ಸುದ್ಧಿ

ಬೆಳಗಾಂವಿ ಜಿಲ್ಲೆಯ ಖಾನಾಪುರ ಅರಣ್ಯ ಇಲಾಖೆಯ ಈ ದ್ವಂದ್ವ ನೀತಿ…

ಖಾನಾಪುರ ಅರಣ್ಯ ಇಲಾಖೆಯ ಈ ದ್ವಂದ್ವ ನೀತಿ ಹೇಗಾಗಿದೆ ಎಂದರೆ ಕಳ್ಳನ ಮನಸ್ಸು ಹುಳಹುಳ್ಳಗೆ ಎಂಬಂತೆ “ಕಳ್ಳರನ್ನ ಬಿಟ್ಟು ಏನೂ ತಪ್ಪು ಮಾಡಿದವರಿಗೆ ಶಿಕ್ಷೆ” ವಿಧಿಸಿದ ಹಾಗೆ ಆಗಿದೆ ಈ ನಮ್ಮ ಖಾನಾಪುರ ಅರಣ್ಯ ಇಲಾಖೆಯ ಪರಿಸ್ಥಿತಿ…

ಅಟ್ರಾಸಿಟಿ ಕೇಸ್ ಹಾಕುತ್ತೇನೆ ಎಂದು ಬೇದರಿಸದವರಿಗೆ ರಾಜಾರೋಷವಾಗಿ ಸ್ವತಂತ್ರವಾಗಿ ತಿರುಗಾಡಲು ಬಿಡುತ್ತಾರೆ…
ಒಬ್ಬ ಖಾಕಿಯಿಂದ ಇನ್ನೊಬ್ಬ ಖಾಕಿಯ ಮೇಲೆ ಎಷ್ಟು ಒತ್ತಡವಿದೆ ಎಂಬುದನ್ನು ನಾವಿಲ್ಲಿ ನೋಡಬಹುದು, ಒಂದು ಕನ್ನಡದಲ್ಲಿ ಗಾದೆ ಮಾತು ಇದೆ ಇದ್ದೋರಿಬ್ಬರಲ್ಲಿ ಕದ್ದೋರ್ಯಾರು.. ??

ಅರಣ್ಯ ಮದ್ಯದಲ್ಲಿ ರಸ್ತೆ ಮಾಡಿದ ಜೆಸಿಬಿ ವಾಹನ ತರಾತುರಿಯಲ್ಲಿ ಪರಾರಿಯಾಗಿದೆ, ಹಾಗೆ ಜೆಸಿಬಿ ವಿರುದ್ಧ ಪ್ರಕರಣ ದಾಖಲಾಗಿಲ್ಲ, ತನಿಖೆ ಕೂಡ ಇಲ್ಲ ತಮ್ಮ ಸುಪರ್ದಿಗೆ ತೆಗೆದುಕೊಂಡಂತಹ ಜೆಸಿಬಿ ಸಹ ಬಿಟ್ಟಿದ್ದಾರಾ..??

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಮರಗಳನ್ನು ಕಡಿದವರೂ ಪರಾರಿಯಾಗಿದ್ದಾರೆ, ಮತ್ತು ಅವರ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ, ತನಿಖೆ ಸಹ ಇಲ್ಲ….?

ಅರಣ್ಯ ಇಲಾಖೆಯ ಆರ್‌ಎಫ್ ಕಲ್ಲನ್ನು ಕಿತ್ತು ಎಸೆದವರು ಸಹ ಪರಾರಿಯಾಗಿದ್ದಾರೆ…

  ಆರ್‌ಎಫ್‌ಒ ಅವರು ಎಸಿಎಫ್ ಅವರ ಮೂಗಿನ ಮೇಲೆ ಬೆಣ್ಣೆ ಒರುಸುವುದು ಹಾಗೆ ಎಸಿಎಫ್ ಅವರು ಆರ್‌ಎಫ್‌ಒ ಅವರ ಮೂಗಿನ ಮೇಲೆ ಬೆಣ್ಣೆ ಒರುಸುವುದು, ಹಾಗಾದರೆ ಈ ಬೆಣ್ಣೆ ಕದ್ದವರು ಯಾರು ಮತ್ತು ತಿಂದವರು ಯಾರು..?? ಈ ವಿಧಾನ ಸರಿಯಿಲ್ಲ.... 

ಅಪರಾಧ ನಡೆದ ದಿನಾಂಕ ಮತ್ತು ದಾಖಲಾದ ದಿನಾಂಕದ ನಡುವೆ ಎಷ್ಟು ದಿನಗಳ ಅಂತರವಿದೆ..??? ಅವರಿಗೆ ಉದ್ದೇಶಪೂರ್ವಕವಾಗಿ ಸಾಕ್ಷಿ ನಾಶಪಡಿಸಲು ಸಮಯ ನೀಡಿದರಾ..?? ನೀಡಿದರೆ ಏಕೆ ಸಮಯ ನೀಡಿದರು?

