ನೆಟ್ಟ ಸಸಿಗಳೆಲ್ಲಾ ಮರವಾದರೆ. ನೆರಳಿಗೆಲ್ಲಿದೆ ಕೊರತೆ. ಕಂಡ ಕನಸುಗಳೆಲ್ಲ……ಯ ಎ.ಮೈಕಲ್ ಕೆನಿತ್ ಶಿವಮೊಗ್ಗ
ನಾವು ಜೀವನದಲ್ಲಿ ಅಭಿವೃದ್ಧಿ ಹೊಂದಬೇಕಾದರೆ ನಾವು ಸಂಪಾದಿಸಿದ ಹಣವನ್ನು ನಮ್ಮ ಅವಶ್ಯಕತೆಗೆ ತಕ್ಕಂತೆಯೇ ಬಳಸಬೇಕು. ಅದೇ ರೀತಿ ಸಮಾಜದಲ್ಲಿ ಗೌರವವನ್ನು ಸಂಪಾದಿಸಬೇಕಾದರೆ ನಾವು ಸರಿಯಾಗಿ ಯೋಚಿಸಿ ವಿವೇಚಿಸಿ ತೂಕದ ಮಾತುಗಳನ್ನು ಆಡಬೇಕು.
ಹಣವು ಅನೀತಿಯನ್ನು ತರಬಹುದು ಮಾತುಗಳು ದುರ್ನೀತಿಯನ್ನು ತರಬಹುದು. ಹಣ ಮತ್ತು ಮಾತುಗಳ ಹಿಡಿತವು ಜೀವನದಲ್ಲಿ ‘ಪರಿಣಿತಿ’ಯನ್ನು ತಂದುಕೊಡುತ್ತದೆ.
ನಾವು ಇಷ್ಟ ಪಡುವ ಮನಸ್ಸನ್ನು ಕೋಪದಲ್ಲಿ ನೋವು ಮಾಡಿಬಿಡುತ್ತೇವೆ. ಆದರೆ ಅವರಿಗಿಂತ ಎರಡು ಪಟ್ಟು ನಾವೇ ನೋವುಗಳನ್ನು ಪಡುತ್ತೇವೆ. “ಇದು ನಿಜವಾದ ಪ್ರೀತಿ”. ಮನುಷ್ಯನಾಗಿ ಹುಟ್ಟುವುದು ಆ ದೈವೇಚ್ಛೆ ಆದರೆ ಮಾನವೀಯತೆಯ ಸಾರವನ್ನು ಉಳಿಸಿಕೊಳ್ಳುವುದು ಮಾನವನ ಇಚ್ಛೆ. ಮನಸ್ಸುಗಳಿಗೆ ಮಿಡಿಯುವ ಹೃದಯಗಳಿಗೆಂದೂ ಬೆಲೆ ಇದ್ದೇ ಇರುತ್ತದೆ. ಅಂತಹ ಹೃದಯಗಳಲ್ಲಿ ಶಾಶ್ವತವಾಗಿರುತ್ತದೆ ನಮ್ಮಯ ಪ್ರೀತಿಯ ನೆಲೆ. ಬದುಕೊಣ ಬದುಕಲು ಬಿಡೋಣ ಪ್ರೀತಿಗಳ ಬೇರು ಆಳಕ್ಕಿಳಿದಷ್ಟೂ ಸಂಭಂಧಗಳ ಸ್ನೇಹಗಳ ಬಾಂಧವ್ಯಗಳ ಹೂವುಗಳು ಅರಳಿ ಅವುಗಳಿಂದ ಫಲ ನೀಡುತ್ತದೆ ಆ ಮರಗಳು ಸದಾ ನಿಮ್ಮೆಡೆಗೆ ಬಾಗುತ್ತದೆ. ನೀವು ಒಳಿತು ಕೆಡುಕು ಯಾವುದನ್ನೂ ನೆಟ್ಟರೂ ಅದರ ಪ್ರತಿಫಲ ಹತ್ತು ನೂರರಷ್ಟು ನಿಮಗೇ ಸಿಗುತ್ತದೆ. ಬಿತ್ತುವ ಮುನ್ನ ಯೋಚಿಸಿದರೆ ಚೆನ್ನ ಅಲ್ಲವೇ…
“ಶುಭಃ-ಮುಂಜಾನೆಯ ಶುಭಾಶಯಗಳು……….. ಆತ್ಮೀಯರೇ ನೆಟ್ಟ ಸಸಿಗಳೆಲ್ಲಾ ಮರವಾದರೆ. ನೆರಳಿಗೆಲ್ಲಿದೆ ಕೊರತೆ. ಕಂಡ ಕನಸುಗಳೆಲ್ಲ ನನಸಾದರೆ ಬದುಕಿಗೆಲ್ಲಿದೆ ಅಳತೆ. ಪ್ರಕೃತಿಯಲ್ಲಿ ನಾವು ನೀವು ಕಂಡದ್ದೆಲ್ಲವೂ ಪ್ರೀತಿಯ ಕೊಡುಗೆಗಳೇ. ನಾವುಗಳು ಯಾವುದನ್ನಾದರೂ ಒಂದನ್ನು ಉದಾಹರಣೆಗೆ ತೆಗೆದುಕೊಂಡರೂ ಅವುಗಳೇ ತಮ್ಮ ಅಸ್ತಿತ್ವದ ಬಗ್ಗೆ ಉತ್ತರ ಹೇಳುವುವು. ಬದುಕನ್ನು ಪ್ರೀತಿಸಿ ಬಯಸುವ ಹೃದಯಗಳಲ್ಲಿ ಹೂವಾಗಿಸಿ ಎಲ್ಲರಲ್ಲಿಯೂ ಒಂದಾಗಿಸಿ. ಜೀವನ ಸದಾ ಸಂತೋಷದಿಂದ ಆನಂದಿಸಿ. ಯಾರಿಗೆ ಗೊತ್ತು ನಾಳೆಯೇ ನಾವು ಈ ಪ್ರಪಂಚವನ್ನು ಬಿಡಬಹುದು ಅಲ್ಲವೇ…”
ಎ.ಮೈಕಲ್ ಕೆನಿತ್ ಶಿವಮೊಗ್ಗ..✍



