ಸಿಂಧನೂರು..ತುರವಿಹಾಳ ಠಾಣೆಯಲ್ಲಿ ಮೊಹರಂ ಹಬ್ಬದ ಶಾಂತಿ ಸಭೆ
ತುರವಿಹಾಳ ಠಾಣೆಯಲ್ಲಿ ಮೊಹರಂ ಹಬ್ಬದ ಶಾಂತಿ ಸಭೆ
ಶಾಂತಿ ಮತ್ತು ಸೌಹರ್ದತೆಯಿಂದ ಹಬ್ಬವನ್ನು ಆಚರಿಸಿ ಪಿ ಎಸ್ ಐ. ಸುಜಾತ ಡಿ ಎನ್
ತುರುವಿಹಾಳ: ಯಾವುದೇ ಸಮಾಜದ ಹಬ್ಬಗಳಿರಲಿ ಎಲ್ಲರೂ ಜೊತೆಗೂಡಿ ಸಹೋದರರಂತೆ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಠಾಣಾಧಿಕಾರಿ ಸುಜಾತ. ಡಿ.ಎನ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಇಂದು ಮೊರಂ ಹಬ್ಬದ ನಿಮಿತ್ಯ ಶಾಂತಿ ಸಭೆಯಲ್ಲಿ ಅವರು ಮಾತನಾಡಿ ಜನರು ಶಾಂತಿ ಪ್ರಿಯರು ಆದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ಕೊಡದಂತೆ ಮುನ್ನೆಚ್ಚರಿಕೆವಹಿಸಬೇಕು ಶಾಂತಿಸುವಾಗಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಹಕಾರ ಅಗತ್ಯ.
ನಂತರ ಪಟ್ಟಣ ಪಂಚಾಯತ್ ಸದಸ್ಯ ಬಾಪುಗೌಡ ದೇವರಮನಿ ಮಾತನಾಡಿ. ಮೊಹರಂ ಅಬ್ಬ ಇರುವುದರಿಂದ ಪಟ್ಟಣ ಪಂಚಾಯಿತಿಯಿಂದ ಸ್ವಚ್ಛತೆ ಮಾಡಿಸಿ ಕತ್ತಲ ರಾತ್ರಿ ಹಾಗೂ ದಪನ್ ದಿನದಂದು ಮೊಹರಂ ಹಬ್ಬ ಸರ್ವಜನಾಂಗದವರು ಸೇರಿಕೊಂಡು ಆಚರಣೆ ಮಾಡುತ್ತೇವೆ ಎಂದು ಹೇಳಿದರು .ಪೊಲೀಸ್ ಬಂದೋಬಸ್ತ್ ಒದಗಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸರ್ವ ಜನಾಂಗದ ಹಿರಿಯ ಮುಖಂಡರು ಹಾಗೂ ಯುವಕರು ಪತ್ರಕರ್ತರು ಪೊಲೀಸ್ ಇಲಾಖೆ ಸಿಬ್ಬಂದಿಗಳು ಇದ್ದರು.
ವರದಿ: ವಿಜಯ್ ಕುಮಾರ್ ಹಿರೇಮಠ್ ತುರುವಿಹಾಳ




