಿಂಗಸೂಗೂರು ನ್ಯಾಯಾಲಯದ ನ್ಯಾಯವಾದಿ ಸಂಘದ ಅಧ್ಯಕ್ಷರಾದ ಭೂಪನಗೌಡ.ವಿ.ಪಾಟೀಲ್ ನ್ಯಾಯವಾದಿಗಳ ಸಮ್ಮೂಖದಲ್ಲಿ ಸಭೆ ಕರೆದಿದ್ದರು. ಈ ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲದ ಪ್ರಖ್ಯಾತ ವಕೀಲರಾಗಿದ್ದ ಪಾಲಿ.ಎಸ್.ನಾರಿಮನ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು.
ಮತ್ತು ರಾಜ್ಯದಲ್ಲಿ ವಕೀಲರ ಮೇಲೆ ದಿನದಿಂದ ದಿನಕ್ಕೆ ನಡೆಯುತ್ತಿರುವ ದೌಜನ್ಯದ ಬಗ್ಗೆ ಖಂಡಿಸುತ್ತಾ ರಾಮನಗರ ಜಿಲ್ಲೆಯ ರಾಮನಗರ ಸಿಟಿಯಲ್ಲಿ ಪೋಲಿಸ ಅಧಿಕಾರಿಯೊಬ್ಬರು ಸುಮಾರು ೪೧ ವಕೀಲರ ಮೇಲೆ ಸುಳ್ಳು ಕೇಸ್ ದಾಖಲಿಸಿರುವುದನ್ನು ಖಂಡಿಸಿದರು. ಅಲ್ಲದೇ ಚಿಕ್ಕೊಡಿಯ ನಗರದಲ್ಲೂ ವಕೀಲರ ಮೇಲೆ ನಡೆದ ದೌರ್ಜನ್ಯ ಖಂಡಿಸುತ್ತಾ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯೆವಸ್ಥೆ ಹದಗೆಟ್ಟಿದೆ. ವಕೀಲರ ಮೇಲೇನೇ ಈ ರೀತಿಯ ದೌರ್ಜನ್ಯ ನಡೆಯುತ್ತಿದ್ದರೆ ಜನಸಾಮಾನ್ಯರ ಗತಿ ಏನು ಎಂದು ಅಕ್ರೋಷ ವ್ಯಕ್ತಪಡಿಸಿದರು. ಹಲವಾರು ನ್ಯಾಯವಾದಿಗಳು ಈ ಸಂದರ್ಭದಲ್ಲಿ ಮಾತನ್ನಾಡಿ ಘಟನೆಯನ್ನು ಒಕ್ಕೋರಲಿನಿಂದ ಖಂಡಿಸಿದರು.



