Uncategorized

ದೇವಪುರ ಗ್ರಾಮದಲ್ಲಿಯ ೧೦,೦೦೦/- ಲೀಟರ್ ಸಾಮಥ್ರ್ಯದ ಟ್ಯಾಂಕಿನ ನೀರು ಎಲ್ಲಿ ಹೋಗುತ್ತಿದೆ.

ದೇವಪುರ ಗ್ರಾಮದಲ್ಲಿರುವ ೧೦,೦೦೦/- ಲೀಟರ್ ಸಾಮಥ್ರ್ಯದ ಟ್ಯಾಂಕಿನ ನೀರು ಎಲ್ಲಿ ಹೋಗುತ್ತಿದೆ?

ಈ ೧೦ ಸಾವಿರ ಲೀಟರ್ ಟ್ಯಾಂಕಿನ ನೀರನ್ನೇ ನಂಬಿದ ಈ ಬೇಸಿಗೆ ಕಾಲದ ಕಡು ಬಿಸಿಲಿನಲ್ಲಿ ಬ್ರಾಹ್ಮಣ ಗಲ್ಲಿಯ ಸುಮಾರು ೩೦೦ ಕುಟುಂಬದ ನಿವಾಸಿಗಳ ಗೋಳು ಹೇಳತೀರದಾಗಿದೆ ಎಂದು ಸ್ಥಳದಲ್ಲಿಯ ಸಮಸ್ಯೆಯನ್ನು ಕಣ್ಣಾರೇ ಕಂಡ ನಮ್ಮ ಪತ್ರೀಕಾ ವರದಿಗಾರ ಕಣ್ಣಿರು ಸುರಿಸುತ್ತಾ ಬರೆದುಕೊಂಡಿದ್ದಾನೆ‌.

ಸರಕಾರಿ ನೌಕರರು ನೌಕರರಾಗಿ ಕಾರ್ಯನಿರ್ವಸಿದರೇ ಜನಸಾಮಾನ್ಯರು ನಿರಮ್ಮಳರಾಗಿರುತ್ತಾರೆ ಅಲ್ಲದೇ, ಸಾಮಾನ್ಯ ಪ್ರಜೆಗಳು ಹಾಗೂ ಮತದಾರರಿಗೆ ನೀರು, ರಸ್ತೆ, ವಿದ್ಯುತ್ ಸರಿಯಾಗಿ ಸಮರ್ಪಕವಾಗಿ ಕೊಟ್ಟಿದ್ದೇ ಆದರೇ ಸಮಾಜದಲ್ಲಿ ಅವರು ಸುಖ ಸಂತೋಷದಿಂದ ಇರುತ್ತಾರೆ. ಆದರೇ ದೇವಪುರ ಗ್ರಾಮದ‌ ವಿಚಾರದಲ್ಲಿ ಎಲ್ಲೋ ಎಡವಟ್ಟಾಗಿದೆ/ ಆಗುತ್ತಿದೆ ಎನ್ನಿಸುತ್ತಿದೆ.

ಸರಕಾರವು ದೇವಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಜನ ಸಾಮಾನ್ಯರ ನೀರಿನ ಬವಣೆ ತಪ್ಪಿಸಲು ೨ ವಾಟರ್ ಟ್ಯಾಂಕಗಳನ್ನು ನಿರ್ಮಿಸಿ ಅದಕ್ಕೆ ತಕ್ಕಂತೆ ನೀರಿನ ಪೈಪಗಳು, ನೀರಿನ ತೊಟ್ಟಿಗಳ ವ್ಯೆವಸ್ಥೆ ಮಾಡಿದೆ ಅದಕ್ಕಾಗಿ ಸರಕಾರಕ್ಕೆ ಧನ್ಯವದಗಳು. ಆದರೇ ದೇವರು ಕೊಟ್ಟರೂ ಪೂಜಾರಿ ಕೊಡ್ತಾ ಇಲ್ಲ ಎನ್ನುವಂತಾಗಿದೆ ಎನ್ನುತ್ತಾರೆ ಈ ವಾರ್ಡಿನ‌ ನಿವಾಸಿಗಳು.

