ಸಿನಿಮಾ

ದ.ಸಂ.ಸ. ಸುವರ್ಣ ಮಹೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೀವನರಾಂ ಜಯಂತಿ

ದ.ಸಂ.ಸ. ಸುವರ್ಣ ಮಹೋತ್ಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜೀವನರಾಂ ಜಯಂತಿ

ಮಾನ್ಯರೆ,

ದ.ಸಂ.ಸ. ಹಾಗೂ 100 ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ದ.ಸಂ.ಸ.ದ 50 ವರ್ಷಗಳ “ಸುವರ್ಣ ಮಹೋತ್ಸವ” ಹಾಗೂ ಡಾ।। ಬಿ.ಆರ್.ಅಂಬೇಡ್ಕರ್ ಹಾಗೂ ಜಗಜೀವನರಾಂ ಜಯಂತಿಯನ್ನು ಡಾ॥ಬಿ.ಆರ್.ಅಂಬೇಡ್ಕರ್ ಭವನ, ವಸಂತನಗರ, ಬೆಂಗಳೂರು ಇಲ್ಲಿ ದಿನಾಂಕ:15.04.2024ರಂದು ಬೆಳಿಗ್ಗೆ 10-30ಗಂಟೆಗೆ ನಡೆಸಲುದ್ದೇಶಿಸಿವೆ.

ಈ ಐತಿಹಾಸಿಕ ಸಮಾವೇಶಕ್ಕೆ ರಾಜ್ಯದ 30 ಜಿಲ್ಲೆಗಳಿಂದ ಹಾಗೂ ವಿವಿಧ ರಾಜ್ಯಗಳ ಪ್ರಮುಖ ಹೋರಾಟಗಾರರು ಮತ್ತು ರಾಜಕೀಯ ಧುರೀಣರು ಅಗಮಿಸಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ತಯಾರಿಗಾಗಿ ದ.ಸಂ.ಸ. ತಂಡಗಳು ರಾಜ್ಯದ 30 ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡು ಎಲ್ಲಾ ಜಿಲ್ಲೆಗಳಲ್ಲೂ ಪತ್ರಿಕಾ ಗೋಷ್ಠಿ ಮತ್ತು ಜನ ಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿವೆ.

ದೇಶ ರಕ್ಷಣೆ ಹಾಗೂ ಸಂವಿಧಾನ ಸಂರಕ್ಷಣೆ ಮತ್ತು ದೇಶದ ಪ್ರಗತಿಯ ದೃಷ್ಠಿಯಿಂದ ಹಲವು ಪ್ರಮುಖ ನಿರ್ಣಯಗಳನ್ನು ಈ ಐತಿಹಾಸಿಕ ಸಮಾವೇಶದಲ್ಲಿ ಕೈಗೊಳ್ಳಲಾಗುವುದು.
2024ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ಅತ್ಯಂತ ಪ್ರಬುದ್ಧ ನಿಲುವು ತಾಳಬೇಕಿದೆ. ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕಾಗಿದೆ. ಜಾತಿವಾದಿ ಮತ್ತು ಕೋಮುವಾದಿಗಳನ್ನು ಸೋಲಿಸಲೇಬೇಕಾಗಿದೆ. ಇಂತಹ ಅತಿ ಜರೂರು ಹಾಗೂ ಸೂಕ್ಷ್ಮ ವಿಚಾರವಾಗಿ ಚಿಂತನ-ಮಂಥನ ನಡೆಸಿ ಸೂಕ್ತ ನಿರ್ಧಾರ

ಕೈಗೊಳ್ಳಲಾಗುವುದು.

ಶೋಷಿತ ಸಮುದಾಯಗಳ ಜಾಗೃತಿ ಮತ್ತು ಗೌರವದ ಬದುಕಿಗಾಗಿ ಅವಿರತ ಹೋರಾಟ ಮಾಡಿ ದಲಿತ ಚಳವಳಿಗೆ ಜೀವ ತುಂಬಿದ ಹಲವಾರು ಹಿರಿಯ ಹೋರಾಟಗಾರರನ್ನು ಪ್ರೋತ್ಸಾಹಿಸಿ ಅಭಿನಂದಿಸಲಾಗವುದು.

