ಪತ್ರಿಕೋದ್ಯಮ

ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.) ವತಿಯಿಂದ ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನ – 6.7.24 ಶನಿವಾರ, ನಯನ ರಂಗಮಂದಿರ

ವಿಷಯ : ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.) ವತಿಯಿಂದ ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನ – 6.7.24 ಶನಿವಾರ, ನಯನ ರಂಗಮಂದಿರ

ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.) ವತಿಯಿಂದ ಶ್ರೀ ಕೃಷ್ಣ ಆಲನಹಳ್ಳಿಯವರ ಜನಪ್ರಿಯ ಕಾದಂಬರಿ ಆಧಾರಿತ ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಜುಲೈ 6, 2024 ಶನಿವಾರ ಸಂಜೆ 5.30ಕ್ಕೆ
ನಯನ ಸಭಾಂಗಣದಲ್ಲಿ ಈ ನಾಟಕ ಪ್ರದರ್ಶನ ಕಾಣಲಿದೆ.

ಡಾ. ಎಂ. ಬೈರೇಗೌಡ ಅವರು ಪರಸಂಗದ ಗೆಂಡೆತಿಮ್ಮ ಕಾದಂಬರಿಗೆ ರಂಗರೂಪ ನೀಡಿದ್ದಾರೆ. ಕೆ.ಎಸ್.ಡಿ.ಎಲ್. ಚಂದ್ರು ನಾಟಕ ನಿರ್ದೇಶಿಸಿದ್ದಾರೆ. ದೇಸೀ ಮೋಹನ್ ಸಂಗೀತ‌ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಜಾನಪದ ಜೀವಸ್ವರ ಅಪ್ಪಗೆರೆ ತಿಮ್ಮರಾಜು ಚಿತ್ರ ನಿರ್ದೇಶಕ, ನಿರ್ಮಾಪಕ ಪಲ್ಲಕ್ಕಿ ರಾಧಾಕೃಷ್ಣ, ಸ್ಯಾಕ್ಸಾಫೋನ್ ವಾದಕಿ ಸುಬ್ಬಲಕ್ಷ್ಮಿ ಅವರಿಗೆ ರಂಗಗೌರವ ನೀಡಲಾಗುತ್ತದೆ. ಪತ್ರಕರ್ತ ಜಿ.ನಾಗರಾಜ ಗಾಣದಹುಣಿಸೆ ಮತ್ತು ಸಮಾಜ ಸೇವಕ ಸಿ.ಜೆ.ಮಾರುತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

ಸಂಸ್ಥೆಯ ಅಧ್ಯಕ್ಷ ಜಿ. ಪಿ. ರಾಮಣ್ಣ ಸ್ವಾಗತ ನುಡಿಗಳನ್ನಾಡುವರು. ಎಸ್.ಸುಧಾಕರ್ ಕಾರ್ಯಕ್ರಮ ಪ್ರಸ್ತುತಪಡಿಸುವರು. ಏಣಗಿ‌ ಪ್ರಭಾಕರ್, ಜಿ.ಮಧುಸೂದನ ನಾಯಕ ಕಾರ್ಯಕ್ರಮ ನಿರ್ವಹಿಸುವರು.

ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಇಲ್ಲಿ ಇರಿಸಲಾಗಿದೆ.
……

ತಾವು ದಯಮಾಡಿ ಈ ಕಾರ್ಯಕ್ರಮಕ್ಕೆ ನಿಮ್ಮ ಮಾಧ್ಯಮದ ವರದಿಗಾರರನ್ನು/ ಛಾಯಾಗ್ರಾಹಕರನ್ನು ಕಳಿಸಿ ಉಪಕರಿಸಬೇಕೆಂದು ಕೋರುತ್ತೇನೆ.

ನಿಮ್ಮ ವಿಶ್ವಾಸಿ

ಜಿ ಪಿ ರಾಮಣ್ಣ
ಅಧ್ಯಕ್ಷ
ಪರಂಪರಾ ಕಲ್ಚರಲ್ ಫೌಂಡೇಶನ್
ಬಿಟಿಎಂ ಬಡಾವಣೆ
ಬೆಂಗಳೂರು
9448202708

Related Articles

Leave a Reply

Your email address will not be published. Required fields are marked *

Back to top button