ಗ್ರಾಮದ‌ ೨ ವಾಟರ್ ಟ್ಯಾಂಕಗಳಲ್ಲಿ ೧ ವಾಟರ್ ಟ್ಯಾಂಕಿಗೆ ಸಂಬಂಧಿಸಿದಂತೆ ನೀರಿನ ಪೈಪ್ಗಳು, ನೀರಿನ ತೊಟ್ಟಿಗಳನ್ನು ಸೂಸ್ಥಿತಿಯಲ್ಲಿಟ್ಟುಕೊಂಡು, ಸಮರ್ಪಕವಾಗಿ ನೀರಿನ ವ್ಯೆವಸ್ಥೆ ಮಾಡಿಕೊಂಡು ಊರಿನ ೧ನೇ ವಾರ್ಡ, ೨ನೇ ವಾರ್ಡ, ೪ನೇ ವಾರ್ಡಗಳಲ್ಲಿ ನೀರಿನ ತೊಂದರೆಯಾಗದಂತೆ ನೋಡಿಕೊಂಡು‌ ಹೋಗುತ್ತಿರುವ ಹಾಗೂ ನಿವೃತ್ತಿಯ ಸಮೀಪದಲ್ಲಿರುವ ವಾಟರ್ಮೆನ್ ಕಾಳಪ್ಪ ಕಂಬಾರ ಇವರು ತಮ್ಮ ಕೆಲಸ‌ ಚೆನ್ನಾಗಿ‌ ನಿಭಾಯಿಸಿಕೊಂಡು ನಡೆದಿದ್ದಾರೆ. ಶ್ರಮಜೀವಿಯ ಇವರ ಕೆಲಸ ೧ನೇ, ೨ನೇ, ೪ನೇ ವಾರ್ಡನ ನಿವಾಸಿಗಳು ಸಮೃದ್ಧ ನೀರಿನ ಪೂರೈಕೆಯಿಂದ ಸಮಾಧಾನ ಹಾಗೂ ಖುಷಿಯಾಗಿದ್ದಾರೆ.

ಆದರೇ ದೇವಪುರ ಗ್ರಾಮ ಪಂಚಾಯಿತಿಯ ೪ ನೇ ವಾರ್ಡಿನ ಜನರಿಗೆ ಮಾತ್ರ ಕಷ್ಟ, ಗೋಳು ತಪ್ಪಿಯೇ ಇಲ್ಲವೆನ್ನುತ್ತಾರೆ ಅಲ್ಲಿಯ ನಿವಾಸಿಗಳು.

ಈ ೪ನೇ ವಾರ್ಡನ ನಿವಾಸಿಗಳಿಗಾಗಿಯೇ ಸುಮಾರು ೧೦,೦೦೦/- ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ ಇದೆ. ನೀರು ಕೂಡು ಸಮೃದ್ಧವಾಗಿದ್ದು ದಿನಾಲೂ ಟ್ಯಾಂಕ ತುಂಬಿಸುತ್ತಾರೆ. ಆದರೇ ೪ ನೇ ವಾರ್ಡನ ನಿವಾಸಿಗಳಿಗೆ ನಿತ್ಯವೂ ನೀರಿನ ಗೋಳು ತಪ್ಪಿದ್ದಲ್ಲ. ನೀರಿಗಾಗಿ ಈ ಜನರು ಪಡುವ ಪಾಡು ಆ ಭಗವಂತನಿಗೇ ಪ್ರೀತಿ ಎನ್ನಬೇಕು. ಈ ಪ್ರದೇಶದಲ್ಲಿ ನೀರಿನ‌ ಕೊರತೆ ನೋಡಿದ ನಮ್ಮ ವರದಿಗಾರ ನಾವು ದೇವಪುರ ಗ್ರಾಮದಲ್ಲಿದ್ದಿವಾ? ಇಲ್ಲವೇ ನೀರಿಲ್ಲದ‌
ಉಗಾಂಡಾ, ಇಥಿಯೋಪಿಯಾದಲ್ಲಿದ್ದಿವಾ? ಎಂದು ಆಶ್ಚರ್ಯವಾಗುತ್ತಿದೆ ಎನ್ನುತ್ತಾರೆ.

ವಾರ್ಡ‌ ನಂ-೪. ಬ್ರಾಹ್ಮಣಗಲ್ಲಿ‌ ಎನ್ನುತ್ತಾರೆ ನಿಜವಾಗಿ ಈ ವಾರ್ಡಿನಲ್ಲಿ ಕುರುಬರು, ಅಂಬಿಗರು, ಮುಸ್ಲೀಮರು, ಇನ್ನಿತರ ಜನರು ವಾಸವಾಗಿದ್ದಾರೆ.