 ಸ್ವಲ್ಪ ದಿನಗಳ ಹಿಂದೆ ಕಾನ್ಫರೆನ್ಸ್ ಕರೆಯಲ್ಲಿ ಈ ಪ್ರಕರಣ ಬಗ್ಗೆ ಯಾರು ಯಾರು ಮಾತನಾಡಿದ್ದಾರೆ..???ಕಾನ್ಫರೆನ್ಸ್ ಕರೆ ಆದ ನಂತರ ಎಸಿಎಫ್ ಖಾನಾಪುರ ಅವರು ಈ ಪ್ರಕರಣವನ್ನು ಏಕೆ ತಡೆದರು..??? ಆ ಸಮಯದಲ್ಲಿ ಏಕೆ ಪ್ರಕರಣ ದಾಖಲಿಸಿಲ್ಲ..??? 

ಸಾಗುವಾನಿ ಮತ್ತು ಸೀಸಂ ಮರಗಳನ್ನು ಕಡೆದಿದ್ದು ಹಾಗಿದ್ದಲ್ಲಿ ಎಫ್‌ಐಆರ್‌ನಲ್ಲಿ ಏಕೆ ಮರ ಕಡೆದ ಬಗ್ಗೆ ಉಲ್ಲೇಖವಿಲ್ಲ..??? ಅಪರಾಧಿಗಳಿಗೆ ಅನುಮಾನದ ಲಾಭವೇ? ಇದರ ಬಗ್ಗೆ ಸ್ಪಷ್ಟವಾದ ಉತ್ತರವನ್ನು ಎಸಿಎಫ್ ಖಾನಾಪುರ ಅವರು ನೀಡಬೇಕು…

ಕಾನೂನು ಬಾಹಿರವಾಗಿ ಮರಗಳನ್ನು ಕಡಿದು ವಿಲೇವಾರಿ ಮಾಡಲು ಅರಣ್ಯ ಇಲಾಖೆ ಅವಕಾಶ ನೀಡಿದೆಯೇ? 

  ಕಳೆದ ಆರು ತಿಂಗಳಿಂದ ಈ ಪ್ರಕರಣ ಬಗ್ಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿದ್ದರೂ ಎಸಿಎಫ್ ಖಾನಾಪುರ ಅವರು ಮೂಖ ಪ್ರೇಕ್ಷಕರಂತೆ ಏಕೆ ಕುಳಿತಿದ್ದಾರೆ? ಪ್ರಕರಣ ನಡೆದ ಸಂದರ್ಭದಲ್ಲಿಯೇ ಏಕೆ ಪ್ರಕರಣ ದಾಖಲಿಸಲಿಲ್ಲ?  ಗೋಲ್ಮಾಲ್? 

 ಖಾನಾಪುರ ತಾಲೂಕಿನ ಸಾಮಾನ್ಯ ರೈತರು ಅರಣ್ಯ ಪ್ರದೇಶದಲ್ಲಿನ ಮರಗಳನ್ನು ಅಥವಾ ತಮ್ಮ ಆಸ್ತಿಯಲ್ಲಿ ಬೆಳೆದ ಮರಿಗಳನ್ನು ಅನುಮತಿಯಿಲ್ಲದೆ ಕಡಿದಿದ್ದರೇ..? ಕಡೆದ ಕೆಲ ಹೊತ್ತಲ್ಲಿ ಎಸಿಎಫ್, ಆರ್‌ಎಫ್‌ಒ, ಫಾರೆಸ್ಟ್ ಗಾರ್ಡ್ ಆ ರೈತನ ಮನೆ ಅಥವಾ ಎಲ್ಲೆ ಅಡಗಿ ಕುಳಿತರು ಅವನ್ನು ಹುಡುಕಿ ತೆಗೆದು ಒಳ್ಳೆ ಒಳ್ಳೆ ಫೋಟೋ ತೆಗೆದು ಪೇಪರ್ ಗೆ ಕೊಡುತ್ತಾರೆ. ಆದರೆ ಶಿರೋಲಿ ಪ್ರಕರಣವು ಇದರ ತದ್ವಿರುದ್ಧವಾಗಿದೆ ಏಕೆಂದರೆ ಖಾಕಿಗೆ ಖಾಕಿ ಬೆಂಗಾವಲು ಆಗಿ ನಿಂತಿದೆಯೇ..???

ಆಶ್ಚರ್ಯ… ಮತ್ತು
ದುಃಖದ ಸಂಗತಿ ಇದಾಗಿದೆ….

🚩 ಜೈ ಖಾನಾಪುರ 🚩

Related Articles

Leave a Reply

Your email address will not be published. Required fields are marked *

Back to top button