ಡಾ. ಅಜಯ್ ಸಿಂಗ್ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲ್ಬುರ್ಗಿ ಇವರಿಗೆ ಬಹಿರಂಗ ಪತ್ರ.
ಡಾಕ್ಟರ್ ಅಜಯ್ ಸಿಂಗ್ ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲ್ಬುರ್ಗಿ ಇವರಿಗೆ ಮಾನ್ಯರೆ ವಿಷಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಪ್ರಗತಿ ಪರಿಶೀಲನ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕುರಿತು ಕೆಲವು ಮಹತ್ವದ ಸಲಹೆಗಳು ನಾನು ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಆಶಯ ಮತ್ತು ಉದ್ದೇಶಕ್ಕೆ ಧಕ್ಕೆ ಬರದಂತೆ ಪ್ರಗತಿ ಪರಿಚಲನ ಸಭೆಯಲ್ಲಿ ಚರ್ಚಿಸಬೇಕೆಂದು ಕೇಳಿಕೊಳ್ಳುತ್ತೇನೆ ಅತ್ಯಂತ ಜವಾಬ್ದಾರಿಯುತವಾದ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗಬೇಕೆಂದು ವಿನಂತಿಸಿಕೊಳ್ಳುತ್ತೇನೆ ಮೂಲತಹ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾಗದಲ್ಲಿ ಕುಡಿಯುವ ನೀರು ನಡೆಯುವ ರಸ್ತೆ ವಿದ್ಯುತ್ ಶಕ್ತಿ ಸರಬರಾಜುನ ಕೊರತೆ ಇದೆ ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಮ್ಮ ಜನಗಳಿಗೆ ಕೊನೆ ಪಕ್ಷ ಶುದ್ಧವಾದ ಕುಡಿಯುವ ನೀರು ಒದಗಿಸಲು ಸಾಧ್ಯವಾಗಿಲ್ಲ ಅದು ನಿವಾರಣೆಯಾಗಲು ತೀವ್ರವಾದಂತ ಹಾಗೂ ತುರ್ತು ಕ್ರಮ ಕೈಗೊಳ್ಳುವುದು ಬಹಳ ಅವಶ್ಯಕವಾಗಿದೆ ವೃತ್ತಿಪರ ಶಿಕ್ಷಣ ಕೋರ್ಸುಗಳು ಹಾಗೂ ಶಾಲಾ ಕಾಲೇಜುಗಳು ಅಭಿವೃದ್ಧಿಪಡಿಸುವುದು ಇಂದಿನ ಅಗತ್ಯತೆಯಾಗಿದೆ ಶಿಕ್ಷಣ ಆರೋಗ್ಯ ಮತ್ತು ಕೃಷಿ ಪರ ಕೆಲಸ ಕಾರ್ಯಗಳು ಬಹಳ ತೀವ್ರ ಗತಿಯಿಂದ ನಡೆಯಬೇಕಾಗಿದೆ ಪತ್ರಿಕೆಗಳಲ್ಲಿ ಗಮನಿಸಿದ ಹಾಗೆ ಇಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳ ಕೊರತೆ ಇದೆ ಶಿಕ್ಷಕರು ಇಲ್ಲದ ಶಾಲೆಗಳಿವೆ ಎಷ್ಟೋ ಶಾಲೆಗಳಲ್ಲಿ ಏಕೋಪಾದ್ಯಯ ಶಾಲೆಗಳಿವೆ ಒಬ್ಬೊಬ್ಬ ಶಿಕ್ಷಕರಿದ್ದಾರೆ ಇದರಿಂದ ಸಂಪೂರ್ಣ ಶಿಕ್ಷಣದ ಗುಣಮಟ್ಟ ಕುಸಿದು ಹೋಗಿದೆ ಇದು ಮೊಘಲಾಯಿ ರಾಜ್ಯ ನಿಜಾಮರು ಎರಡು ನೂರು ವರ್ಷಗಳ ಕಾಲ ಆಳಿದ್ದಾರೆ ಇಲ್ಲಿ ಆಡಳಿತ ಭಾಷೆ ಉರ್ದು ವ್ಯವಹಾರಿಕ ಭಾಷೆ ಮೋಡಿಯಾಗಿತ್ತು ಕನ್ನಡ ಮನೆ ಭಾಷೆಯಾಗಿತ್ತು ಸ್ವಾತಂತ್ರ್ಯ ಬಂದ ಮೇಲೆ ಕನ್ನಡ ಇಲ್ಲಿ ಬೆಳೆದಿದ್ದು ಉಳಿದಿದ್ದು ಇಂದು ಕನ್ನಡಕ್ಕೆ ಆದ್ಯತೆ ಕೊಟ್ಟು ಬೆಳೆಸಬೇಕಾದ ಉಳಿಸಬೇಕಾದ ಕೆಲಸ ಶಿಕ್ಷಣದ ಮೂಲಕ ಆಗಬೇಕಾಗಿದೆ ಆದ್ದರಿಂದ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಪಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಆಗಿನ ಕಾಲದಲ್ಲಿ ಏನು