ಲೈಸೆನ್ಸ್ ಇಲ್ಲದೇ ವ್ಯಾಪಾರ ವಹಿವಾಟು ಅಪರಾಧ; ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ರಾಯಚೂರು,(ಕರ್ನಾಟಕ ವಾರ್ತೆ)
ಲೈಸೆನ್ಸ್ ಇಲ್ಲದೇ ವ್ಯಾಪಾರ ವಹಿವಾಟು ಅಪರಾಧ; ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ
ರಾಯಚೂರು,ಆ.08,(ಕರ್ನಾಟಕ ವಾರ್ತೆ):- ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ಪ್ರಕರಣ 256ರ ಪ್ರಕಾರ ಯಾವುದೇ ವ್ಯಕ್ತಿಯು ಮುನ್ಸಿಪಲ್ ಕಮಿಷನರ್ ಅಥವಾ ಚೀಪ್ ಆಫೀಸರನು ಮಂಜೂರು ಮಾಡಿದ ಲೈಸೆನ್ಸ್ ಇಲ್ಲದೇ ಅಥವಾ ಅದರ ನಿಬಂಧನೆಗಳಿಗೆ ಅನುಗುಣವಾಗಿ ಯಾವುದೇ ವ್ಯಾಪಾರವನ್ನು ಮಾಡತಕ್ಕದ್ದಲ್ಲ. ಒಂದು ವೇಳೆ ಮುನ್ಸಿಪಲ್ ಕೌನ್ಸಿಲ್ನ ಪರವಾನಿಗೆ ಇಲ್ಲದೇ ವ್ಯಾಪಾರ ಮಾಡಿದ್ದಲ್ಲಿ ಅಂತವರ ವಿರುದ್ದ ದಂಡ ವಿಧಿಸಿ, ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕರ್ನಾಟಕ ಮುನ್ಸಿಪಲ್ ಕಾಯ್ದೆ ಅವಕಾಶ ಕಲ್ಪಿಸಿದೆ ಎಂದು ರಾಯಚೂರು ನಗರಸಭೆಯ ಪೌರಾಯುಕ್ತರಾದ ಗುರುಸಿದ್ದಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ರಾಯಚೂರು ನಗರದ ಎಲ್ಲಾ ವಹಿವಾಟು ಉದ್ಯಮಿಗಳು ತಾವು ಮಾಡುತ್ತಿರುವ ವ್ಯಾಪಾರದ ಅಂಗಡಿಗಳ ಕಡ್ಡಾಯವಾಗಿ ಲೈಸೆನ್ಸ್ನ್ನು ಪಡೆಯಬೇಕು. ತಪ್ಪಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ 257ನೇ ಪ್ರಕರಣದಡಿ ತಮ್ಮ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.
ನಗರಸಭೆಯಿಂದ ಉದ್ಯಮಿ ಲೈಸೆನ್ಸ್ ಪಡೆಯದೇ ವ್ಯಾಪಾರ ನಿರ್ವಹಿಸುವುದು ಅಕ್ಷಮ್ಯ ಅಪರಾಧವಾಗಿದ್ದು, ಉದ್ಯಮಿದಾರರು ಉದ್ಯಮಿ ಪ್ರಾರಂಭಿಸಿದ ದಿನಾಂಕದಿAದ ಚಾಲ್ತಿ ಹಣಕಾಸು ವರ್ಷದವರೆಗೆ ಕಡ್ಡಾಯವಾಗಿ ಉದ್ಯಮೆ ಪರವಾನಿಗೆಯನ್ನು ಪಡೆಯತಕ್ಕದ್ದು ಉದ್ಯಮೆ ಪರವಾನಿಗೆಯನ್ನು ಪಡೆಯಲು ನಗರಸಭೆಯಲ್ಲಿ ವಿಶೇಷ ಕೌಂಟರನ್ನು ತೆರೆಯಲಾಗಿದ್ದು, ಎಲ್ಲಾ ವ್ಯಾಪಾರ ವಹಿವಾಟುಗಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಒಂದು ವೇಳೆ 15 ದಿನಗಳ ಒಳಗಾಗಿ ಉದ್ದಿಮೆ ಪರವಾನಿಗೆ ಪಡೆಯದೇ ವ್ಯಾಪಾರ ವಹಿವಾಟು ಮಾಡಿದ್ದು, ಕಂಡುಬAದಲ್ಲಿ ತಮ್ಮ ವಿರುದ್ಧ ಕಾನೂನು ಕ್ರಮವಹಿಸಲಾಗುವುದಲ್ಲದೆ ತಮ್ಮ ವ್ಯಾಪಾರ ವಹಿವಾಟನ್ನು ಕರ್ನಾಟಕ ಮುನ್ಸಿಪಲ್ ಕಾಯ್ದೆ-257ರ ಪ್ರಕಾರ ಬೀಗ ಹಾಕಿ ಸ್ಥಗಿತ ಮಾಡಲಾಗುವುದು. ರಾಯಚೂರು ನಗರದ ವಹಿವಾಟು ಮಿತ್ರರು ಕಡ್ಡಾಯವಾಗಿ ನಗರಸಭೆಗೆ ಬಂದು ವ್ಯಾಪಾರ ಪರವಾನಿಗೆಯನ್ನು ಪಡೆಯಬೇಕು.
