ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ರಮೇಶ ಕತ್ತಿ ಅವರು ಇಂದು ಖಾನಾಪುರಕ್ಕೆ ಬರುತ್ತಿದ್ದಾರೆ ಸ್ವಾಗತ, ಆದರೆ…
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ರಮೇಶ ಕತ್ತಿ ಅವರು ಇಂದು ಖಾನಾಪುರಕ್ಕೆ ಬರುತ್ತಿದ್ದಾರೆ ಸ್ವಾಗತ, ಆದರೆ….
ಕತ್ತಿ ಸರ್ ನೀವು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹಲವು ವರ್ಷಗಳಿಂದ ಇದ್ದೀರಿ, ಒಳ್ಳೆಯ ವಿಷಯ ಆದರೆ ಖಾನಾಪುರ ತಾಲೂಕಿನ ಯುವಕ ಯುವತಿಯರಿಗೆ ಒಬ್ಬರಿಗೂ ಉದ್ಯೋಗ ನೀಡುತ್ತಿಲ್ಲ ಯಾಕೆ..? ಕಾರಣವೇನು? ಡಿಸಿಸಿ ಬ್ಯಾಂಕ್ ನಮ್ಮ ಖಾನಾಪುರ ಮಕ್ಕಳ ತಪ್ಪಾದರೂ ಏನು ವಿರೋಧ ಏಕೆ? ಖಾನಾಪುರ ತಾಲೂಕಿನ ಯುವಕರಿಗೆ ನೀಡಬೇಕಾಗಿದ್ದ ಕೆಲಸಗಳನ್ನು ಬೇರೆ ತಾಲೂಕುಗಳಿಗೆ ಕೊಡುತ್ತೀದ್ದಿರಾ..? ನೀವು ಅಥವಾ ನಿಮ್ಮ ಡಿಸಿಸಿ ಬ್ಯಾಂಕ್ ಖಾನಾಪುರದ ನಮ್ಮ ಯುವಕರನ್ನು ಏಕೆ ದ್ವೇಷಿಸುತ್ತೀರಿ? ಖಾನಾಪುರ ತಾಲೂಕಿನ ಯುವಕರು ಕಠಿಣವಾದ ಪರಿಕ್ಷೆ ಗಳಲ್ಲಿ ಅಂದರೆ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ, ಕೆಪಿಎಸ್ಸಿ ಯುಪಿಎಸ್ಸಿ ಪಾಸ್ ಆಗುತ್ತಾರೆ ಆದರೆ ಒಬ್ಬರೇ ಒಬ್ಬರು ಬೆಳಗಾವಿ ಡಿಸಿಸಿ ಬ್ಯಾಂಕ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲಿಲ್ಲವೇ? ನಿಮ್ಮ ಪರೀಕ್ಷೆಯು ತುಂಬಾ ಕಷ್ಟಕರವಾಗಿದೆಯೇ ಅಥವಾ ಅದು ಅಸ್ಪಷ್ಟವಾಗಿದೆಯೇ?
ತಾಲೂಕಿನ ಕೆಲ ರೈತರಿಗೆ ಪತ್ತ ನೀಡದೆ ಸತಾಯಿಸುತ್ತಿದ್ದಾರೆ ಎಂದು ಸಮಸ್ಯೆ ಕೇಳಿ ಬಂದಿದೆ, ನೀವು ಅಥವಾ ನಿಮ್ಮ ಬ್ಯಾಂಕ್ ಕೆಲವು ರೈತರಿಗೆ ಸಾಲ ವಿಸ್ತರಣೆಗೆ ತಡೆ ನೀಡಿರುವುದು ನಿಜವೇ? ರೈತರ ಪತ್ತ ನೀಡುವ ಬಗ್ಗೆ ಇಂತಹ ಕೊಳಕು ರಾಜಕೀಯ ಮಾಡೋದು ಒಳ್ಳೇದು ಅಂತ ಅನ್ನಿಸುತ್ತಿದೆಯೇ? ಈ ಬಗ್ಗೆ ಖಾನಾಪುರದ ಜನಪ್ರತಿನಿಧಿಗಳು ಮೌನವಾಗಿದ್ದಾರೆ ಏಕೆ, ಬಿಜೆಪಿ ಸೇರಿದ್ದಾರೆ ಆದರೆ ಏನೂ ಅವರು ಆಟ ಬಿಜೆಪಿಯಲ್ಲಿ ನಡೆಯುವುದಿಲ್ಲವೇ? ಅಥವಾ ಅವರೂ ಈ ಕೀಳುಮಟ್ಟದ ರಾಜಕಾರಣವನ್ನು ಬೆಂಬಲಿಸುತ್ತಿದ್ದಾರೇಯೇ?
