ಕಾಂಗ್ರೆಸ್ ಬಹುಮತ ಗಳಿಸಿ ಡಾ. ಪರಮೇಶ್ವರವರು ಮುಖ್ಯಮಂತ್ರಿ ಆಗಬೇಕಾಗಿತ್ತು – ಮಾರಸಂದ್ರ ಮುನಿಯಪ್ಪ

ಬೆಂಗಳೂರು. ಗೃಹ ಸಚಿವ ಡಾ. ಪರಮೇಶ್ವರ್ ಅವರ ಮನೆ ಮತ್ತು ವಿದ್ಯಾಸಂಸ್ಥೆಗಳ ಮೇಲೆ ಇ.ಡಿ ದಾಳಿಯನ್ನು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಖಂಡಿಸುತ್ತದೆ.
2013ರಲ್ಲಿ ಡಾ. ಪರಮೇಶ್ವರ್ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಬಹುಮತ ಗಳಿಸಿ ಡಾ. ಪರಮೇಶ್ವರವರು ಮುಖ್ಯಮಂತ್ರಿ ಆಗಬೇಕಾಗಿತ್ತು. ಆದರೆ ಕಾಂಗ್ರೆಸ್ ಹೈ ಕಮಾಂಡ್ ಆದೇಶವನ್ನು ಗೌರವಿಸಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟರು. ಮತ್ತೆ 2023 ರಲ್ಲಿ ಬಿಜೆಪಿಯವರು ಭಾರತ ಸಂವಿಧಾನವನ್ನು ಬದಲಾವಣೆ ಮಾಡುವರೆಂಬ ಸುದ್ದಿ ವ್ಯಾಪಕವಾಗಿ ಹಬ್ಬಿದ್ದರಿಂದ ರಾಜ್ಯದ ಸುಮಾರು 90% ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಿದರು. ಈಗಲೂ ಡಾ. ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗುವರೆಂದು ಎಸ್ ಸಿ /ಎಸ್ ಟಿ ನಿರೀಕ್ಷಿಸಿದ್ದರು. ಆದರೆ ಮತ್ತೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರು. ಆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ತಾವು ಮುಖ್ಯಮಂತ್ರಿ ಆಗಲೇಬೇಕೆಂದು ಪಟ್ಟು ಹಿಡಿದರು. ಆದರೆ ಎಸ್ ಸಿ ಎಸ್ ಟಿ, ಒಬಿಸಿ ಮೈನಾರಿಟಿ ಎಂಎಲ್‌ಎಗಳು ಸಿದ್ದರಾಮಯ್ಯನವರ ಪರವಾಗಿ ಇದ್ದ ಕಾರಣ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲಿಲ್ಲ. ಆದರೇ ರಾಜ್ಯದಲ್ಲಿ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬದಲಾವಣೆ ಆಗಬಹುದೇ ಎಂಬ ಸ್ಥಿತಿ ನಿರ್ಮಾಣ ಆಗಿತ್ತು. ಅಂತ ಸಂದರ್ಭದಲ್ಲಿ ಅತ್ಯಂತ ಅರ್ಹವಾದ, ಯಾವುದೇ ಹಗರಣಗಳು ಇಲ್ಲದ ಕಾಂಗ್ರೆಸ್ ನ ಹಿರಿಯ ಮುಖಂಡರು ಡಾ. ಪರಮೇಶ್ವರವರು ಮುಖ್ಯಮಂತ್ರಿ ಆಗುವ ಅವಕಾಶ ಇತ್ತು. ಡಾ. ಪರಮೇಶ್ವರ ಅವರಿಗೆ ಈ ಸ್ಥಾನ ತಪ್ಪಿಸಲು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣು ಇಟ್ಟಿರುವ ಡಿಕೆ ಶಿವಕುಮಾರ್ ಅವರು ಬಿಜೆಪಿ ಮುಖಂಡರ ಜೊತೆ ಒಳ ಒಪ್ಪಂದ ಮಾಡಿಕೊಂಡು ಇಡಿ ದಾಳಿ ಮಾಡಿಸಿದ್ದಾರೆ.
ಎಸ್ ಸಿ ವಿದ್ಯಾಸಂಸ್ಥೆ ಮೇಲೆ ದಾಳಿ ಎಕೆ? ಸಿದ್ದಾರ್ಥ ಎಜುಕೇಶನ್ ಇನ್ಸಿಟ್ಯೂಷನ್ ಅಡಿಯಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಾಸಂಸ್ಥೆಗಳನ್ನು ಡಾ. ಪರಮೇಶ್ವರ ಅವರ ತಂದೆ ಗಂಗಾಧರಯ್ಯ ಅವರು ಸ್ಥಾಪಿಸಿ ಬೆಳೆಸಿದ ವಿದ್ಯಾ ಸಂಸ್ಥೆಗಳಾಗಿವೆ. ಆದರೇ ಲಿಂಗಾಯತ ಮತ್ತು ಒಕ್ಕಲಿಗರ ವಿದ್ಯಾ ಸಂಸ್ಥೆಗಳ ಮೇಲೆ ಇ ಡಿ ದಾಳಿ ಏಕಿಲ್ಲ? ಕಾರಣ ದಲಿತರ ನಾಯಕತ್ವವನ್ನು ದಮನ ಮಾಡುವ ಉದ್ದೇಶದಿಂದ ಇ ಡಿ ದಾಳಿ ನಡೆಸಲಾಗಿದೆ.
ಮುಖ್ಯವಾಗಿ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಬಹುದಿನದ ಒತ್ತಾಯವನ್ನು ಪರಿಗಣಿಸಿ ಡಾ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಕಾಂಗ್ರೆಸ್ ನ ಎಲ್ಲಾ ಮುಖಂಡರು ವಿಶೇಷವಾಗಿ ಎಸ್ ಸಿ ಮತ್ತು ಎಸ್ ಟಿ ಶಾಸಕರು, ಎಂ.ಪಿ ಗಳು ಕಾಂಗ್ರೆಸ್ ಹೈಕಮಾಂಡ್ ಅನ್ನು ಒತ್ತಾಯಿಸಬೇಕೆಂದು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಕೋರುತ್ತದೆ.
ಮಾರಸಂದ್ರ ಮುನಿಯ, ರಾಜ್ಯಾಧ್ಯಕ್ಷರು, ವರದಿ. ಮಂಜುಳಾ ರೆಡ್ಡಿ.