ಹಿರಿಯ ಹೋರಾಟಗಾರರಾದ ಡಾ.ಎನ್. ಮೂರ್ತಿರವರು ಬರೆದಿರುವ ದಲಿತ ಚಳವಳಿಯ ಸುದೀರ್ಘ ಹೋರಾಟಗಳ ದಾಖಲೆಗಳುಳ್ಳ 25 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು.

ರಾಜ್ಯದ ಎಲ್ಲಾ ಸಂಘಟನೆಗಳು ಹಾಗೂ ಪ್ರಗತಿಪರ ಸಾಹಿತಿ ಕಲಾವಿದರನ್ನು ಒಂದೇ ವೇದಿಕೆಗೆ ತಂದು ಗಟ್ಟಿ ನೆಲೆಯಲ್ಲಿ ಪರ್ಯಾಯ ರಾಜಕೀಯ ಸಂಘಟಿಸಲು ಹಾಗೂ ಮುಂದಿನ ಅಪಾಯದ ದಿನಗಳನ್ನು ಹಿಮ್ಮೆಟ್ಟಿಸಲು ಸಂಘಟಿತ ಗಟ್ಟಿ ಹೋರಾಟಕ್ಕೆ ಭೂಮಿಕೆ ಸಿದ್ಧಗೊಳಿಸಲು ದಿಟ್ಟ ಹೆಜ್ಜೆ ಇಡಲಾಗುವುದು. ಇನ್ನೂ ಹಲವಾರು ಪ್ರಮುಖ ನಿರ್ಣಯಗಳನ್ನು ಈ ಐತಿಹಾಸಿಕ ಸಮಾವೇಶದಲ್ಲಿ ಕೈಗೊಳ್ಳಲಾಗುವುದು.

ಈ ಸಮಾವೇಶಕ್ಕೆ ರಾಜ್ಯದ ಎಲ್ಲಾ ಸಮ ಚಿಂತಕ ಹೋರಾಟಗಾರರು ರೈತ, ಕನ್ನಡ ಮತ್ತು ದಲಿತ ಹಾಗೂ ಪ್ರಗತಿಪರ ಸಂಘಟನೆಗಳಿಗೆ ಈ ಮೂಲಕ ಮುಕ್ತ ಆಹ್ವಾನ ನೀಡಿ ಆಹ್ವಾನಿಸಿದೆ.

ಗೌರವಾದರಗಳೊಂದಿಗೆ.
ಇಂತಿ ತಮ್ಮ ವಿಶ್ವಾಸಿ
(ಡಾ.ಎನ್. ಮೂರ್ತಿ)

ಕರ್ನಾಟಕ ದಲಿತ ಸಂಘರ್ಷ ಸಮಿತಿ
(ಸ್ಥಾಪಕ ದಾದಾ ಸಾಹೇಬ್ ಡಾ. ಎನ್. ಮೂರ್ತಿ) ರಾಜ್ಯ ಸಮಿತಿ

ದ್ರ ಕಛೇರಿ: ನಂ. 1095, 4ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಎಂ. ಸಿ. ಬಡಾವಣೆ, ವಿಜಯನಗರ, ಬೆಂಗಳೂರು-560 040

ಸೆಂಟ್ರಲ್ ಆಫೀಸ್: ನಂ.1095, 4ನೇ ಮುಖ್ಯರಸ್ತೆ 12ನೇ ಕ್ರಾಸ್, ಎಂ.ಸಿ. ಲೇಔಟ್, ವಿಜಯನಗರ, ಬೆಂಗಳೂರು-560 040

ಡಾ. ಎನ್. ಮೂರ್ತಿ ರಾಜ್ಯಾಧ್ಯಕ್ಷರು

9845510750

6: 12.04.2024.

Related Articles

Leave a Reply

Your email address will not be published. Required fields are marked *

Back to top button