ಸುದ್ಧಿ

ತುರವಿಹಾಳ ಪಟ್ಟಣದಲ್ಲಿ ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ.

ತುರವಿಹಾಳ ಪಟ್ಟಣದಲ್ಲಿ ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ಸಿಂಧನೂರು:ತಾಲೂಕಿನ ತುರುವಿಹಾಳ ಪಟ್ಟಣದಲ್ಲಿ ಮಸ್ಕಿ ಶಾಸಕ ಆರ್. ಬಸನಗೌಡ ತುರುವಿಹಾಳ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಿದರು.
2023-24ನೇ ಸಾಲಿನ ಕೆ ಕೆ ಆರ್ ಡಿ ಬಿ ಮೈಕ್ರೋ ಯೋಜನೆಯ 76ಲಕ್ಷದ 47ಸಾವಿರ ರೂಪಾಯಿಗಳ ಪಟ್ಟಣದ ವಾರ್ಡ್ ನಂಬರ್ 11ರಲ್ಲಿ ಕಳಕಪ್ಪ ಮಿಲಿಟರಿ (ಮೈಲಾಪುರ ರಸ್ತೆ) ಇಂದ ಈರಪ್ಪ ವಕ್ರಾಣಿ ನಾಯಕ್ ಮನೆ ವರೆಗೆ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮತ್ತು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಿಂಧನೂರ್ ಅಡಿಯಲ್ಲಿ 2 ಕೋಟಿ 50 ಲಕ್ಷ ರೂಗಳ ಸಿಸಿ ರಸ್ತೆ ಚರಂಡಿ.ವಿದ್ಯುತ್ ದೀಪ ಹೈಟೆಕ್ ಶೌಚಾಲಯ
ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿಗಳು ಮಾಡಿ ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಿ ಎ.ಪಿ.ಎಂಸಿಯಲ್ಲಿ ಬೃಹತ್ ವಾಹನಗಳು ಓಡಾಡುತ್ತವೆ ಆದ್ದರಿಂದ ಕಾಮಗಾರಿ ಕಳಪೆಯಾಗದಂತೆ ನೋಡಿಕೊಳ್ಳಿ ಎಂದು ಗುತ್ತೇದಾರರಿಗೆ, ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಮಲ್ಲನಗೌಡ ದೇವರಮನಿ, ಫಾರೂಕ್ ಸಾಬ್ ಖಾಜಿ, ಮೌಲಪ್ಪಯ್ಯ ಗುತ್ತೇದಾರ್, ಉಮರ್ ಸಾಬ್, ಶಾಮಿದ್ ಸಾಬ್ ಚೌದರಿ , ಬಾಪುಗೌಡ ದೇವರಮನಿ, ಅಬುತ್ ತುರಾಬ್, ಶಿವನಗೌಡ ರಾಗಲಪರ್ವಿ, ಬಸವರಾಜ್ ಗುಂಜಳ್ಳಿ ಶರಣಪ್ಪ ಹೊಸಗೌಡ್ರು, ಯಲ್ಲಪ್ಪ ಭೋವಿ ಶಂಕರಗೌಡ ದೇವರಮನಿ,ಶಾಮಿದ್ ಸಾಬ್ ಅರಬ್, ಶರಣಬಸವ ಹಳ್ಳಿ, ಮರಿಯಪ್ಪ ನಾಮದ್,ಅರವಿಂದ ರೆಡ್ಡಿ ಫಕೀರಪ್ಪ ಭಂಗಿ, ಮಹಾಂತೇಶ್ ಗಾಣಿಗೇರ್, ರಾಮಣ್ಣ ರಾಗಲಪರ್ವಿ, ಶರಣಪ್ಪ ಉದ್ಘಾಳ್ ಭಾಗವಹಿಸಿದ್ದರು

ವರದಿಗಾರರು – ವಿಜಯ್ ಕುಮಾರ್ ಹಿರೇಮಠ ತುರುವಿಹಾಳ

.

Related Articles

Leave a Reply

Your email address will not be published. Required fields are marked *

Back to top button