ತೆರಿಗೆ ಪಾವತಿಸಿ ಇಲ್ಲದಿದ್ದಲ್ಲಿ ಅಂಗಡಿಗಳಿಗೆ ಬೀಗ ಜಡಿಯಲಾಗುವುದು: ರಾಯಚೂರು ನಗರದ ಎಲ್ಲಾ ಸಾರ್ವಜನಿಕರು ಅಥವಾ ಉದ್ಯಮಿದಾರರು ತಮ್ಮ ಆಸ್ತಿಗಳಿಗೆ ಕಡ್ಡಾಯವಾಗಿ ತೆರಿಗೆ ಪಾವತಿಸಿ ನೀರಿನ ಕರ, ಜಾಹಿರಾತು ಕರವನ್ನು ಪಾವತಿಸಬೇಕು. ಒಂದು ವೇಳೆ ಯಾವುದೇ ಉದ್ಯಮಿದಾರರು ಸಾರ್ವಜನಿಕರು ಅಥವಾ ಉದ್ಯಮೆದಾರರು ತೆರಿಗೆ ಪಾವತಿಸದಿದ್ದಲ್ಲಿ ಅಂಥವರ ವಹಿವಾಟುಗಳನ್ನು ನಿರ್ಬಂಧಿಸಿ, ಅಂಗಡಿಗಳಿಗೆ ಬೀಗ ಹಾಕಲಾಗುವುದು. ತೆರಿಗೆಯನ್ನು ಪಾವತಿಸಿ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸಹಕರಿಸಬೇಕು. ತೆರಿಗೆ ಪಾವತಿಸದೇ ಇದ್ದಲ್ಲಿ ಅಂತವರನ್ನು ಸುಸ್ತಿದಾರರು ಎಂದು ಪರಿಗಣಿಸಿ ಅಂತವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.
ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಪಿಓಪಿ ಗಣಪತಿ ಮೂರ್ತಿಗಳ ನಿಷೇಧ; ನಗರದ ಎಲ್ಲಾ ಉದ್ಯಮೆದಾರರು ರಾಯಚೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮತ್ತು ಪಿ.ಓ.ಪಿಗಳಿಂದ ಹಾಗೂ ಆಯಿಲ್ ಪೇಂಟಿAಗ್ಳಿAದ ತಯಾರಿಸಿದ ಗಣಪತಿ ಮೂರ್ತಿಗಳ ಉತ್ಪಾದನೆ, ಸಾಗಾಟ, ಮಾರಾಟ ಹಾಗೂ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಒಂದು ವೇಳೆ ಯಾವುದೇ ಉದ್ಯಮೆದಾರರು ಏಕಬಳಕೆ ಪ್ಲಾಸ್ಟಿಕನ್ನು ಉಪಯೋಗ ಮಾಡುತ್ತಿರುವುದು ಕಂಡುಬAದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ವಹಿಸುವುದಲ್ಲದೇ 25,000/- ದಿಂದ 2,50,000/-ರೂ.ಗಳ ವರೆಗೆ ದಂಡ ವಿಧಿಸಲಾಗುವುದು.
ಎಲ್ಲಾ ಉದ್ಯಮ ಮಿತ್ರರು ಕಡ್ಡಾಯವಾಗಿ ಏಕಬಳಕೆ ಪ್ಲಾಸ್ಟಿಕ್ ಅನ್ನು ಬಳಸುವುದು ಮಾರಾಟ ಮಾಡುವುದು ಸಾಗಾಟ ಮಾಡುವುದು ಹಾಗೂ ಬಳಕೆಗೆ ಉತ್ತೇಜಿಸುವುದನ್ನು ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ ನಿರ್ಬಂಧಿಸಿದೆ. ಯಾವುದೇ ಕಾರಣಕ್ಕೂ ಬಳಕೆ ಪ್ಲಾಸ್ಟಿಕ್ ಪಿ.ಓ.ಪಿ. ಹಾಗೂ ಆಯಿಲ್ ಪೇಂಟ್ ಗಳಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಉತ್ಪಾದನೆ, ಸಾಗಾಟ, ಮಾರಾಟ ಹಾಗೂ ಪ್ರಚಾರ ಮಾಡುವುದು ಕಂಡಬದಲ್ಲಿ ಅಂಥವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.
