ಸುದ್ಧಿ
ಚುನಾವಣಾಪೂರ್ವ ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆ ಈಡೆರಿಸಲು ಸಾರಿಗೆ ಸಚಿವರಿಗೆ ಮನವಿ.
ಆತ್ಮೀಯ ಸಾರಿಗೆ ಸಹೋದರರೇ.
ಚುನಾವಣಾಪೂರ್ವ ಸರ್ಕಾರ ನೀಡಿರುವ ಪ್ರಣಾಳಿಕೆ ಭರವಸೆಯಂತೆ ಸಾರಿಗೆ ನೌಕರರಿಗೂ, ಸರ್ಕಾರಿ ನೌಕರರಿಗೆ ಇರುವ ಸರಿ ಸಮಾನ ವೇತನ ಮತ್ತು ಸವಲತ್ತುಗಳನ್ನು ನೀಡಲು ಹಾಗೂ ಇತರೆ ಸಮಸ್ಯೆಗಳ ನಿವಾರಣೆಗೆ ಸನ್ಮಾನ್ಯ. ಶ್ರೀ. ರಾಮಲಿಂಗಾ ರೆಡ್ಡಿ, ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘಟನೆಗಳ ಒಕ್ಕೂಟದ ಜೊತೆ ಮಾತುಕತೆ ಮಾಡಲು ಸಭೆ ಕರೆಯಬೇಕೆಂದು ಮನವಿ ಪತ್ರ ಸಲ್ಲಿಸಲಾಗಿದೆ. ಸನ್ಮಾನ್ಯ ಸಾರಿಗೆ ಸಚಿವರು, ಮಾನ್ಯ ವ್ಯವಸ್ಥಾಪಕ ನಿರ್ದೇಶಕರು, ಕೆಎಸ್ಆರ್ಟಿಸಿ ರವರಿಗೆ ಮೂರರಿಂದ ನಾಲ್ಕು ದಿನಗಳ ಒಳಗೆ ಸಭೆ ಕರೆಯಬೇಕೆಂದು ಷರ ಬರೆದಿರುವ ಪತ್ರಗಳು. ಎಲ್ಲಾ ನಮ್ಮ ನೌಕರರಿಗೆ ತಲುಪುವಂತೆ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ಅಲ್ಲಿ ತಿಳಿಸಿ.





