ಸುದ್ಧಿ

ಅನಂತಕುಮಾರ್‌ಹೆಗಡೆ ಹೇಳಿಕೆ ಖಂಡನೀಯ: ಸಣ್ಣ ಕನಕಪ್ಪ ಚಲುವಾದಿ.

ಅನಂತಕುಮಾರ್‌ಹೆಗಡೆ ಹೇಳಿಕೆ ಖಂಡನೀಯ: ಸಣ್ಣ ಕನಕಪ್ಪ ಚಲುವಾದಿ.

ಕನಕಗಿರಿ: ಸಂವಿಧಾನ ತಿದ್ದುಪಡಿ ಮಾಡಬೇಕೆಂದರೆ ಬಿಜೆಪಿ ಬಹುಮತ ಅಗತ್ಯ ಇದೆ ಎಂದು ಸಂಸದ ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆಯನ್ನು ಕೊಪ್ಪಳ ಬಿಜೆಪಿ ಎಸ್ಸಿ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಸಣ್ಣ ಕನಕಪ್ಪ ಚಲವಾದಿ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹೆಗಡೆ ಅವರ ಸಂವಿಧಾನದ ಬಗೆಗಿನ ಹೇಳಿಕೆಗೂ ಬಿಜೆಪಿಗೂ ಯಾವುದೇ ಬಗೆಯ ಸಂಬಂಧವಿಲ್ಲ. ಸಂವಿಧಾನದ ಆಶಯದಂತೆ ನಡೆದುಕೊಳ್ಳುವ ಪಕ್ಷ ಎಂದರೆ ಅದು ಬಿಜೆಪಿ. ಸಂವಿಧಾನದಲ್ಲಿ ಹೇಳಿದಂತೆ ಸರ್ವರಿಗೂ ಸರ್ವಪಾಲು, ಸರ್ವರಿಗೂ ಸಮಬಾಳು ಎಂಬುದು ಹಲವಾರು ಯೋಜನೆ ಜಾರಿಗೊಳಿಸುವ ಮೂಲಕ ಸಾಬೀತುಪಡಿಸಿದೆ ಎಂದು ತಿಳಿಸಿದ್ದಾರೆ. ಸಂವಿಧಾನದ ಸಾರ್ವಭೌಮತ್ವ ವನ್ನು ಎತ್ತಿ ಹಿಡಿಯುವ ಅಚಲವಾದ ಬದ್ಧತೆಯನ್ನು ಬಿಜೆಪಿ ಹೊಂದಿದೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಡಾ. ಬಿ.ಆರ್. ಅಂಬೇಡ್ಕರ್‌ಮೌಲ್ಯ ಹಾಗೂ ಆದರ್ಶ ಪಾಲಿಸಿಕೊಂಡು ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ, ಎರಡನೇ ಬಾರಿಗೆ ಮೋದಿ ಸಂವಿಧಾನಕ್ಕೆ ನಮಸ್ಕರಿಸಿ ಕರ್ತವ್ಯ ಕಾರ್ಯಾರಂಭಿಸಿದ್ದಾರೆ. ಇದು ಅವರು ಸಂವಿಧಾನಕ್ಕೆ ನೀಡುವ ಗೌರವ ಎಂದರು. ಸಂಸದ ಅನಂತಕುಮಾರ ಹೆಗಡೆ ಏನೇನೋ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತಂದಿದ್ದಾರೆ. ಇದು ಅತ್ಯಂತ ಖಂಡನೀಯ. ಇದು ಅವರ ವೈಯಕ್ತಿಕ ಹೇಳಿಕೆಯಷ್ಟೇ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ ಈ ರೀತಿ ಹೇಳಿಕೆ ನೀಡಬಾರದೆಂದು ಆಗ್ರಹಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button