ರಸ್ತೆಗಳ ಮೇಲೆ ಬೀಡಾಡಿ ದನಗಳ ನಿಯಂತ್ರಣ: ನಗರದ ಮುಖ್ಯ ರಸ್ತೆಗಳ ಮೇಲೆ ಕೆಲವು ಸಾಕು ದನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿ, ಅಪಘಾತಗಳು ಸಂಭವಿಸುತ್ತಿರುವುದು. ನಗರಸಭೆಯ ಗಮನಕ್ಕೆ ಬಂದಿದ್ದು, ಈಗಾಗಲೇ ಹಲವಾರು ಬಾರಿ ಬಿಡಾಡಿ ದನಗಳನ್ನು ನಿಯಂತ್ರಿಸಲು ನಗರಸಭೆ ಪ್ರಯತ್ನಿಸಿ, ಸಂಬAಧಪಟ್ಟವರಿಗೆ ದಂಡ ವಿಧಿಸಿದೆ ಹಾಗಾಗಿಯೂ ಕೂಡ ಬಿಡಾಡಿ ದನಗಳು ನಗರದ ರಸ್ತೆಗಳು ಅಥವಾ ಇಕ್ಕೆಲಗಳಲ್ಲಿ ಸಂಚರಿಸುವುದು ಕಂಡುಬAದಿದೆ. ಕೂಡಲೇ ಜಾನುವಾರು ಮಾಲೀಕರು ಅವುಗಳನ್ನು ಕಟ್ಟಿ ಹಾಕಲು ಸೂಚಿಸಿದೆ. ತಪ್ಪಿದ್ದಲ್ಲಿ ಅವುಗಳನ್ನು ಬಿಡಾಡಿ ದನಗಳು ಎಂದು ಪರಿಗಣಿಸಿ ದಂಡ ವಿಧಿಸುವುದಲ್ಲದೆ ದನಗಳ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿ ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಾಣಿಕೆ ಮಾಡಲಾಗುವುದು.
ನಿವೇಶನಗಳಲ್ಲಿ ಸ್ವಚ್ಚತೆ ಕಾಪಾಡುವುದು; ನಗರದಲ್ಲಿ ಯಥೇಚ್ಛವಾಗಿ ಖಾಲಿ ನಿವೇಶನಗಳಿದ್ದು, ಖಾಲಿ ನಿವೇಶನಗಳು ಅಸ್ವಚ್ಛತೆಯಿಂದ ಕೂಡಿರುತ್ತವೆ. ಹಾಗಾಗಿ ನಿವೇಶನದ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಒಂದು ವೇಳೆ ಅಸ್ವಚ್ಚತೆಯಿಂದ ಕೂಡಿದ್ದಲ್ಲಿ ಅದರಿಂದಾಗುವ ಅನಾಹುತಗಳಿಗೆ ನಿವೇಶನದ ಮಾಲೀಕರನ್ನು ಹೊಣೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು.
ನಿವೇಶನದ ಮಾಲೀಕರು ತಮ್ಮ ನಿವೇಶನಗಳಲ್ಲಿ ಬೆಳೆದ ಕಸ, ಕಡ್ಡಿ, ಜಾಲಿ ಇನ್ನಿತರ ಅನುಪಯೋಗಿ ವಸ್ತುಗಳನ್ನು ತಾವೇ ತಮ್ಮ ಸ್ವಂತ ಖರ್ಚಿನಿಂದ ಸ್ವಚ್ಛತೆಗೊಳಿಸಿ ಸ್ವಚ್ಛತೆಯನ್ನು ಕಾಪಾಡಬೇಕು. ತಪ್ಪಿದ್ದಲ್ಲಿ ನಿವೇಶನಗಳನ್ನು ನಗರಸಭೆಯ ವಶಕ್ಕೆ ಪಡೆದು ಸ್ವಚ್ಛತೆಗೊಳಿಸಿ ಅಂತವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.
ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತರೆವುಗೊಳಿಸಿ; ನಗರದ ಮುಖ್ಯ ರಸ್ತೆಗಳಾದ ಲಿಂಗಸೂಗುರು ರೋಡ್, ಗಂಜ್ ರಸ್ತೆ, ಚಂದ್ರ ಮೌಳೇಶ್ವರ ರಸ್ತೆ, ಕಿರಾಣಿ ಬಜಾರ್, ಪಾಟೀಲ್ ರೋಡ್, ಬಸ್ ಸ್ಟಾö್ಯಂಡ್ ರೋಡ್, ಟಿಪ್ಪು ಸುಲ್ತಾನ ರೋಡ್ ಹಾಗೂ ಹಲವಾರು ಕಡೆ ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಪುಟ್ ಪಾತನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡುವುದು ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ.
ಸಂಬAಧಿಸಿದ ಪುಟ್ಪಾತ್ ಮೇಲೆ ವ್ಯಾಪಾರ ವಹಿವಾಟು ಮಾಡುವವರು ಕೂಡಲೇ ತಮ್ಮ ಅಂಗಡಿಗಳನ್ನು ತೆರವುಗೊಳಿಸಿಬೇಕು. ಒಂದು ವೇಳೆ ಪುಟ್ಪಾತ ಮೇಲೆ ವ್ಯಾಪಾರ ಮಾಡುತ್ತಿದ್ದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂದು ರಾಯಚೂರು ನಗರಸಭೆಯ ಪೌರಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