ಕತ್ತಿ ಸರ್ ನಿಮ್ಮ ಡಿಸಿಸಿ ಬ್ಯಾಂಕ್ ನಲ್ಲಿ ನಮ್ಮ ಖಾನಾಪುರ ತಾಲೂಕಿನ ಯುವಕರಿಗೆ ಕೆಲಸ ಕೊಡಿಸಬೇಕಾಗಿ ವಿನಂತಿ, ಹಾಗೂ ಸಾಲ ಮಂಜೂರಾತಿ ಅಥವಾ ಸಾಲ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೆಲ ರೈತರ ಕುಂದುಕೊರತೆಗಳನ್ನು ನಿವಾರಿಸಿ, ಕೇವಲ ಉದ್ಘಾಟನೆ ಸಲುವಾಗಿ ಖಾನಾಪುರಕ್ಕೆ ಆಗಮಿಸಿ ಯುವಕರಿಗೆ ಮತ್ತು ರೈತರಿಗೆ ಆಗಿರುವ ಅನ್ಯಾಯವನ್ನು ಹೋಗಲಾಡಿಸದೆ ಮರಳಿ ಹೋಗುವುದು ಒಳ್ಳೆಯದಲ್ಲ..
ಇನ್ನು ಖಾನಾಪುರ ತಾಲೂಕಿನ ಬಗ್ಗೆ ಮಾತನಾಡುವುದಾದರೆ ಡಿಸಿಸಿ ಬ್ಯಾಂಕ್ ಒಂದು ರಾಜಕೀಯದ ಅಡ್ಡಾ ಆಗಿದೆಯೇ? ಬಡ ರೈತರಿಗೆ ಬ್ಯಾಂಕ್ ಕಿರುಕುಳ ನೀಡುವುದು ಬ್ಯಾಂಕಿನ ಕೆಲಸವಲ್ಲ..? ಅದೇ ತಾಲೂಕಿನ (ಖಾನಾಪುರ) ಯುವಕರನ್ನು ಕೆಲಸದಿಂದ ದೂರವಿಡುವುದು ಸರಿಯಲ್ಲ.
“ಎಲ್ಲರೂ ಹೇಳ್ತಾರೆ ಕತ್ತಿ ಸಾಹೇಬರು ಬ್ಯಾಂಕ್ ಚೆನ್ನಾಗಿ ನಡೆಸ್ತಾರೆ ಅಂತ, ಹಾಗಾದರೆ ಖಾನಾಪುರಕ್ಕೆ ಮಾತ್ರ ಯಾಕೆ ಅನ್ಯಾಯ”? ಈ ಬಗ್ಗೆ ಮಾನ್ಯ ಶಾಸಕರು ಏನು ಹೇಳುತ್ತಾರೆ? ಅಥವಾ ಖಾನಾಪುರ ತಾಲೂಕಿಗೆ ಆಗಿರುವ ಅನ್ಯಾಯ ನೋಡಿಯೂ ನೋಡದಂತೆ ಕೈಕಟ್ಟಿ ಕುಳಿತುಕೊಳ್ಳುವರೇ ನೋಡೊಣ..?
🚩 ಜೈ ಖಾನಾಪುರ 🚩