ಓದದ ಬರೆಯದ ಭಾಲ್ಕಿ ಚನ್ನಬಸವ ಪಟ್ಟದ ದೇವರು ಮತ್ತು ಪೂಜ್ಯಶ್ರೀ ದೊಡ್ಡಪ್ಪಪ್ಪ ಅವರು ಕನ್ನಡ ಮಾಧ್ಯಮದ ಶಾಲೆಗಳನ್ನು ಹುಟ್ಟುಹಾಕಿ ಬೆಳೆಸಿದರು ಈಗ ನಾವು ಆ ಕೆಲಸವನ್ನು ಮುಂದುವರಿಸದಿದ್ದರೆ ಅವರ ಶಾಪಕ್ಕೆ ಗುರಿಯಾಗುತ್ತೇವೆ ಈಗ ಸರ್ಕಾರ ಅಧಿಕಾರ ಅನುಕೂಲವಿರುವಾಗ ಯಾಕೆ ಈ ಕೆಲಸವನ್ನು ಮಾಡಬಾರದು ಎಂಬ ಪ್ರಶ್ನೆ ನಮಗೆ ಕಾಡುತ್ತಿದೆ ಇದರ ಜೊತೆಗೆ ಬಹಳ ಪ್ರಮುಖವಾದ ಬೇಡಿಕೆ ಎಂದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಜನರು ದೂರದ ಬೆಂಗಳೂರಿಗೆ ಹೋಗುತ್ತಾರೆ ತುಂಬಾ ಖರ್ಚಾಗುತ್ತದೆ ದೆಹಲಿಯಲ್ಲಿ ಕರ್ನಾಟಕ ಭವನ ನಿರ್ಮಾಣ ಮಾಡಿದಂತೆ ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭವನ ನಿರ್ಮಾಣ ಮಾಡಿ ಈ ಭಾಗದ ರೈತರಿಗೆ ಹೋರಾಟಗಾರರಿಗೆ ಸಮಾಜ ಸೇವಕರಿಗೆ ರಾಜಕಾರಣಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಅಭ್ಯರ್ಥಿಗಳಿಗೆ ಒಂದು ಸಾವಿರ ಕೋಣೆಗಳ ಭವನ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ಕೇವಲ ನೂರು ರೂಪಾಯಿ ಬಾಡಿಗೆಯಲ್ಲಿ ದೊರೆಯುವಂತಾಗಬೇಕು ಇದರಿಂದ ಈ ಭಾಗದ ಜನತೆಗೆ ಹೋಗಿಬರುವುದಕ್ಕೆ ಬೆಂಗಳೂರಿನಲಿ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವುದಕ್ಕೆ ಹೆಚ್ಚು ಅನುಕೂಲವಾಗುತ್ತದೆ ಈ ಪ್ರಮುಖವಾದ ಬೇಡಿಕೆಯೊಂದಿಗೆ ಇನ್ನೊಂದು ಬಹಳ ಮುಖ್ಯವಾದ ಬೇಡಿಕೆ ಎಂದರೆ ಈ ಭಾಗದ ಸಾಹಿತಿಗಳು ಮತ್ತು ಪ್ರಕಾಶಕರು ಉಳಿದು ಬೆಳೆಯಬೇಕಾದರೆ ಕಲ್ಯಾಣ ಕರ್ನಾಟಕದ ನಿಧಿಯಿಂದ ಈ ಭಾಗದ ಲೇಖಕರು ರಚಿಸಿದ ಪುಸ್ತಕಗಳು ಖರೀದಿ ಮಾಡುವ ಯೋಜನೆ ಮುಂದುವರಿಸಬೇಕು ಅಭಿವೃದ್ಧಿಯೆಂದರೆ ಕೇವಲ ಕಲ್ಲು ಮಣ್ಣು ಕಟ್ಟಡಗಳಲ್ಲ ಅದರ ಜೊತೆಗೆ ಸಾಹಿತ್ಯ ಸಂಸ್ಕೃತಿ ಕಲೆ ಶಿಕ್ಷಣ ಇವೆಲ್ಲ ಬೆಳೆಯಬೇಕು ಪುಸ್ತಕ ಪ್ರಕಾಶನ ಕಾರ್ಯ ಈ ಭಾಗದ ಲೇಖಕ ಮತ್ತು ಪ್ರಕಾಶಕರ ಬೆಳವಣಿಗೆ ಸಾಹಿತ್ಯ ಸಂಸ್ಕೃತಿ ಕಲೆಗಳ ಬೆಳವಣಿಗೆಯ ಸಂಕೇತವಾಗುತ್ತದೆ ಕೂಡಲೇ ಕೆಕೆಆರ್ಡಿಬಿ ನಿರ್ಣಯವನ್ನು ತೆಗೆದುಕೊಂಡು ಪುಸ್ತಕ ಖರೀದಿಗೆ ಮುಂದಾಗಬೇಕು ಅದಕ್ಕೆ ವಿಶೇಷವಾದ ಬಜೆಟ್ಟನ್ನು ಮಂಡಿಸಬೇಕು ಈ ಭಾಗ ಮಲತಾಯಿ ಧೋರಣೆಯನ್ನು ಅನುಭವಿಸುತ್ತಿದೆ ನಾವು ದ್ವಿತೀಯ ದರ್ಜೆಯ ಪ್ರಜೆಗಳಾಗಿದ್ದೇವೆ ಈ ಅಸಮಾನತೆಯನ್ನು ನಿವಾರಿಸಲು ಕೆಕೆಆರ್ಡಿಬಿ ಅಸ್ತಿತ್ವಕ್ಕೆ ಬಂದಿದೆ ಅಧ್ಯಕ್ಷರು ಈ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಬೇಕೆಂದು ಈ ಮೂಲಕ ವಿನಂಬರವಾಗಿ ಪ್ರಾರ್ಥಿಸಿ ಕೊಳ್ಳುತ್ತೇನೆ ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