೧೦ ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್ ನೀರು ಎಲ್ಲಿ ಹೋಗುತ್ತಿದೆ/ ಎಲ್ಲಿ ಮಾಯವಾಗುತ್ತಿದೆ ಎಂಬ ಪವಾಡ ಮೇಲಾಧಿಕಾರಿಗಳಾದ ಯಾದಗಿರಿ ಜಿಲ್ಲೆಯ ಸಿ.ಇ.ಓ. ನೋಡಲ್ ಅಧಿಕಾರಿಗಳು, ಬರ ಪರಿಹಾರದ ವಿಶೇಷ ಅಧಿಕಾರಿಗಳು, ಸಹಾಯಕ ಕಮೀಷನರ್ರು, ಜಿಲ್ಲಾಧಿಕಾರಿಗಳು ಮಾತ್ರ ಈ ಸಮಸ್ಯೆಯನ್ನು ಸ್ವತಹ ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿದಾಗಲೇ ಮಾಯವಾಗುತ್ತಿರುವ ಈ ೧೦ ಸಾವಿರ ಲೀಟರನ ಮಹಿಮೆ ಅಥವಾ ಪವಾಡ ಹೊರ ತೆಗೆಯಬಲ್ಲರು.

ವಾರ್ಡ ನಂಬರ ೪ ರಲ್ಲಿ ಕುಡಿಯಲು/ದಿನಬಳಕೆಯ ನೀರಿನ ಸಮಸ್ಯೆ ಅದೆಷ್ಟು ಭೀಕರವಾಗಿದೆ ಎಂದರೇ ಮನುಷ್ಯ ಸಮಾಜದಲ್ಲಿ ಬದುಕುವ ಮಾನವೀಯಾನುಕಂಪದ‌ ವ್ಯಕ್ತಿಗಳು ನಾಚಿ ನೀರಾಗಿ, ಸ್ಥಳದಿಂದ‌ ಓಡಿ ಹೋಗುತ್ತಾರೆ. ಅಂಥಹ ಧಯನೀಯ ಪರಿಸ್ಥಿತಿ ಇದೆ. ಅದರಲ್ಲೂ‌ ಈ. ವಾರ್ಡನಲ್ಲಿ ವಾಸಿಸುತ್ತಿರುವ ನವಯುವಕರಿಗೆ ಹೆಣ್ಣು ಕೊಡಲೂ ಸಹ ಅಕ್ಕ-ಪಕ್ಕದ ಊರಿನ ಹೆಣ್ಣೆತ್ತವರು ಹೆದರುತ್ತಾರೆ. ಈ ಕಾರಣಕ್ಕೇನೆ‌ ಈ ವಾರ್ಡನಲ್ಲಿ ಅಹಿವಾಹಿತ ಯುವಕರು ಸಾಯಂಕಾಲವಾದ ಕೂಡಲೇ ಊರ ಮುಂದೆ ಇರುವ ಆಂಜನೆ ಸ್ವಾಮಿಯ ದೇವಸ್ಥಾನದಲ್ಲಿ ಕುಳಿತು ಅಂಭೋ ಎಂದು ಅಳುವ ಪರಿಸ್ಥಿತಿ ಇದೆ.

ಅಧಿಕಾರಿಗಳು, ರಾಜಕೀಯ ಮುಖಂಡರು, ರಾಜಕೀಯ ನಾಯಕರು, ಒಮ್ಮೆ‌ಈ ವಾರ್ಡಿಗೆ ಬಂದು‌ ನೈಜ ಸಮಸ್ಯೆಯನ್ನು ಕಂಡು‌ ಪರಿಹಾರಕ್ಕೆ ಪ್ರಯತ್ನಿಸಬಾರದೇ? ಅರ್.ಎಮ್.ಎಸ್..ಬೆಂಗಳೂರು.
ಪ್ರಜಾಶ್ರೀ ಪಾಕ್ಷೀಕ ಪತ್ರಿಕೆ. ಪ್ರಜಾಶ್ರೀ ಆನ್ ಲೈನ್ ಪತ್ರಿಕೆ ಬೆಂಗಳೂರು.

Related Articles

Leave a Reply

Your email address will not be published. Required fields are marked *

Back to top button