ಕರ್ನಾಟಕ ವಾಲ್ಮೀಕಿ ನಾಯಕ ಮಹಾವೇದಿಕೆಯ ರಾಜ್ಯ ಅಧ್ಯಕ್ಷರಾದ ರಾಜಣ್ಣ ಲಕ್ಷ್ಮಿಸಾಗರ ಚಿತ್ರದುರ್ಗ ಪ್ರತಿಭಟನೆ.
ದಿನಾಂಕ 19/7/2024, ರಂದು ಬೆಂಗಳೂರು ವಿಧಾನಸಭಾ ಮುತ್ತಿನ ಹಾಕಲಾಯಿತು ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿ ಹೊಡೆದ ಸರಕಾರದ ವಿರುದ್ಧ ಹಾಗೂ ಅಧಿಕಾರಿಗಳ ವಿರುದ್ಧ ಇಂದು ಬೆಂಗಳೂರಿನಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾವೇದಿಕೆಯ ರಾಜ್ಯ ಅಧ್ಯಕ್ಷರಾದ ರಾಜಣ್ಣ ಲಕ್ಷ್ಮಿಸಾಗರ ಚಿತ್ರದುರ್ಗ ಹಾಗೂ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ರಾಜ್ಯ ಅಧ್ಯಕ್ಷರಾದ ತುಳಸಿ ರಾಮ್ ಬೆಂಗಳೂರು
ಹಾಗೂ ರಾಜ್ಯಾಧ್ಯಕ್ಷರು ಪದಾಧಿಕಾರಿಗಳು ಜಿಲ್ಲಾಧ್ಯಕ್ಷರು ವಿಧಾನಸಭಾ ಮುತ್ತಿಗೆ ಹಾಕಲು ಪ್ರಯತ್ನಿಸಿದ ವಾಲ್ಮೀಕಿ ಸಂಘಟನೆ ಹೋರಾಟಗಾರರನ್ನು ಪೊಲೀಸರು ಕೆಲಕಾಲ ಅವರ ವಾಹನದಲ್ಲಿ ತಡೆಹಿಡಿಯಲಾಯಿತು,
ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ ಎಸ್ಸಿ ಎಸ್ಟಿ ಹಣವನ್ನು ಇಂದು ಸರ್ಕಾರ ತಮ್ಮ ಗ್ಯಾರಂಟಿಗೆ ಬಳಸಿಕೊಂಡಿತ್ತು ಅದಲ್ಲದೆ ವಾಲ್ಮೀಕಿ ನಿಗಮದಿಂದ 187 ಕೋಟಿ ನುಂಗಿ ನೀರು ಕುಡಿದಿರುವ ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಕಠಿಣ ಶಿಕ್ಷೆವಾಗಬೇಕು ಇವರು ಮಾಡಿರುವ ಮೋಸದಿಂದ ಎಷ್ಟೋ ಬಡ ಮಕ್ಕಳ ಸ್ಕಾಲರ್ಶಿಪ್ಪು ಬಂದಿರುವುದಿಲ್ಲ ಹಾಗೂ ಬಡ ರೈತರಿಗೆ ಗಂಗಾ ಕಲ್ಯಾಣ ಯೋಜನೆ ಬಂದಿರುವುದಿಲ್ಲ ಬಡ ಕೂಲಿ ಕಾರ್ಮಿಕರಿಗೆ ನಿಗಮದಿಂದ ಯಾವುದೇ ಸವಲತ್ತು ಸಿಗದಿದ್ದರಿಂದ ಲೂಟಿಕೋರರಿಗೆ ಭ್ರಷ್ಟರಿಗೆ ಇಡೀ ಶಾಪವಾಗುತ್ತಿದ್ದಾರೆ ಮುಂದಿನ ದಿನಗಳಲ್ಲಿ ಯಾವುದೇ ನಿಗಮದಲ್ಲಿ ಉಂಟಾಗಣಗಳನ್ನು ಆಗದಂತೆ ಸರಕಾರ ಎಚ್ಚರಿಕೆ ವಹಿಸಬೇಕು ಹಾಗೂ ಹಗರಣದಲ್ಲಿ ಭಾಗಿಯಾಗಿರುವ ಕಠಿಣ ಕ್ರಮ ಜರುಗಿಸಿ ಕಠಿಣ ಶಿಕ್ಷಣವಾಗಬೇಕೆಂದು ಹಾಗೂ ಇಂಥವರ ಮೇಲೆ ಕಠಿಣ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ,
ಜಿ ಜೆ ಬೋಗಿ ಬೈಲಕುಂಟಿ



