ಸುದ್ಧಿ

ಡಾ.ಬಿ.ಆರ್.ಅಂಬೇಡ್ಕರವರ ಜೀವನ ನಮಗೆ ಮಾರ್ಗದರ್ಶಿ.ವಿ.ಗಚ್ಚಿನಮನಿ

ಡಾ.ಬಿ.ಆರ್.ಅಂಬೇಡ್ಕರವರ ಜಿವನ ನಮಗೆ ಮಾರ್ಗದರ್ಶಿ- ವಿ.ಗಚ್ಚಿನಮನಿ

ಸಿಂಧನೂರು ತಾಲೂಕಿನ
ತುರವಿಹಾಳ:ಪಟ್ಟಣದ ಬಸವಚೇತನ ಶಾಲಾ ಕಾಲೇಜಿನಲ್ಲಿ ಡಾ. ಬಿರ್. ಅಂಬೇಡ್ಕರವರ 133ನೇ ಜಯಂತೋತ್ಸವ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಮಾಡಿದ ಶಿವಪುತ್ರಪ್ಪ ಪ್ರಗತಿಪರ ಚಿಂತಕರು ತುರವಿಹಾಳ ಅಂಬೇಡ್ಕರರು ಸಮಾನತೆಯ ಹರಿಕಾರರಾಗಿ ದಮನಿತರ ಬಾಳಲ್ಲಿ ಬೆಳಕನ್ನು ತಂದವರು ಮಹಿಳೆಯರು ಗೌರವದ ಬದುಕು ಸಾಗಿಸಬೇಕೆಂಬ ಆಶಾಭಾವನೆಯೊಂದಿಗೆ ಸಂವಿಧನಾತ್ಮಕ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಬಸವಣ್ಣನವರ ಚಿಂತನೆಗಳು ಅಂಬೇಡ್ಕರವರ ಆದರ್ಶಗಳನ್ನು ಅಳವಡಿಸಿಕೊಂಡವರು ಉತ್ತಮ‌ ನಾಗರಿಕರಾಗಿ ಸಮಾನತೆಯಳ್ಳ ಸಮಾಜವನ್ನು ನಿರ್ಮಿಸ ಬಲ್ಲರು ಎಂದರು.

ಅಂಬೇಡ್ಕರರು ಜಗತ್ತಿನ ಜ್ಞಾನದ ಸಂಕೇತವಾಗಿದ್ದಾರೆ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ನಾವೇಲ್ಲರು ಅವರನ್ನು ಅನುಸರಿಸಿ ಜೀವನ ಸಾಗಿಸಬೇಕಿದೆ. ಅವರಂತೆ ನಾವೂ ಸಮಾಜಮುಕಿಯಾಗೋಣ ಎಂದು ಬಸವರಾಜ ಉಪನ್ಯಾಸಕರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ವಿರೂಪಾಕ್ಷಪ್ಪ ಗಚ್ಚಿನಮನಿ ಅನಾನುಕೂಲ‌ ಪರಿಸ್ಥಿತಿಯನ್ನು ಎದುರಿಸಿ ಅಧ್ಯಯನದಿಂದ ಜಗತ್ತೆ ನೇನಪಿಟ್ಟುಕೊಳ್ಳಬಹುದಾದ ವ್ಯಕ್ತಿತ್ವವನ್ನು ಗಳಿಸಿದ ಅಂಬೇಡ್ಕರವರು ಕಷ್ಟದಲ್ಲಿ ಅರಳಿದ ಮೇರು ಜ್ಞಾನದ ನಿಧಿಯಾಗಿದ್ದಾರೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದವರು‌ ಮತ್ತು ವಿರೋಧಿಸಿದವರೆ ಇಂದು ಅವರ ಹೇಸರೇಳಿಕೊಂಡು ತಮ್ಮ ಉದ್ದೇಶ ಈಡೇರಿಸಿಕೊಳ್ಳಿತಿದ್ದಾರೆ. ಆದ್ದರಿಂದ ಅಂಬೇಡ್ಕರರವರ ಜೀವನ, ಚಿಂತನೆಗಳನ್ನು ಅವರ ಭಾಷಣ ಬರಹಗಳನ್ನು ನಾವು ಅಭ್ಯಾಸ ಮಾಡಿ ಅವರ ಜೀವನಾದರ್ಶಗಳನ್ನು ನಾವು ಅಳವಡಿಸಿಕೊಂಡು ನಮ್ಮ ಬದುಕನ್ನು ಕಟ್ಟಿಕೊಳ್ಳೋಣ ಎಂದರು.

ಅಂಬೇಡ್ಕರವರು ವಿದ್ಯೆಯಿಂದ ಜಗತ್ತೆ ತಮಗೆ ನಮಸುವಂತೆ ಮಾಡಿಕೊಂಡರು ನಾವು ಓದುವ ಸಮಯದಲ್ಲಿ ಅಂಬೇಡ್ಕರರಂತೆ ಓದಿ ಹೆತ್ತವರಿಗೂ, ಕಲಿಸಿದವರಿಗು ಹಾಗೂ ಇಡೀ ನಾಡೆ ಹೆಮ್ಮೆ ಪಡುವಂತವರಾಗಿ ಎಂದು ಮಕ್ಕಳಿಗೆ ಕರೆ ಕೊಟ್ಟರು.
ಈ ಸಂದರ್ಬದಲ್ಲಿ: ಕಾಲೇಜ ದ್ವಿತೀಯ ಪಿ.ಯು.ಸಿ. ವಾರ್ಷೀಕ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 11 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶುಭಹಾರೈಸಲಾಯಿತು. ಅಂಬೇಡ್ಕರ ಜನ್ಮದಿನಾಚರಣೆ ನಿಮಿತ್ಯ ಸಸಿ ನೆಡಲಾಯಿತು.

ಕಾರ್ಯಕ್ರಮವನ್ನು ಕು.ಜ್ಯೋತಿ.ಸಿ. ಉಪನ್ಯಾಸಕಿ ನಿರೂಪಿಸಿದರು ನಾಗರಾಜ ಮಸ್ಕಿ ಮುಖ್ಯಗುರುಗಳು ಸ್ವಾಗತ ಕೊರಿದರು ಸಾವಿತ್ರಿ ಗಚ್ಚಿನಮನಿ ಉಪನ್ಯಾಸಕರು ಕೊನೆಯಲ್ಲಿ ವಂದಿಸಿದರು. ಶಿಕ್ಷಕಿ ವಿಜಯಲಕ್ಷ್ಮೀ, ಪಾಲಕರಾದ ಹುಲುಗಪ್ಪ ಪೂಜಾರಿ,ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿಗಾರ – ವಿಜಯ್ ಕುಮಾರ್ ಹಿರೇಮಠ.ತುರುವಿಹಾಳ

Oplus_131072

Related Articles

Leave a Reply

Your email address will not be published. Required fields are marked *

Back to top button